ನೀರನ್ನು ಕುಡಿಯಲು ಹೆಚ್ಚಾಗಿ ಸ್ಟೀಲ್ ಬಾಟಲ್ಸ್ ,ಪ್ಲಾಸ್ಟಿಕ್ ಬಾಟಲ್ ಗಳು ,ಸ್ಟೀಲ್ ಲೋಟ ಅಥವಾ ಪ್ಲಾಸ್ಟಿಕ್ ಲೋಟವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಹಿರಿಯರು ಅಥವಾ ಪೂರ್ವಜರು ಹಿಂದಿನಿಂದಲೂ ತಾಮ್ರದ ಪಾತ್ರೆಯಲ್ಲಿ ಅಥವಾ ಲೋಟವನ್ನು ನೀರು ಕುಡಿಯಲು ಬಳಸುತ್ತಿದ್ದರು.. ಹಾಗೂ ಇತ್ತೀಚಿನ ದಿನಗಳಲ್ಲಿ ಹಲವು ಜನರು ತಾಮ್ರದ ಬಾಟಲ್ ಅಥವಾ ಲೋಟಗಳನ್ನು ನೀರು ಕುಡಿಯಲು ಬಳಸುತ್ತಾರೆ. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಏನೆಲ್ಲಾ ಹೆಲ್ತ್ ಗೆ ಬೆನಿಫಿಟ್ಸ್ ಇದೆ ಅನ್ನುವುದರ ಮಾಹಿತಿ ಹೀಗಿದೆ.
ತಾಮ್ರವು ದೇಹಕ್ಕೆ ಅಗತ್ಯವಾದ ಖನಿಜಾಂಶಗಳಲ್ಲಿ ಒಂದಾಗಿದೆ. ಇದರಿಂದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮುಖ್ಯವಾಗಿ ಕೆಂಪು ರಕ್ತ ಕಣಗಳು ಹಾಗೂ ಕೊಲ್ಯಾಜೆನ್ಗಳನ್ನು ಒದಗಿಸುತ್ತದೆ..
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ತಾಮ್ರವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದರಿಂದ ದೇಹದಲ್ಲಿರುವ ಅನೇಕ ಸೋಂಕುಗಳು ಮತ್ತು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಪ್ರತಿದಿನ ತಪ್ಪದೆ ತಾಮ್ರದ ಬಾಟಲಿಯಿಂದ ಅಥವಾ ಲೋಟ ಉಪಯೋಗಿಸಿ ನೀರನ್ನು ಕುಡಿಯುವುದರಿಂದ ಕಾಯಿಲೆಗಳು ಕಡಿಮೆಯಾಗುತ್ತದೆ.
ಕೀಲು ನೋವನ್ನ ಶಮನಪಡಿಸುತ್ತದೆ
ತಾಮ್ರದ ಪಾತ್ರೆ ಅಥವಾ ಬಾಟಲಿಯಲ್ಲಿ ಇಟ್ಟಿರುವಂತಹ ನೀರನ್ನ ಕುಡಿಯುವುದರಿಂದ ಮೂಲೆಗಳನ್ನು ಬಲಪಡಿಸುತ್ತದೆ ,ಮಾತ್ರವಲ್ಲದೆ ತಾಮ್ರವು ಅದರ ಉರಿಯುತದ ಗುಣಲಕ್ಷಣಗಳಿಗೆ ಹೆಸರುವಾಸಿ ಆಗಿರುವುದರಿಂದ ಕೀಲು ನೋವು ಹಾಗೂ ಸಂಧಿವಾತದಂತಹ ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ.
ಬ್ರೈನ್ ಫಂಕ್ಷನ್ ಗೆ ತುಂಬಾನೇ ಒಳ್ಳೆಯದು
ತಾಮ್ರವು ಮುಖ್ಯವಾಗಿ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.. ಮುಖ್ಯವಾಗಿ ಕಾಗ್ನಿಟಿವ್ ಫಂಕ್ಷನ್, ಮೆಮೊರಿ ಮತ್ತು ಕಾನ್ಸಂಟ್ರೇಶನ್ ಗೆ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ತ್ವಚೆ
ಇದೆಲ್ಲದರ ಜೊತೆಗೆ ತ್ವಚೆಗೆ ತುಂಬಾನೇ ಒಳ್ಳೆಯದು ತ್ವಜೆಯ ಹೊಳಪನ್ನ ಹೆಚ್ಚು ಮಾಡುತ್ತದೆ ಹಾಗೂ ಸ್ಕಿನ್ ಟೆಕ್ಸ್ಚರ್ ಇಂಪ್ರೂ ಆಗುತ್ತದೆ ಮತ್ತು ಮುಖದಲ್ಲಿ ಇರುವಂತಹ ಕಲೆಗಳು ನಿವಾರಣೆಯಾಗುತ್ತದೆ.