ಗುಜರಾತ್ ಹಾಗೂ ಒಡಿಶಾ ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿದ್ದು, ದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ
ದೆಹಲಿ: ಕಳೆದ ಹಲವು ದಿನಗಳಿಂದ ತಣ್ಣಗಾಗಿದ್ದ ಮಹಾಮಾರಿ ಓಮಿಕ್ರಾನ್ ಆತಂಕ ಇದೀಗ ಮತ್ತೆ ಶುರುವಾಗಿದೆ. ಈಗಾಗಲೇ ನೆರೆಯ ರಾಷ್ಟ್ರ ಚೀನಾದಲ್ಲಿ ಕೊರೊನಾ ವೈರಸ್ ಓಮಿಕ್ರಾನ್‌ನ ಉಪತಳಿ ಬಿಎಫ್.7 ಆತಂಕ ಸೃಷ್ಟಿಸಿದೆ.
ಇದರ ಬೆನ್ನಲ್ಲೇ ಮಹಾಮಾರಿಯ ಆತಂಕ ಭಾರತಕ್ಕೂ ಅಪ್ಪಳಿಸಿದ್ದು, ಓಮಿಕ್ರಾನ್‌ನ ಉಪತಳಿ ಬಿಎಫ್.7 ನಾಲ್ಕು ಪ್ರಕರಣಗಳು ಪತ್ತೆಯಾಗಿದೆ ಎನ್ನಲಾಗಿದೆ. ಗುಜರಾತ್ ಹಾಗೂ ಒಡಿಶಾ ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿದ್ದು, ದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ. ಓಮಿಕ್ರಾನ್‌ನ ಉಪತಳಿ ಬಿಎಫ್.7 ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ದೇಶದಲ್ಲೂ ಕಟ್ಟೆಚ್ಚರವಹಿಸಲಾಗಿದೆ. ಅಲ್ಲದೇ ಈ ಸಂಬಂಧ ಕೇಂದ್ರ ಸರ್ಕಾರ ಹಲವು ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ ಎನ್ನಲಾಗುತ್ತಿದೆ.
ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಮೇಲೆ ಕಟ್ಟೆಚ್ಚರವಹಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರಿಗೆ ಕೊರೊನಾ ತಪಾಸಣೆ ಆರಂಭಿಸಲಾಗಿದ್ದು, ಸ್ಯಾಂಪಲ್ ಸಂಗ್ರಹಿಸುವ ಕಾರ್ಯ ಆರಂಭಿಸಲಾಗಿದೆ