• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಾಂಗ್ರೆಸ್​ ಆಂತರಿಕ ಸಮೀಕ್ಷೆಯಲ್ಲಿ ಹಿನ್ನಡೆ.. ನಾಯಕರಲ್ಲಿ ಢವಢವ..

ಪ್ರತಿಧ್ವನಿ by ಪ್ರತಿಧ್ವನಿ
November 9, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ಅಬ್ಬರ ಜೋರಾಗಿದೆ. ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ನಾಯಕರು ಪ್ರಚಾರದ ಅಬ್ಬರದಲ್ಲಿದ್ದಾರೆ. ಆದರೆ ಕಾಂಗ್ರೆಸ್​ ನಾಯಕರು ಆಂತರಿಕ ಸಮೀಕ್ಷೆ ನಡೆಸಿದ್ದು, ಸರ್ಕಾರಕ್ಕೆ ಹಿನ್ನಡೆ ಆತಂಕ ಕಾಣಿಸಿದೆ ಎನ್ನಲಾಗಿದೆ. ಶಿಗ್ಗಾವಿಯಲ್ಲಿ ಹಿಂದೂ – ಮುಸ್ಲಿಂ ಮತಗಳು ಇಬ್ಬಾಗ ಆಗುತ್ತಿದ್ದು ಬಸವರಾಜ ಬೊಮ್ಮಾಯಿ ಪುತ್ರ ಭರತ್​ ಬೊಮ್ಮಾಯಿ ಸುಲಭವಾಗಿ ಗೆಲುವು ದಕ್ಕಿಸಿಕೊಳ್ತಾರೆ ಎನ್ನುವುದನ್ನು ಕಾಂಗ್ರೆಸ್​ ನಾಯಕರು ಪಡೆದುಕೊಂಡಿರುವ ರಿಪೋರ್ಟ್​ನಲ್ಲೇ ಬಂದಿದೆ ಎನ್ನಲಾಗಿದೆ.ಈ ಕ್ಷೇತ್ರದಲ್ಲಿ ಕಾಂಗ್ರೆಸ್​​ ಏನೇ ಪ್ರಚಾರ ನಡೆಸಿದರೂ ಸೋಲು ಖಚಿತ ಅನ್ನೋ ಮಾಹಿತಿ ಕಾಂಗ್ರೆಸ್​ ಅಂಗಳ ತಲುಪಿದೆ.

ADVERTISEMENT

ಇನ್ನೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಾಲಿಗೆ ಕಂಟಕ ತರುವ ಆತಂಕ ಸೃಷ್ಟಿಸಿದೆ ವಾಲ್ಮೀಕಿ ಹಗರಣ.ಕಳೆದ ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದ ಸರ್ಕಾರದ ವಿರುದ್ಧ ವಾಲ್ಮೀಕಿ ಜನಾಂಗ ತಿರುಗಿ ಬಿದ್ದಿದೆ ಎಂದು ಆಂತರಿಕ ವರದಿಗಳು ಹೇಳುತ್ತಿರುವುದರಿಂದ ಕಾಂಗ್ರೆಸ್​​ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್​ ನಾಯಕರು ಇ. ತುಕಾರಾಂ ಸೋಲಿಲ್ಲದ ಸರದಾರ ಅನ್ನೋ ಕಾರಣಕ್ಕೆ ಅವರ ಪತ್ನಿ ಅನ್ನಪೂರ್ಣ ಅವರಿಗೇ ಮಣೆ ಹಾಕಿದ್ದರು. ಆದರೆ ಈ ಬಾರಿ ಸಂಡೂರಲ್ಲಿ ಕೇಸರಿ ಬಾವುಟ ಹಾರುವುದು ಶತಸಿದ್ಧ ಎನ್ನಲಾಗ್ತಿದೆ.

