• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನ್ ಗೋಳಾಟ: ವಾಪಾಸ್ ಖರೀದಿಸುವಂತೆ ಸರ್ಕಾರಕ್ಕೆ ಮನವಿ.!!

ಕರ್ಣ by ಕರ್ಣ
August 19, 2021
in ಕರ್ನಾಟಕ
0
ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನ್ ಗೋಳಾಟ: ವಾಪಾಸ್ ಖರೀದಿಸುವಂತೆ ಸರ್ಕಾರಕ್ಕೆ ಮನವಿ.!!
Share on WhatsAppShare on FacebookShare on Telegram

ಎರಡನೇ ಅಲೆಯ ಸಂಧರ್ಬದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸರ್ಕಾರಿ ಸೇರಿದಂತೆ ಖಾಸಗಿ‌ ಆಸ್ಪತ್ರೆಗಳ ಮುಂದೆ ಉದ್ದುದ್ದ ಸಾಲುಗಳು ಸಾಮಾನ್ಯವಾಗಿತ್ತು. ಆದರೆ ಅದ್ಯಾವಾಗ ಸರ್ಕಾರ ಎಲ್ಲರಿಗೂ ಲಸಿಕೆ ಉಚಿತ ಎಂದು ಘೋಷಿಸಿಕೊಂಡಿತೋ ಆಗ ಖಾಸಗಿ ಆಸ್ಪತ್ರೆಗಳ ಮುಂದೆ ಇದ್ದಿದ್ದ ಕ್ಯೂ ಇದ್ದಕ್ಕಿದ್ದ ಹಾಗೆ ಮಾಯವಾಗಲು ಶುರುವಾಯ್ತು. ಎಲ್ಲರೂ ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತ ಲಸಿಕೆ ಹಾಕಿಸಿಕೊಳ್ಳಲು ಮುಂದಾದರು. ಪರಿಣಾಮ ಸದ್ಯ, ಖಾಸಗಿ ಆಸ್ಪತ್ರೆಗಳ ಕೂಡಿಟ್ಟ ಲಸಿಕೆ ಶೇಖರಣೆ ಖರ್ಚಾಗದೆ ಆಸ್ಪತ್ರೆಗಳು ಗೋಳಾಡುತ್ತಿವೆ.

ADVERTISEMENT

ಉಚಿತ ಲಸಿಕೆ ಸಿಗುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆ ಕಡೆ ಮುಖಮಾಡದ ಮಂದಿ.!!

ತಜ್ಞರ ಅಭಿಪ್ರಾಯ ಪ್ರಕಾರ ಇಷ್ಟೊತ್ತಿಗಾಗಲೇ ಕೊರೋನಾ ಮೂರನೇ ಅಲೆ ಅಪ್ಪಳಿಸ ಬೇಕಿತ್ತು. ಆದರೆ ಅದೃಷ್ಟವಶಾತ್ ಪರಿಸ್ಥಿತಿ ಹತೋಟಿಯಲ್ಲಿದೆ. ಇದರ ನಡುವೆ ಕೊರೋನಾದಿಂದ ಪರಾಗಲಿರುವ ದೊಡ್ಡ ಅಸ್ತ್ರ ಎಂದರೆ ಅದು ಲಸಿಕೆ ಮಾತ್ರ. ಹೀಗಾಗಿ ಲಸಿಕೆಗೂ ಬೇಡಿಕೆ ಹೆಚ್ಚಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಶೇಖರಣೆ ಮಾಡಿಟ್ಟುಕೊಂಡು ಜನರು ಬಾರದೆ ಗೋಳಾಡುತ್ತಿವೆ. ಮೊದಲು ಲಸಿಕೆ ಉಚಿತವಾಗಿ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಮಣಿದ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ಘೋಷಿಸಿಕೊಂಡಿತು. ಹೀಗಾಗಿ ಶೇ. 75 ಸರ್ಕಾರಿ ಆಸ್ಪತ್ರೆಗಳಿಗೆ ಶೇ. 25 ರಷ್ಟು ಲಸಿಕೆ ಖಾಸಗಿ ಆಸ್ಪತ್ರೆಗೆ ಲಸಿಕೆಯನ್ನು ಕೇಂದ್ರ ಸರಬರಾಜು ಮಾಡುತ್ತಿದೆ. ಶೇ.‌25 ರಷ್ಟು ಲಸಿಕೆ ಮಾತ್ರ ಖಾಸಗಿ ಕ್ಚೇತ್ರಕ್ಕೆ ಸಿಗುತ್ತಿದ್ದರೂ ಅದನ್ನು ಖರ್ಚು ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಚಿಂತೆಗೆ ಬಿದ್ದಿದೆ. ಇದಕ್ಕೆ ಕಾರಣ ಸರ್ಕಾರ ಲಸಿಕೆ‌ ಉಚಿತವಾಗಿ ಕೊಡುತ್ತಿರುವ ಹಿನ್ನೆಲೆ ಜನರು ಸರ್ಕಾರಿ ಆಸ್ಪತ್ರೆಯಲ್ಲೇ ಉಚಿತವಾಗಿ ಲಸಿಕೆ ಪಡೆದುಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. 

