ಇಂದು ದೇಶದಲ್ಲಿ ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ (Parliment election)ಮತದಾನ ನಡೆಯುತ್ತಿದ್ದು ಹತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ 96 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ ಈ ಸಂದರ್ಭದಲ್ಲಿ ಹೈದರಾಬಾದ್ (Hyderabad) ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಮಾಧವಿ ಲತಾ (Madhavi latha) ನಡೆ ಆಕ್ರೋಶಕ್ಕೆ ಕಾರಣವಾಗಿದೆ.

ಮತದಾನ ಮಾಡಲು ವೋಟಿಂಗ್ ಬೂತ್ (Voting booth) ಗಳಿಗೆ ಬರುವ ಮತದಾರರ ವಿವರವನ್ನು ಪಡೆದುಕೊಂಡು ,ಮಾಧವಿ ಲತಾ ಅವರ ಬಳಿ ವೋಟ್ ಮಾಡಿಸುತ್ತಿರುವ ವಿಡಿಯೋ ಒಂದು ಇಂಟರ್ನೆಟ್ (Internet) ನಲ್ಲಿ ಹರಿದಾಡುತ್ತಿದ್ದು ,ಭಾರತದ ಚುನಾವಣಾ ಆಯೋಗ (Election commission of india) ಏನು ಮಾಡುತ್ತಿದೆ ಎಂದು ಹಲವಾರು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ (Narendra modi) ಯವರ ಕೈಗೊಂಬೆಯಾಗಿದೆ . ಮೋದಿ ತಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಬೇಕು ಅದೆಲ್ಲವನ್ನು ಚುನಾವಣಾ ಆಯೋಗದ ಮೂಲಕ ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ ಎಂದು ಕೆಲವರು ಈ ವಿಡಿಯೋವನ್ನು ಪೋಸ್ಟ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಸಾಕಷ್ಟು ಮಂದಿ ಚುನಾವಣಾ ಆಯೋಗವನ್ನು ಟ್ಯಾಗ್ ಮಾಡಿ ನಿಮ್ಮ ಕರ್ತವ್ಯವನ್ನ ಅಭ್ಯರ್ಥಿಯಾಗಿರುವ ಮಾಧವಿ ಲತಾ ನಿಭಾಯಿಸಲು ಹೇಗೆ ಬಿಟ್ಟಿದ್ದೀರಿ ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಪ್ರಶ್ನೆಗಳನ್ನ ಎತ್ತಿದ್ದಾರೆ. ಆ ಮೂಲಕ ದೇಶದಲ್ಲಿ ನ್ಯಾಯಸಮ್ಮತವಾದ ಚುನಾವಣೆ ನಡೆಯುತ್ತಿಲ್ಲ ಎಂಬ ಕೂಗು ಜೋರಾಗಿದೆ.