ಇನ್ನೂ ಎಲ್ಲರ ಹಾಟ್​ ಫೇವರಿಟ್​ ಆಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ಗೆ ಕಷ್ಟ ಆಗುವ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್​​ ಪ್ರಚಾರಕ್ಕೆ ಹೋಲಿಸಿದರೆ ಜೆಡಿಎಸ್​ ಪ್ರಚಾರ ತುಸು ಹೆಚ್ಚಾಗಿಯೇ ಇದೆ. ಕಾಂಗ್ರೆಸ್​ ನಾಯಕರು ಏನೇ ತಂತ್ರಗಾರಿಕೆ ಮಾಡಿದರೂ, ಎಷ್ಟೇ ಪ್ರಚೋದನೆ ಮಾಡಿದರೂ ಕುಮಾರಸ್ವಾಮಿ ತಿರುಗಿ ಬೀಳುತ್ತಿಲ್ಲ. ಮನಸೋ ಇಚ್ಚೆ ಮಾತನಾಡುತ್ತಿಲ್ಲ. ಬಹಳ ಗೌರವ ಪೂರ್ಣವಾಗಿ ಮಾತನಾಡುತ್ತಿರುವುದು, ಅಷ್ಟೇ ಅಲ್ಲದೆ ಈಗಾಗಲೇ ಎರಡು ಬಾರಿ ಸೋತಿರುವುದು ನಿಖಿಲ್​ ಕುಮಾರಸ್ವಾಮಿ ಗೆಲುವಿಗೆ ಚೇತೋಹಾರಿ ಎನ್ನುವ ಮಾತುಗಳು ಇದ್ದರೂ ಡಿ.ಕೆ ಶಿವಕುಮಾರ್​ ಹಾಗು ಡಿ.ಕೆ ಸುರೇಶ್​ ಕಡೇ ದಿನದಲ್ಲಿ ಆಟವಾಡ್ತಾರೆ. ಆ ರಾಜಕೀಯ ಆಟದಲ್ಲಿ ಸೋಲುಗೆಲುವು ನಿರ್ಧಾರ ಆಗುತ್ತೆ ಅನ್ನೋ ಮಾತುಗಳು ಕಾಂಗ್ರೆಸ್​​ ವಲಯದಲ್ಲಿ ಕೇಳಿ ಬರುತ್ತಿದೆ.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲೂ ಡಿ.ಕೆ ಸುರೇಶ್​ ಕೂಪನ್​​ಗಳನ್ನು ಹಂಚಿಕೆ ಮಾಡಿದ್ದರು. ಅದಕ್ಕೂ ಮೊದಲು ವಿಧಾನಸಭಾ ಚುನಾವಣೆಯಲ್ಲೂ ಕೂಪನ್​ಗಳನ್ನು ಹಂಚಿ ಜನರಿಗೆ ಮೋಸ ಮಾಡಲಾಗಿತ್ತು. ಅದೇ ಕಾರಣಕ್ಕೆ ಜನರು ಕಾಂಗ್ರೆಸ್​ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಮುಟ್ಟಿ ನೋಡುವಂತೆ ಬಾರಿಸಿದ್ದರು.ಈಗಲೂ ಮತ್ತೆ ಕಾಂಗ್ರೆಸ್​ ಕೂಪನ್​ ಹಂಚುವ ಕೆಲಸಕ್ಕೆ ಮುಂದಾಗ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆದರೆ ಜನರು ಯೋಗೇಶ್ವರ್​ ಅವರನ್ನು ಹೇಗೆ ಸ್ವೀಕರಿಸ್ತಾರೆ ಅನ್ನೋದ್ರ ಮೇಲೆ ಫಲಿತಾಂಶ ನಿರ್ಧಾರ ಆಗಲಿದೆ. ಈಗಾಗಲೇ ಯೋಗೇಶ್ವರ್​​ ಸಾಕಷ್ಟು ಪಕ್ಷಗಳಿಗೆ ಹೋಗಿ ಚುನಾವಣೆ ಮಾಡಿದ್ದು, ಕುಮಾರಸ್ವಾಮಿ ಕುಟುಂಬದ ಎದುರು ರಾಜಕೀಯ ಅಷ್ಟು ಸುಲಭ ಅಲ್ಲ ಎನ್ನಲಾಗ್ತಿದೆ. ಒಂದು ವೇಳೆ ಯೋಗೇಶ್ವರ್​ ಗೆಲುವು ಸಾಧಿಸಿದರೂ ಕೆಲವೇ ಕೆಲವು ವೋಟುಗಳಿಂದ ಸಾಧ್ಯ ಅಷ್ಟೆ ಎನ್ನುವ ಮಾತು ಕಾಂಗ್ರೆಸ್​ ಸರ್ಕಾರ ಪಡೆದಿರುವ ಇಂಟಲಿಜೆನ್ಸ್​ ರಿಪೋರ್ಟ್​ ಬಯಲು ಮಾಡಿದೆ ಎನ್ನಲಾಗಿದೆ.

Tags: BJPby-elections for three constituenciesCongress PartyCongress's setbackinternal survey.. among the leaders..Shiggaviಜೆಡಿಎಸ್
Previous Post

ವಾಲ್ಮೀಕಿ ಹಗರಣದಲ್ಲಿ ಮುಖಭಂಗ ಮಾಡಿಕೊಂಡ ಕಾಂಗ್ರೆಸ್​ ಸರ್ಕಾರ..

Next Post

18.4 ಕೆಜಿ ಚಿನ್ನ – 40 ಲಕ್ಷ ನಗದು ಕದ್ದು ಪರಾರಿ – ಮಾಲೀಕನ ಮನೆಗೆ ಕನ್ನ ಹಾಕಿದ ಖದೀಮ ! 

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
18.4 ಕೆಜಿ ಚಿನ್ನ – 40 ಲಕ್ಷ ನಗದು ಕದ್ದು ಪರಾರಿ – ಮಾಲೀಕನ ಮನೆಗೆ ಕನ್ನ ಹಾಕಿದ ಖದೀಮ ! 

18.4 ಕೆಜಿ ಚಿನ್ನ - 40 ಲಕ್ಷ ನಗದು ಕದ್ದು ಪರಾರಿ - ಮಾಲೀಕನ ಮನೆಗೆ ಕನ್ನ ಹಾಕಿದ ಖದೀಮ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada