ಮುಂದಿನ ವರ್ಷ (2022) ಪ್ರಾರಂಭದಲ್ಲಿ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಕಾಂಗ್ರೆಸ್ ಪಕ್ಷ ಕೊಡುವ ಭರವಸೆಗಳು ಬದ್ದತೆಯಲ್ಲ ಖಾತರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದಕ್ಷಿಣ ಗೋವಾದಲ್ಲಿ ಮೀನುಗಾರ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಬಿಜೆಪಿ ಜನರ ನಡುವೆ ದ್ವೇಷವನ್ನು ಬಿತ್ತಿ ಜನರನ್ನು ವಿಭಜಿಸುತ್ತಿದ್ದೆ. ಆದರೆ, ಜನರನ್ನು ಒಗ್ಗೂಡಿಸುವಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಪ್ರೀತಿ ವಾತ್ಸಲ್ಯವನ್ನು ಹರಡುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ವ್ಯತಾಸ ಏನ್ನು ಎಂಬುದನ್ನು ನಾನು ಹೇಳುತ್ತೇನೆ. ಕಾಂಗ್ರೆಸ್ ಪಕ್ಷವು ದೇಶದ ಒಗ್ಗೂಡಿಸಿ ಅವರನ್ನು ಒಟ್ಟಿಗೆ ಕೊಂಡೊಯುತ್ತದೆ. ಬಿಜೆಪಿ ಕೋಪ, ದ್ವೇಷ ಮತ್ತು ವಿಭಜನೆಯನ್ನು ಹರಡುತ್ತದೆ ಅಲ್ಲೆಲ್ಲಾ ಮತ್ತೆ ಪ್ರೀತಿಯನ್ನು ಮತ್ತು ವಾತ್ಸಲ್ಯವನ್ನು ಕಾಂಗ್ರೆಸ್ ಹರಡುತ್ತದೆ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಹೇಳಿದ್ದಾರೆ.
ನಿಮ್ಮ ಸಮಯ ಅಥವಾ ನಮ್ಮ ಸಮಯವನ್ನು ಹಾಳು ಮಾಡಲು ನಾನಿಲ್ಲಿ ಬಂದಿಲ್ಲ. ನಿಮ್ಮ ಸಮಯ ಎಷ್ಟು ಮುಖ್ಯವೋ ಹಾಗೆಯೇ ನಮ್ಮ ಸಮಯ ಕೂಡ ಅಷ್ಟೇ ಮುಖ್ಯ. ನಾವು ನಿಮ್ಮಗೆ ಕೊಡುವ ಆಶ್ವಾಸನೆ ಕೇವಲ ಆಶ್ವಾಸನೆ ಅಲ್ಲ. ಅದು ನಾವು ನಿಮ್ಮಗೆ ಕೊಡುವ ಖಾತರಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೀಡಿರುವ ಆಶ್ವಾಸನೆಗಳ ಕುರಿತು ಮಾತನಾಡಿದ ರಾಹುಲ್, ʻನನಗೆ ನನ್ನ ವಿಶ್ವಾಸಾರ್ಹತೆ ಮುಖ್ಯ, ನಾನು ಇಲ್ಲಿ ಬೇರೆ ನಾಯಕರ ತರ ಏನಾದರು ಭಿನ್ನವಾಗಿ ಹೇಳಿದರೆ. ಕಾರ್ಯಗತ ಆಗುವಂತೆ ನಾನು ನೋಡಿಕೊಳ್ಳುತ್ತೇನೆʼ ಎಂದು ಹೇಳಿದ್ದಾರೆ.
ʻನಾವು(ಕಾಂಗ್ರೆಸ್) ಇಲ್ಲಿ ಅಧಿಕಾರಕ್ಕೆ ಬಂದರೆ ಕಲ್ಲಿದ್ದಲು ಹಬ್ ನಡೆಸಲು ನಾವು ಅನುಮತಿಸುವುದಿಲ್ಲ ಮತ್ತದನ್ನು ಮಾಡಲು ಬಿಡುವುದಿಲ್ಲʼ ಎಂದು ಹೇಳಿದ್ದಾರೆ. ನೈಋತ್ವ ರೈಲ್ವೆ ಟ್ಯ್ರಾಕ್ ಯೋಜನೆಯನ್ನು ಮೀನುಗಾರರು ವಿರೋಧಿಸುತ್ತಿದ್ದರು ಇದು ರಾಜ್ಯ ಮತ್ತು ಕೇಂದ್ರ ಸರ್ಕಾರ ಗೋವಾವನ್ನು ಕಲ್ಲಿದ್ದಲ ಹಬ್ ಮಾಡಲು ಹೊರಟಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಜನರಿಗೆ ಕೊಟ್ಟಿರುವ ಮಾತನ್ನು ಈಡೇರಿಸಿದೆ. ಛತ್ತೀಸಗಡದಲ್ಲಿ ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಹೇಳಿದ್ದೇವು. ನಾವು ಪಂಜಾಬ್ ಮತ್ತು ಕರ್ನಾಟಕದಲ್ಲು ಹಾಗೆಯೇ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಗೋವಾ ಪ್ರವಾಸದ ಸಮಯದಲ್ಲಿ ರಾಹುಲ್ ಗಾಂಧಿ ಸಂಜೆ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
			
                                
                                
                                
