
ಬೆಂಗಳೂರು: ಬೆಂಗಳೂರಿಗೆ ಮಳೆ ಒಂದೆಡೆ ಬಿಟ್ಟೂಬಿಡದೆ ರಾದ್ದಾಂತ ನೀಡುತ್ತಿದ್ದರೆ, ಕಮ್ಮನಹಳ್ಳಿ ಬಳಿಯ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಕಂಡಿದೆ. ಹೆಣ್ಣೂರು ಸಮೀಪ ಇರುವ ಬಾಬುಸಾಬ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ.ಕಟ್ಟಡದ ಕಾಮಗಾರಿಯ ವೇಳೆಗೆ 15 ಜನಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಕೂಲಿ ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರೆಸ್ಕ್ಯೂ ಟೀಂ ಭೇಟಿ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ.