ವಿಜಯಪುರ ಮೂಲದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಸೋಮವಾರ ರಾತ್ರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ಕೆರೂರು ಗ್ರಾಮದಲ್ಲಿ ಬಿದ್ದು ಕೈ ಮತ್ತು ಕಾಲು ಪೆಟ್ಟು ಮಾಡಿಕೊಂಡಿದ್ದು, ಕನ್ಹೇರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ತಿಂಗಳ ಪ್ರವಚನಕ್ಕಾಗಿ ಕೆರೂರಿನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀಗಳು ಆ ಗ್ರಾಮದ ಹೊರವಲಯದಲ್ಲಿರುವ ಭಕ್ತರೊಬ್ಬರ ಸ್ನಾನಗೃಹದಲ್ಲಿ ಆಯತಪ್ಪಿ ಬಿದ್ದು ಕೈ ಮತ್ತು ಕಾಲನ್ನು ಫ್ಯಾಕ್ಚರ್ ಮಾಡಿಕೊಂಡಿದ್ದಾರೆ.
ಬಿದ್ದ ತಕ್ಷಣ ಸಹಾಯಕ್ಕೆ ದಾವಿಸಿದ ಜನರು ಸ್ಥಳೀಯ ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶ್ರೀ ಸಿದ್ದೇಶ್ವರ ಸ್ವಾಮಿಗಳನ್ನು ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕನ್ಹೇರಿ ಮಠದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ವಾಮೀಜಿಗಳ ತೊಡೆಯ ಭಾಗ ಮತ್ತು ಬುಜದ ಭಾಗದಲ್ಲಿ ಫ್ಯಾಕ್ಚರ್ ಆಗಿದ್ದು ಚಿಕಿತ್ಸೆ ಮುಂದುವರಿಸಿದ್ದೇವೆ. ಸ್ವಾಮೀಜಿಗಳು ಲವಲವಿಕೆಯಿಂದಲೇ ಇದ್ದಾರೆ. ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿದರೆ ಬೇಗ ಗುಣವಾಗಲಿದೆ ಗಾಭರಿಯಾಗುವ ಅವಶ್ಯಕತೆ ಇಲ್ಲ ಎಂದು ಅಲ್ಲಿಯ ವೈದ್ಯರು ಖಾಸಗಿ ವೆಬ್ ಸೈಟ್ವೊಂದಕ್ಕೆ ತಿಳಿಸಿದ್ದಾರೆ.