ಲೋಕಸಭಾ ಚುನಾವಣೆ (parliment election) ಹತ್ತಿರವಾಗ್ತಿದ್ದಂತೆ ಅಭ್ಯರ್ಥಿ ಆಯ್ಕೆ ಕಸರತ್ತು ಜೋರಾಗೆ ನಡಿತಿದೆ. ಗೆಲ್ಲುವ ಕುದುರೆಯನ್ನ ಕಣಕ್ಕಿಳಿಸಿ ಜಯಭೇರಿ ಭಾರಿಸಬೇಕು ಅಂತ ಎರಡು ರಾಷ್ಟ್ರೀಯ ಪಕ್ಷಗಳು (National parties) ತವಕದಲ್ಲಿದೆ. ಈ ಮಧ್ಯೆ ಅಚ್ಚರಿ ಎಂಬಂತೆ ಪ್ರಖ್ಯಾತ ಹಾಸ್ಯ ಕಲಾವಿದ ಸಾಧು ಕೋಕಿಲಾ (saadhu kokila) ಹೆಸರು ಈ ಬಾರಿ ಚುನಾವಣೆಗೆ ಕೇಳಿ ಬರ್ತಿದೆ.

ಕಾಂಗ್ರೆಸ್ (congress) ಪಕ್ಷ ಈಗಾಗಲೇ ಸಾಧು ಕೋಕಿಲರನ್ನ ಸಂಪರ್ಕಿಸಿದ್ದು , ಚುನಾವಣೆ (election) ಎದುರಿಸಲು ಆಸಕ್ತಿ ಇದ್ದರೆ ಕಾಂಗ್ರೆಸ್ ಪಕ್ಷದಿಂದ(congress party) ಟಿಕೆಟ್ ಕೊಡಿಸೋ ಪ್ರಯತ್ನ ಮಾಡ್ತೀವಿ ನಿಮ್ಮ ಅಭಿಪ್ರಾಯ ಏನು ಅಂತ ರಾಜ್ಯ ಕಾಂಗ್ರೆಸ್ ನಾಯಕರು ಆಫರ್ ನೀಡಿದ್ದಾರಂತೆ.

ಈ ಆಫರ್ ಗೆ ಸಾಧುಕೋಕಿಲ (saadhu kokila) ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಬೆಂಗಳೂರು (Bangalore central) ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡೋ ಆಸಕ್ತಿ ಹೊಂದಿರೋದಾಗಿ ಹೇಳಿಕೊಂಡಿದ್ದಾರಂತೆ. ಬೆಂಗಳೂರು ಸೆಂಟ್ರಲ್ (Bangalore central) ಕ್ಷೇತ್ರದಲ್ಲಿ ಕ್ರಿಶ್ಚಿಯನ್ (christian) ಮತದಾರರು ಹೆಚ್ಚಾಗಿದ್ದು , ಸಾಧು ಕೋಕಿಲಾರನ್ನ ಅಭ್ಯರ್ಥಿಯನ್ನಾಗಿಸಿದ್ರೆ ಗೆಲುವು ಸುಲಭ ಎಂಬ ಲೆಕ್ಕಾಚಾರಾ ಕಾಂಗ್ರೆಸ್ (congress) ನಾಯಕರದ್ದು. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿದ್ರೆ ಸಾಧು ಕಣಕ್ಕಿಳಿಯೋದು ಫಿಕ್ಸ್ ಎನ್ನಲಾಗ್ತಿದೆ.