ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಗಾರಿದ್ದಾರೆ.
ಮೋದಿ ಸರ್ಕಾರದ ಮೇಲೆ ದಾಳಿ ಮಾಡಿದ ಅವರು, ಹಾಸಿಗೆಗಳು, ಆಮ್ಲಜನಕ, ವೆಂಟಿಲೇಟರ್‌ಗಳ ಕೊರತೆ ಇದೆ ಎಂಬ ಬಗ್ಗೆ ದೇಶದಾದ್ಯಂತ ವರದಿಗಳು ಬರುತ್ತಿವೆ, ಮೊದಲ ಅಲೆ ಮತ್ತು ಎರಡನೇ ಅಲೆ ನಡುವೆ ನಾವು ಹಲವು ತಿಂಗಳುಗಳ ಕಾಲ ತಯಾರಿ ನಡೆಸಿದ್ದರೂ ಏಕೆ ಕೊರತೆಯಾಗುತ್ತಿದೆ. ಭಾರತದ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ವಿಶ್ವದಲ್ಲೇ ಅತಿ ದೊಡ್ಡದಾಗಿದೆ ಆದರೆ ಇದನ್ನು ಸಾಗಿಸಲು ಯಾವುದೇ ಸೌಲಭ್ಯವಿಲ್ಲ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಆಕ್ಸಿಜನ್ ಲಭ್ಯವಿದ್ದರು ಅದನ್ನು ತಲುಪಿಸುವ ಜಾಗಕ್ಕೆ ಸರಿಯಾಗಿ ತಲುಪಿಸಲಿ ಸಾಧ್ಯವಾಗದೇ ಇರುವುದು ದೊಡ್ಡ ದುರಂತ. ಕಳೆದ 6 ತಿಂಗಳಲ್ಲಿ 1.1 ಮಿಲಿಯನ್ ರೆಮೆಡಿಸಿವಿನ್ ಲಸಿಕೆಯನ್ನು ಹೊರ ದೇಶಗಳಿಗೆ ರಫ್ತು ಮಾಡಿತ್ತು. ಇಂದು ನಮಗೆ ಆ ಲಸಿಕೆ ಕೊರತೆಯಾಗಿದೆ.
ಮೋದಿ ಸರ್ಕಾರ ಜನವರಿ ಮತ್ತು ಮಾರ್ಚ್ ತಿಂಗಳಲ್ಲಿ 6 ಕೋಟಿ ಕರೋನಾ ವೈರಸ್ ಲಸಿಕೆಗಳನ್ನು ರಫ್ತು ಮಾಡಿತ್ತು ಮತ್ತು ಅದೇ ಸಮಯದಲ್ಲಿ 3 ರಿಂದ 4 ಕೋಟಿ ಭಾರತೀಯರಿಗಷ್ಟೇ ಲಸಿಕೆಗಳನ್ನು ನೀಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೀವು ಭಾರತೀಯರಿಗೆ ಏಕೆ ಮೊದಲ ಆದ್ಯತೆ ನೀಡಲಿಲ್ಲ? ಈ ಸರ್ಕಾರ ಏನು ಮಾಡುತ್ತಿದೆ ಅರ್ಥವಾಗುತ್ತಿದೆಯೇ ಎಂಬ ಹಲವಾರು ವರದಿಗಳು ಎಲ್ಲೆಡೆ ಬರುತ್ತಿವೆ. ಶವಸಂಸ್ಕಾರದ ಘಟ್ಟಗಳಲ್ಲಿ ಜನಸಂದಣಿ ಇದೆ, ಜನರು ಕೂಪನ್‌ಗಳೊಂದಿಗೆ ಸಾಲಿನಲ್ಲಿ ನಿಂತಿದ್ದಾರೆ. ಈ ಪರಿಸ್ಥಿತಿಯಲ್ಲಿ, ನಾವು ಏನು ಮಾಡಬೇಕು, ಸರ್ಕಾರ ಏನು ಮಾಡಬೇಕಿತ್ತು ಏನು ಮಾಡುತ್ತಿದೆ ಎಂಬುದರ ಬಗ್ಗೆ ನಾವು ಯೋಚಿಸುತ್ತಿದ್ದೇವೆ ಎಂದು ಪ್ರಿಯಾಂಕಾ ಅವರು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೇಂದ್ರ ಹೊಂದಿರುವ ಎಲ್ಲಾ ಸಂಪನ್ಮೂಲಗಳನ್ನು ಇಟ್ಟುಕೊಂಡೆ ಕರೋನಾ ಯುದ್ದವನ್ನು ಸಮರ್ಪಕವಾಗಿ ಎದುರಿಸಬಹುದು. ಸರ್ಕಾರ ಮನಸ್ಸು ಮಾಡಿದರೆ, ಆಕ್ಸಿಜನ್ ಸೌಲಭ್ಯವನ್ನು ಇನ್ನೂ ಹೆಚ್ಚಿಸಬಹುದು. ನಾನು ಒಳ್ಳೆಯ ರೀತಿಯಲ್ಲಿ ಹೇಳುತ್ತಿದ್ದೇನೆ, ದೇವರ ಸಲುವಾಗಿ ಸರ್ಕಾರ ಏನಾದರೂ ಮಾಡಬೇಕು ಎಂದು ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರಕ್ಕೆ ದುಬೈನಲ್ಲಿ ಐಎಸ್ಐ ಜೊತೆ ಮಾತನಾಡಲು ಸಾಧ್ಯವಾಗುತ್ತದೆ ಆದರೆ ಪ್ರತಿಪಕ್ಷದ ನಾಯಕರೊಂದಿಗೆ ಮಾತನಾಡಲು ಸಾಧ್ಯವಿಲ್ಲವೇ? ಸರ್ಕಾರಕ್ಕೆ ಧನಾತ್ಮಕ ಮತ್ತು ರಚನಾತ್ಮಕವಾದ ಸಲಹೆಗಳನ್ನು ನೀಡದ ವಿಪಕ್ಷ ನಾಯಕರು ಯಾರೂ ಇಲ್ಲ, ಎಂದು ಪ್ರಿಯಾಂಕಾ ಅವರು ಮೋದಿ ಸರ್ಕಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

