Lokasabha ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ನಡೀತಿದೆ. ಅದರಲ್ಲೂ ಬಿ.ವೈ ವಿಜಯೇಂದ್ರ (Vijayendra) ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆಗೆ ಭಾರೀ ಒತ್ತು ನೀಡಿದ್ದಾರೆ. ನಾಯಕರನ್ನು ಭೇಟಿ ಮಾಡುವುದು, ಸಂಘಟನೆ ಬಗ್ಗೆ ಮಹತ್ವದ ಚರ್ಚೆಗಳನ್ನು ನಡೆಸುವುದು ನಡೀತಿದೆ. ಈ ನಡುವೆ ಕಾಂಗ್ರೆಸ್ ಗ್ಯಾರಂಟಿ ಅಸ್ತ್ರ ಬಳಸುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಕಾಂಗ್ರೆಸ್‌ನ ಬೂಟಾಟಿಕೆಗಳಿಗಿಂತ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಯೇ ಸೂಕ್ತ ಎಂದಿದ್ದಾರೆ. ಬಿಜೆಪಿ ಮತದಾರರು ರಣೋತ್ಸಾಹದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಅವಶೇಷಗಳು ಮಾತ್ರ ಈಗ ಉಳಿದಿವೆ. ಅದನ್ನು ರಾಷ್ಟ್ರೀಯ ಪಕ್ಷ ಅಂತಾ ಕರೆಯುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ (Congress) ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ಕೆಲವೇ ದಿನಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಓರ್ವ ರಾಜಕಾರಣಿ ಯಾವಾಗಲೂ ಮುಂದಿನ ಚುನಾವಣೆ ಗೆಲ್ಲುವ ಬಗ್ಗೆಯೇ ಆಲೋಚನೆ ಮಾಡುತ್ತಾನೆ. ಆದ್ರೆ ಓರ್ವ ರಾಜಕೀಯ ತಜ್ಞ ದೇಶದ ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಾನೆ. ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಮಾಜಿ ಸಚಿವ ಬಿ. ಶಿವರಾಮ್ ರಾಜ್ಯದಲ್ಲಿ ಶೇಕಡ 50 ರಷ್ಟು ಕಮಿಷನ್ ಸರ್ಕಾರ ಇದೆ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಸಚಿವರೇ ಇದನ್ನು ಹೇಳಿದ್ದಾರೆ. ಜನರ ಕಿವಿ ಮೇಲೆ ಹೂ ಇಟ್ಟು ಅಧಿಕಾರಕ್ಕೆ ಬಂದಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚಿಗೆ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನಿಂದ ಹಣ ಸೀಜ್ ಆಗಿದ್ದನ್ನು ಸ್ವಾಗತಿಸಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಕೇಂದ್ರ ಸರ್ಕಾರ ನಮ್ಮ ಮೇಲೆ ಸವಾರಿ ಮಾಡ್ತಿದೆ ಎಂದಿದ್ದರು. ಹಾಗಾದ್ರೆ ಅದು ಅವರ ಹಣ ಅಂತಾ ತಾನೇ..? ಎಂದು ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ರೇಟ್ ಕಾರ್ಡ್ ಸ್ಕೈರ್ ಫೀಟ್ ಲೆಕ್ಕದಲ್ಲಿ ಹೋಗುತ್ತದೆ. ಸ್ಕೈರ್ ಫೀಟ್ ಮಂತ್ರಿ ಎಂದು ಖಾತೆ ಸೃಷ್ಟಿಸಿದರೂ ಆಶ್ಚರ್ಯ ಇಲ್ಲ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.
#Vijayendra #Bjp #jds #congress #politics #modi #Amithsha #Yadiyurappa











