• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಡಿಸೆಂಬರ್ 2019 ರ ವೇಳೆಗೇ ಯುಎಸ್‌ನಲ್ಲಿ ಕರೋನ ವೈರಸ್ ಪತ್ತೆಯಾಗಿತ್ತು : ಹೊಸ ಅಧ್ಯಯನ

ಫಾತಿಮಾ by ಫಾತಿಮಾ
June 24, 2021
in ವಿದೇಶ
0
ಡಿಸೆಂಬರ್ 2019 ರ ವೇಳೆಗೇ ಯುಎಸ್‌ನಲ್ಲಿ ಕರೋನ ವೈರಸ್ ಪತ್ತೆಯಾಗಿತ್ತು : ಹೊಸ ಅಧ್ಯಯನ
Share on WhatsAppShare on FacebookShare on Telegram

ಒಂದೂವರೆ ವರ್ಷಗಳಿಂದ ಜಗತ್ತನ್ನು ತುದಿಗಾಲಲ್ಲಿ ನಿಲ್ಲಿಸಿದ ಕರೋನಾ ವೈರಸ್ಸಿನ ಉಗಮ ಮತ್ತು ಪ್ರಸರಣದ ಬಗ್ಗೆ ದಿನೇ ದಿನೇ ಹೊಸ ಥಿಯರಿಗಳು ಹುಟ್ಟಿಕೊಳ್ಳುತ್ತಿದ್ದು, ಹೊಸ ವಿಶ್ಲೇಷಣೆಯೊಂದು 2019ರ ಡಿಸೆಂಬರ್‌ನಲ್ಲೇ ಈ ವೈರಸ್ ಅಮೆರಿಕ ಪ್ರವೇಶಿಸಿರುವುದನ್ನು ಹೇಳುತ್ತದೆ. 2020ರ ಆರಂಭದಲ್ಲಿ ತೆಗೆದ 24,000 ಅಮೆರಿಕನ್ನರ ರಕ್ತದ ಮಾದರಿಗಳ ವಿಶ್ಲೇಷಣೆ ನಡೆಸಿದ ನಂತರ ಈ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

ADVERTISEMENT

ಅಂದರೆ ಅಮೆರಿಕದ ಆರೋಗ್ಯ ಅಧಿಕಾರಿಗಳು ಕೋವಿಡ್ ಪ್ರಕರಣವನ್ನು ಗುರುತಿಸಿದ ಒಂದು ವಾರಕ್ಕಿಂತ ಮೊದಲೇ ವೈರಸ್ ದೇಶವನ್ನು ಪ್ರವೇಶಿಸಿತ್ತು. ಆದರೆ ಈ ವಿಶ್ಲೇಷಣೆ ಖಚಿತತೆಯ ಬಗ್ಗೆ ಕೆಲವು ತಜ್ಞರು ಸಂಶಯ ವ್ಯಕ್ತಪಡಿಸುತ್ತಾರೆ. ಆದರೆ ಫೆಡರಲ್ ಆರೋಗ್ಯ ಅಧಿಕಾರಿಗಳು ಚೀನಾದಲ್ಲಿ ಹುಟ್ಟಿದ ಅಪಾಯಕಾರಿ ಹೊಸ ವೈರಸ್ ಬಗ್ಗೆ ಜಗತ್ತಿಗೆ ಅರಿವು ಮೂಡುವ ಮೊದಲೇ ಯುಎಸ್‌ನಲ್ಲಿ ಸಣ್ಣ ಸಂಖ್ಯೆಯ ಕೋವಿಡ್-19 ಸೋಂಕುಗಳು ಸಂಭವಿಸಿರಬಹುದು ಎನ್ನುತ್ತಾರೆ ಎಂದು ‘Clinical Infectious Diseases’ ಜರ್ನಲ್‌ನ ಆನ್‌ಲೈನ್‌ ಎಡಿಷನ್‌ನಲ್ಲಿ‌ ಈ ಅಧ್ಯಯನವನ್ನು ಮಂಗಳವಾರ ಪ್ರಕಟಿಸಿಲಾಗಿದೆ.

ಅಧ್ಯಯನಗಳು ಸಾಕಷ್ಟು ನಂಬಲರ್ಹವಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ನಟಾಲಿಯಾ ಥಾರ್ನ್ಬರ್ಗ್ ಹೇಳಿದ್ದಾರೆ. ನಮಗೆ ತಿಳಿದಿರುವುದಕ್ಕಿಂತ ಮುಂಚೆಯೇ ಇಲ್ಲಿ ಬಹಳ ಅಪರೂಪದ ಮತ್ತು ವಿರಳವಾದ ಪ್ರಕರಣಗಳು ಕಂಡುಬಂದವು. ಆದರೆ ಇದು ವ್ಯಾಪಕವಾಗಿರಲಿಲ್ಲ ಮತ್ತು ಫೆಬ್ರವರಿ ಅಂತ್ಯದವರೆಗೂ ವ್ಯಾಪಕವಾಗಿ ಹರಡಿರಲಿಲ್ಲ ಎನ್ನುತ್ತಾರೆ ಅವರು.