ತಮ್ಮ‌ ಬಳಿ ಇರುವ ಲಸಿಕೆ ವಾಪಾಸ್ ತೆಗೆದುಕೊಳ್ಳಿ ಎಂದು ಖಾಸಗಿ ಆಸ್ಪತ್ರೆಗಳ ದುಂಬಾಲು.!! 

ಹೌದು, ಈಗ 25% ಲಸಿಕೆ ಮಾತ್ರ ಇದ್ರೂ ಜನರು ಬರದೆ ಖಾಸಗಿ ಆಸ್ಪತ್ರೆಗಳಿಗೆ ತಳಮಳ ಶುರುವಾಗಿದೆ. ಮೂರನೇ ಅಲೆ ಮನಗಂಡು ಸರ್ಕಾರಕ್ಕೆ 15 ಲಕ್ಷ ಡೋಸ್‌ಗೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿತ್ತು. ಆದರೆ ಜನರು ಉಚಿತವಾಗಿ ಲಸಿಕೆ ಪಡೆಯಲು ಮುಂದಾಗಿರುವ ಹಿನ್ನೆಲೆ ಅರ್ಧಕ್ಕರ್ಧ ಲಸಿಕೆ‌ ಅಂದರೆ 7.50 ಲಕ್ಷ ಡೋಸ್ ಮಾತ್ರ ಸಾಕು ಎಂದು ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಹೇಳಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್‌ಗೆ  630 ರೂ ಹಾಗೂ ಸೇವಾ ಶುಲ್ಕ 150 ಸೇರಿಸಿ ಪ್ರತಿ‌ ಡೋಸ್ ಗೆ 780 ರೂ. ಪಡೆದುಕೊಳ್ಳುತ್ತಿದೆ. ಇದೇ ರೀತಿ ಕೋವ್ಯಾಕ್ಸಿನ್‌ಗೆ 1260 ರೂ. ಹಾಗೂ ಸೇವಾ ಶುಲ್ಕ 150 ಸೇರಿಸಿ 1,410 ರೂ.ಅನ್ನು ಜನರಿದಂ ಪಡೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಕೋವಿಶೀಲ್ಡ್‌ಗೆ 630 ಮತ್ತು ಕೋವ್ಯಾಕ್ಸಿನ್‌ಗೆ 1260 ರೂಪಾಯಿಗೆ ಖಾಸಗಿ ಕ್ಷೇತ್ರಕ್ಕೆ ಮಾರಾಟ ಮಾಡುತ್ತಿದೆ.‌ ಆದರೀಗ ಸರ್ಕಾರದಿಂದ ಕೊಂಡುಕೊಂಡು ಕೂಡಿಟ್ಟಿರುವ ಲಸಿಕೆ ಖರ್ಚಾಗದೆ ಖಾಸಗಿ ಆಸ್ಪತ್ರೆಗಳು ಕಂಗಾಲಾಗಿ ಕೂತಿದೆ. 

ಖಾಸಗಿ ಆಸ್ಪತ್ರೆಗಳಿಂದ ವ್ಯಾಕ್ಸಿನ್ ಖರೀದಿಸಿ ಉಚಿತವಾಗಿ ನೀಡಲು ಬಿಬಿಎಂಪಿ ಚಿಂತನೆ.!!

ಹೀಗಾಗಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಫನಾ ಅಧ್ಯಕ್ಷ ಮನವಿ ಮಾಡಿಕೊಂಡಿದೆ. ಕನಿಷ್ಠ ಪಕ್ಷ ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಸರ್ಕಾರವೇ ವಾಪಾಸ್ ಖರೀದಿಸಿ ಸೇವಾ ಶುಲ್ಕ ಮಾತ್ರ ತಮಗೆ ಪಾವತಿಸಿದರೆ ಸಾಕು ಎಂಬ ನಿಲುವಿಗೆ ಖಾಸಗಿ ಆಸ್ಪತ್ರೆಗಳ ಬಂದಿದೆ. ಹೀಗಾಗಿ ಆದಿಯಾಗಿ ಬೆಂಗಳೂರು ನಗರದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕೆಯನ್ನು ವಾಪಾಸ್ ಖರೀದಿಸಲು ಬಿಬಿಎಂಪಿ ಪ್ಲ್ಯಾನ್ ಮಾಡಿಕೊಂಡಿದೆ. ಸರ್ಕಾರದ ಖರ್ಚಿನಲ್ಲಿ ಪುನಃ ಲಸಿಕೆ ಖರೀದಿಸುವುದು ಆಗುವ ಮಾತಲ್ಲ. ಹೀಗಾಗಿ ಸಿಎಸ್ಆರ್ ಫಂಡ್ ಬಂಡವಾಳ ಮಾಡಿಕೊಂಡು ಖಾಸಗಿ ಕ್ಷೇತ್ರದಲ್ಲಿರುವ ಲಸಿಕೆಯನ್ನು ಖರೀದಿಸಲು ಪಾಲಿಕೆ ಮುಂದಾಗಿದೆ. ಈ ಮೂಲಕ ಅದನ್ನೂ ಸೇವಾ ಶುಲ್ಕ ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಲಸಿಕೆ ಹಂಚಿಕೆ ಮಾಡುವ ಲೆಕ್ಕಾಚಾರ ಬಿಬಿಎಂಪಿಯದ್ದು. 

ಒಟ್ಟಾರೆಯಾಗಿ ಮೂರನೇ ಅಲೆ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆ‌ ಸಾವಧಾನವಾಗಿ ಉಚಿತ ಲಸಿಕೆ ಹಾಕಿಸಿಕೊಳ್ಳಲು ಜನರು ಮನಸ್ಸು ಮಾಡಿದ್ದಾರೆ. ಇದರಿಂದ ಲಸಿಕೆ ಕೂಡಿಟ್ಟು, ಮಾರಾಟ ಮಾಡಲಾಗದೆ ಖಾಸಗಿ ಆಸ್ಪತ್ರೆಗಳು ಕಂಗೆಟ್ಟು ಹೋಗಿವೆ. ಈಗ ಸರ್ಕಾರವೇ ಲಸಿಕೆ ಕೊಂಡುಕೊಳ್ಳಲಿ ಎಂದು ಖಾಸಗಿ ಆಸ್ಪತ್ರೆಗಳ ಮನವಿ ಮಾಡಿಕೊಳ್ಳುತ್ತಿದೆ. 

Tags: BJPcorona vaccineCovid 19Karnatakaಕರೋನಾಕೋವಿಡ್-19ಬಿಜೆಪಿ
Previous Post

ಪೆಟ್ರೋಲ್ ಬೆಲೆ ಇಳಿಸಲು ತೈಲ ಬಾಂಡ್ ಬಡ್ಡಿಯೇ ಅಡ್ಡಿಯಾಗಿದೆ ಎಂಬುದು ನಿಜವೇ?

Next Post

ಸಾಮ್ರಾಜ್ಯಶಾಹಿಯ ದಾಹವೂ ಮತಾಂಧತೆಯ ಅಸ್ತಿತ್ವವೂ

Related Posts

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್
Top Story

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

by ಪ್ರತಿಧ್ವನಿ
May 25, 2026
0

ಚೆನೈ : ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ನೀರಾವರಿ ಯೋಜನೆಗೆ ತಮಿಳುನಾಡಿನ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಇದರ ವಿರುದ್ಧ ನಿಲುವನ್ನು ಹೊಂದಿದ್ದವು, ಅದರಂತೆ...

Read moreDetails
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
Next Post
ಸಾಮ್ರಾಜ್ಯಶಾಹಿಯ ದಾಹವೂ ಮತಾಂಧತೆಯ ಅಸ್ತಿತ್ವವೂ

ಸಾಮ್ರಾಜ್ಯಶಾಹಿಯ ದಾಹವೂ ಮತಾಂಧತೆಯ ಅಸ್ತಿತ್ವವೂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada