ರಾಜ್ಯದಲ್ಲಿ ಚೊಂಬು ಪಾಲಿಟಿಕ್ಸ್ (chombu politis) ಭಾರೀ ಸದ್ದು ಮಾಡ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ (congress) ನಾಯಕರು ಚೊಂಬಿನ ಸಮರ ಸಾರಿದ್ದಾರೆ.. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ (Bjp) ಕರ್ನಾಟಕಕ್ಕೆ (karnataka) ಕನ್ನಡಿಗರಿಗೆ ನೀಡಿದ್ದು ಬರೇ ಚೊಂಬು ಅಂತಿರೋ ಕಾಂಗ್ರೆಸ್, ಚುನಾವಣಾ ಅಖಾಡದಲ್ಲಿ ಚೊಂಬು ಅಸ್ತ ಪ್ರಯೋಗಿಸಿದೆ. ಇದಕ್ಕೆ ಕೌಂಟರ್(counter) ಕೊಟ್ಟಿರೋ ದೇವೇಗೌಡರು, ಚೆಂಬುನ್ನ ಅಕ್ಷಯ ಪಾತ್ರೆಯನ್ನಾಗಿಸಿ ಅಂತಾ ಕರೆ ಕೊಟ್ಟಿದ್ರು.

ದೇವೇಗೌಡರ (devegowda) ಈ ಅಕ್ಷಯ ಪಾತ್ರೆ ಮಾತಿಗೆ ಸಿಎಂ ಸಿದ್ದರಾಮಯ್ಯ (siddaramaiah) ಕೌಂಟರ್ ಕೊಟ್ಟಿದ್ದಾರೆ. ಮಾಜಿ ಪ್ರಧಾನಿಗಳು ಯಾಕೆ ಸುಳ್ಳು ಹೇಳಿದ್ರು? ಮೋದಿ 177 ಲಕ್ಷ ಕೋಟಿ ಸಾಲ ಮಾಡಿರೋದನ್ನ ಅಕ್ಷಯ ಪಾತ್ರೆ ಅಂತಾ ಕರೆಯಬೇಕಾ ಅಂತಾ ಕೌಂಟರ್ (counter) ಕೊಟ್ಟಿದ್ದಾರೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಚೊಂಬು ಪಾಲಿಟಿಕ್ಸ್ ಶುರು ಮಾಡಿದ್ರೆ, ಇದಕ್ಕೆ ಕೌಂಟರ್ ಆಗಿ ಕಮಲ ಪಾಳಯ ಚಿಪ್ಪು ಅಸ್ತ್ರ ಹೂಡಲು ಸಜ್ಜಾಗಿದೆ. ರಾಜ್ಯ ಬಿಜೆಪಿ ಘಟಕದ ವತಿಯಿಂದ ಇವತ್ತು ರಾಜ್ಯಾದ್ಯಂತ ಚಿಪ್ಪು ಚಳುವಳಿ ಮಾಡಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ನೀಡಿರುವ ಚೊಂಬು ಜಾಹೀರಾತನ್ನು ವಿರೋಧಿಸಿ ಬಿಜೆಪಿ ನಾಯಕರು ತೆಂಗಿನಕಾಯಿ ಚಿಪ್ಪು ಹಿಡಿದು ರಾಜ್ಯಾದ್ಯಂತ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿಪ್ಪು ಚಳುವಳಿ ಮಾತ್ರವಲ್ಲದೇ ಜನರಿಂದ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಚೊಂಬೇ ಗ್ಯಾರಂಟಿ ಅಂತಲೂ ಟ್ವಿಟರ್‌ನಲ್ಲಿ ಬಿಜೆಪಿಗೆ ಕಾಂಗ್ರೆಸ್‌ನ ಟ್ವಿಟ್ ಕಾಳೆದಿದೆ. ಆ ಮೂಲಕ ಚೊಂಬು ವರ್ಸಸ್ ಚಿಪ್ಪು ಪಾಲಿಟಿಕ್ಸ್ ಶುರುವಾಗಿದೆ. ಫೈನಲ್ ಆಗಿ ಚೊಂಬು ಗೆಲ್ಲುತ್ತೋ ಚಿಪ್ಪು ಗೆಲ್ಲುತ್ತೋ ಅಂತ ಕಾದು ನೋಡಬೇಕಿದೆ.