ಬೆಂಗಳೂರಿನ ಕಾಂಗ್ರೆಸ್ ಭವನ (Bangalore congress Bhavan) ಮುಂಭಾಗ ರೇಸ್ ಕೋರ್ಸ್ ರಸ್ತೆಯಲ್ಲಿ ಬಿಜೆಪಿ (BJP) ಪಕ್ಷದ ನಾಯಕರು ವಕ್ಫ್ ಬೋರ್ಡ್ ವಿಷಯದಲ್ಲಿ ರೈತರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯನ (Tejaswi surya) ಪ್ರತಿಕೃತಿ ಸುಟ್ಟು ಪ್ರತಿಭಟನೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್.ಮನೋಹರ್ ಮಾತನಾಡಿ, ಬಿಜೆಪಿ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ವಿದೇಶದಿಂದ ಕಪ್ಪುಹಣ ತರಲಾಗುತ್ತದೆ, 2ಕೋಟಿ ಯುವಕರಿಗೆ ಉದ್ಯೋಗ ಎಂದು ಸುಳ್ಳು ಭರವಸೆ, ಅದರ ಮುಂದಿನ ಭಾಗವೆ ಸಂಸದ ತೇಜಸ್ವಿಸೂರ್ಯರವರು. ರೈತ ಆತ್ಮಹತ್ಯೆ ಸುಳ್ಳು ಹೇಳಿ ರಾಜ್ಯದ ಜನರ ದಿಕ್ಕು ತಪ್ಪು ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯದ ವಕ್ಬ್ ಬೋರ್ಡ್ (Waqf board) ಬಜೆಪಿ ಆಡಳಿತದ ಅವಧಿಯಲ್ಲಿ ಕೂಡ ರೈತರಿಗೆ ನೋಟಿಸ್ ನೀಡಿದ್ದಾರೆ ಇದನ್ನ ಮಾರೆಮಾಚುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಮತ್ತು ಸಂಸದ ತೇಜಸ್ವಿಸೂರ್ಯ ರಾಜ್ಯದಲ್ಲಿ ವಕ್ಬ್ ಬೋರ್ಡ್ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿರುವ ಇಬ್ಬರು ನಾಯಕರು ಕೊಡಲೆ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ರೈತರ ಜಮೀನನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೂ ಬಿಜೆಪಿ ಈ ಬಗ್ಗೆ ಇಲ್ಲಿಸಲ್ಲದ ಆರೋಪಗಳನ್ನು ಮಾಡಿ ರಾಜಕೀಯ ಮಾಡುತ್ತಿದೆ. ಹೀಗಾಗಿ ಕೂಡಲೇ ಈ ಇಬ್ಬರು ನಾಯಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.