ಸಿಡಿಸಿ ನೇತೃತ್ವದ ಅಧ್ಯಯನವು 2020 ರ ಡಿಸೆಂಬರ್‌ನಲ್ಲಿ ಅಮೆರಿಕನ್ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಸಂಗ್ರಹವಾದ ರಕ್ತದಿಂದ 7,000 ಮಾದರಿಗಳನ್ನು ವಿಶ್ಲೇಷಿಸಿ ಡಿಸೆಂಬರ್ 2019 ರ ಮಧ್ಯಭಾಗದಲ್ಲಿ ಕೆಲವು ಅಮೆರಿಕನ್ನರಿಗೆ ವೈರಸ್ ಸೋಂಕು ತಗುಲಿದೆಯೆಂದು ದೃಢಪಡಿಸಿದೆ.

ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧಕರನ್ನು ಒಳಗೊಂಡ ತಂಡವು ಈ ಅಧ್ಯಯನದ ನೇತೃತ್ವವನ್ನು ವಹಿಸಿಕೊಂಡಿತ್ತು. ದೀರ್ಘಾವಧಿಯ ಅಧ್ಯಯನದ ಭಾಗವಾಗಿ 2020 ರ ಮೊದಲ ಮೂರು ತಿಂಗಳಲ್ಲಿ ಸಂಗ್ರಹಿಸಿದ್ದ 24,000 ಕ್ಕೂ ಹೆಚ್ಚು ಜನರ ರಕ್ತದ ಮಾದರಿಗಳನ್ನು ವಿಶ್ಲೇಷಿಸಲಾಗಿದೆ.

2019 ರ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ ಕರೋನವೈರಸ್ ಹೊರಹೊಮ್ಮಿತ್ತು. ಇದುವರೆಗೆ ಅಧಿಕೃತವಾಗಿ, ಯುಎಸ್‌ನ ಮೊದಲ ಸೋಂಕೆಂದು ಜನವರಿ 15 ರಂದು ವಾಷಿಂಗ್ಟನ್‌ಗೆ ವುಹಾನ್ ನಿಂದ ಮರಳಿದ ವ್ಯಕ್ತಿಯನ್ನು ಗುರುತಿಸಲಾಗುತ್ತಿತ್ತು. ಮತ್ತು ಅವರು ಜನವರಿ 19 ರಂದು ವೈದ್ಯಕೀಯ ಸಹಾಯವನ್ನು ಪಡೆದಿದ್ದರು. ಹೊಸ ಅಧ್ಯಯನವು ಅದಕ್ಕೂ ಮೊದಲೇ ಅಮೆರಿಕದಲ್ಲಿ ಸೋಂಕು ಪತ್ತೆಯಾಗಿತ್ತು ಎನ್ನುತ್ತಿದೆ. ಭಾರತದಲ್ಲಿ ಅಧಿಕೃತವಾಗಿ ಮೊದಲ ಕೇಸ್ ಪತ್ತೆಯಾದದ್ದು ಜನವರಿ 27ರಂದು. ಆದರೆ ಅಮೆರಿಕದ ಹೊಸ ಅಧ್ಯಯನದ ಫಲಿತಾಂಶವು ಭಾರತದಲ್ಲೂ ಮೊದಲ ಕೇಸಿನ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದೆ.

Previous Post

ಶಿವಮೊಗ್ಗ ಏರ್‌ಪೋರ್ಟ್‌ಗೆ ಕಮಲದ ವಿನ್ಯಾಸ: BJP ತನ್ನ ಚಿಹ್ನೆ ಕಳೆದುಕೊಳ್ಳಬೇಕಾದೀತು – ಬ್ರಿಜೇಶ್‌ ಕಾಳಪ್ಪ ಎಚ್ಚರಿಕೆ

Next Post

ಯಶವಂತಪುರ, ಚನ್ನಸಂದ್ರ ಹಾಗೂ ಬೈಯಪ್ಪನಹಳ್ಳಿ, ಹೊಸೂರು ದ್ವಿಪಥ ಕಾಮಾಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ BS ಯಡಿಯೂರಪ್ಪ

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ವಿದೇಶ

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

by ಪ್ರತಿಧ್ವನಿ
April 27, 2026
0

 ಅಮೆರಿಕದಲ್ಲಿ H-1B ವೀಸಾ ನೀತಿಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಶಾಸಕರ ಗುಂಪೊಂದು ಹೊಸ ಮಸೂದೆಯನ್ನು ಮಂಡಿಸಿದ್ದು, ಇದು ವಿದೇಶಿ ಉದ್ಯೋಗಿಗಳ, ವಿಶೇಷವಾಗಿ ಭಾರತೀಯರ ನಡುವೆ ಆತಂಕವನ್ನು ಹೆಚ್ಚಿಸಿದೆ.ಅರಿಜೋನಾ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
Next Post
ಯಶವಂತಪುರ, ಚನ್ನಸಂದ್ರ ಹಾಗೂ ಬೈಯಪ್ಪನಹಳ್ಳಿ, ಹೊಸೂರು ದ್ವಿಪಥ ಕಾಮಾಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ BS ಯಡಿಯೂರಪ್ಪ

ಯಶವಂತಪುರ, ಚನ್ನಸಂದ್ರ ಹಾಗೂ ಬೈಯಪ್ಪನಹಳ್ಳಿ, ಹೊಸೂರು ದ್ವಿಪಥ ಕಾಮಾಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ BS ಯಡಿಯೂರಪ್ಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada