ಬಿಜೆಪಿ (Bjp) ಸಾವಿನಲ್ಲೂ ಸಂಭ್ರಮಿಸುತ್ತದೆ ಎಂಬ ಮಧು ಬಂಗಾರಪ್ಪ (Madhu bangarappa) ಹೇಳಿಕೆಗೆ ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಿಂಧೂರ ತೆಗೆದವರಿಗೆ ಬುದ್ದಿ ಕಲಿಸಿದ್ದಾರೆ. ಬಾಂಬೆಯಲ್ಲಿ 187 ಜನ ಸತ್ತಾಗ ಕಾಂಗ್ರೆಸ್ ಆರೋಪಿಗೆ ಬಿರಿಯಾನಿ ಕೊಟ್ಟು ಸಾಕಿದೆ.ಪಾಕಿಸ್ತಾನದ ಮೇಲೆ ಯುದ್ದ ಮಾಡುವ ಧೈರ್ಯ ನಿಮಗೆ ಇತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿ ಮೋದಿ ಪಾಕ್ ಮೇಲೆ ಯುದ್ದ ಮಾಡಿ ಬುದ್ದಿ ಕಲಿಸಿದ್ದಾರೆ. ನೂರಾರು ಮಂದಿ ಪಾಕಿಸ್ತಾನದ ಸೈನಿಕರನ್ನ ಕೊಂದರು.ಕಾಂಗ್ರೆಸ್ ಪಕ್ಷಕ್ಕೆ ಆ ಧಮ್ ಇದಿಯಾ..? ಪಾಕಿಸ್ತಾನ & ಮುಸ್ಲಿಂ ಅಂದರೆ ಪಾದಕ್ಕೆ ಬೀಳ್ತಿರಾ ನೀವು, ಕಾಂಗ್ರೆಸ್ ಪಕ್ಷಕ್ಕೆ ದೇಶ & ಧರ್ಮದ ಬಗ್ಗೆ ಕಾಳಜಿ ಇರ್ಲಿ.. ಪಾಕಿಸ್ತಾನದವರು ಸತ್ತರೆ ಮಾತ್ರ ಕಾಂಗ್ರೆಸ್ ಕಣ್ಣಿರು ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಆದ್ರೆ ನಾವು ಹಾಗಲ್ಲ..ಭಾರತೀಯರು ಸತ್ತಾಗ ಪ್ರತಿಕಾರ ತೀರಿಸುತ್ತೇವೆ, ಕಾಂಗ್ರೆಸ್ ಹೇಡಿಗಳ ತರ ಓಡಿ ಹೋಗಲ್ಲ. ಇದೇ ದೇಶದ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಇರುವ ವ್ಯತ್ಯಾಸ ಎಂದು ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.