ಕಾನ್ಸ್ಟಿಪೇಶನ್ ಅನ್ನೋದು ತುಂಬಾನೆ ದೊಡ್ಡ ಸಮಸ್ಯೆ ಇದು ದೇಹದಲ್ಲಿ ಸಾಕಷ್ಟು ಅನಾರೋಗ್ಯಗಳನ್ನ ಉಂಟುಮಾಡುತ್ತದೆ ಜೊತೆಗೆ ಒಂದು ರೀತಿಯ ಕಿರಿಕಿರಿ ಅಂತ ಹೇಳಿದ್ರೆ ತಪ್ಪಾಗಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಲಬದ್ಧತೆಯ ಸಮಸ್ಯೆ ಸಾಮಾನ್ಯವಾಗಿದೆ. ದೇಹಕ್ಕೆ ಸರಿಯಾದ ರೀತಿಯಲ್ಲಿ ನಾರಿನಂಶದ ಅಂಶ ಸೇರದಿದ್ದಲ್ಲಿ ತೇವಾಂಶ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಈ ಕಾನ್ಸ್ಟಿಪೇಶನ್ ಪ್ರಾಬ್ಲಮ್ ಹೆಚ್ಚಾಗುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಲೈಫನ್ನ ತುಂಬಾನೇ ಬ್ಯುಸಿಯಾಗಿ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಆಗದಿದ್ದಲ್ಲಿ, ದೀರ್ಘಕಾಲದ ಔಷಧಿಯನ್ನು ಸೇವಿಸುವುದರಿಂದ ,ನೀರನ್ನು ಚೆನ್ನಾಗಿ ಕುಡಿಯದಿದ್ದಲ್ಲಿ ,ಅಥವಾ ವ್ಯಾಯಾಮ ಮಾಡದಿದ್ದಲ್ಲಿ ಈ ಮಲಬದ್ಧತೆ ಹೆಚ್ಚಾಗಬಹುದು. ಈ ಕಾನ್ಸ್ಟಿಪೆಷನ್ ಸಮಸ್ಯೆಯನ್ನು ತಕ್ಷಣಕ್ಕೆ ನಿವಾರಣೆ ಮಾಡಲು ಪ್ರತಿದಿನ ತಪ್ಪದೆ ಈ ಪದಾರ್ಥಗಳನ್ನ ಸೇವಿಸಿ.

ತುಪ್ಪ
ಹೆಚ್ಚು ಜನಕ್ಕೆ ಇತ್ತೀಚಿನ ದಿನಗಳಲ್ಲಿ ಕಾಡ್ತಾ ಇರುವಂತ ಒಂದು ಸಮಸ್ಯೆ ಅಂದರೆ ಕಾನ್ಸ್ಟಿಪೇಶನ್. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ಅಷ್ಟು ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಕಾನ್ಸ್ಟಿಪೇಶನ್ ತೊಂದರೆ ನಿವಾರಣೆ ಆಗುತ್ತದೆ. ತುಪ್ಪದಲ್ಲಿರುವ ಬ್ಯೂಟಿಕ್ ಆಸಿಡ್ ಮತ್ತು ಫ್ಯಾಟಿ ಆಸಿಡ್ ದೇಹದಲ್ಲಿರುವ ಮೆಟಬಾಲಿಸಂನ ಹೆಚ್ಚು ಮಾಡುತ್ತದೆ ಹಾಗೂ ಜೀರ್ಣಕ್ರಿಯೆಗೆ ಉತ್ತಮ.

ಕರಿಬೇವು
ಆಹಾರದ ಜೊತೆಗೆ ಕರಿಬೇವನ್ನು ಸೇವಿಸಿದಾಗ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ಚೆನ್ನಾಗಿ ಮಾಡುತ್ತದೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೂ ಕೂಡ ನಿವಾರಣೆ ಮಾಡುತ್ತದೆ. ಹಾಗೂ ಕಾನ್ಸ್ಟಿಪೇಶನ್ ಗೆ ಉತ್ತಮ. ಹಾಗೂ ಡೈಹೇರಿಯಾಗೆ ಪರಿಹಾರವನ್ನು ಒದಗಿಸುತ್ತದೆ.

ಮಾವಿನ ಹಣ್ಣು
ಮಾವಿನ ಹಣ್ಣಿನಲ್ಲಿ ಅಮೈಲೇಸ್ ಜೀರ್ಣಕಾರಿ ಕಿಣ್ವಗಳಿರುತ್ತವೆ . ಮಾವಿನ ಹಣ್ಣನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಹಾಗೂ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಕಾನ್ಸ್ಟಿಪೇಶನ್ ಮತ್ತು ಅತಿಸಾರದ ಸಮಸ್ಯೆ ಹಾಗೂ ಜೀರ್ಣಕಾರಿ ಸಮಸ್ಯೆಗಳನ್ನ ನಿವಾರಣೆಯಾಗುತ್ತದೆ.
ಖರ್ಜೂರ
ಪ್ರತಿದಿನ ಖರ್ಜೂರವನ್ನು ತಿನ್ನೋದ್ರಿಂದ ನಮ್ಮ ದೇಹದಲ್ಲಿ ಇರುವಂತ ಫೈಬರ್ ಅಂಶ ಹೆಚ್ಚಾಗುತ್ತೆ.ಹಾಗಾಗಿ ನಾವು ದಿನಕ್ಕೆ ಏಳು ಗ್ರಾಂ ಕರ್ಜೂರವನ್ನು ತಿನ್ನಬೇಕು ಅದು ಉತ್ತಮ. ಜೊತೆಗೆ ಫೈಬರ್ ಅಂಶ ಜಾಸ್ತಿ ಮಾಡುವುದರಿಂದ ನಮ್ಮ ಕಾನ್ಸ್ಟಿಪೇಶನ್ ಪ್ರಾಬ್ಲಮ್ ಬೇಗನೆ ನಿವಾರಣೆ ಆಗುತ್ತೆ. ಡೈಜೆಶನ್ ತುಂಬಾ ಚೆನ್ನಾಗಿ ಆಗುತ್ತೆ ಹಾಗೂ ಬ್ಲಡ್ ಶುಗರ್ ಲೆವೆಲ್ ಅನ್ನು ನಾರ್ಮಲ್ ಆಗಿ ಇಡೋದಕ್ಕೂ ಕೂಡ ಖರ್ಜೂರ ಉತ್ತಮ..

ನೆಲ್ಲಿಕಾಯಿ
ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸುತ್ತಾರೆ ಹಾಗೂ ಇದರಲ್ಲಿರುವ ವಿಟಮಿನ್ ಸಿ ಅಂಶ ಮತ್ತು ನಾರಿನಾಂಶ ಆರೋಗ್ಯದ ಸಾಕಷ್ಟು ಸಮಸ್ಯೆಗಳನ್ನ ನಿವಾರಣೆ ಮಾಡುತ್ತದೆ ಮುಖ್ಯವಾಗಿ ಕರುಳಿನ ಚಟುವಟಿಕೆಗೆ ತುಂಬಾನೇ ಒಳ್ಳೆಯದು ಹಾಗೂ ಮಲಬದ್ಧತೆಯ ಸಮಸ್ಯೆಯನ್ನ ನಿವಾರಣೆ ಮಾಡುತ್ತದೆ.
