ಚಿಕ್ಕಮಗಳೂರು : ಜಿಲ್ಲೆಯಲ್ಲಿ ಹಾಲಿ ವರ್ಸಸ್ ಮಾಜಿ ಶಾಸಕರ ನಡುವೆ ಟಾಕ್ ವಾರ್ ಜೋರಾಗಿದೆ. ಮಾಜಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧ ಶೃಂಗೇರಿಯ ಹಾಲಿ ಶಾಸಕ ಟಿ.ಡಿ. ರಾಜೇಗೌಡ ಪರೋಕ್ಷವಾಗಿಯೇ ಟೀಕಾ ಪ್ರಹಾರ ನಡೆಸಿದ್ದಾರೆ.

ಜಿಲ್ಲೆಯ ಬಾಳೇ ಹೊನ್ನೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ನನ್ನ ಕುಟುಂಬವನ್ನು ಬೀದಿಗೆ ತಂದಿದ್ದಾರೆ, ನಿತ್ಯ ಕೋರ್ಟಿಗೆ ಅಲೆದಾಡುವ ಸ್ಥಿತಿ ಬಂದಿದೆ. ನನ್ನ ಮನೆ ಹಾಳು ಮಾಡಿದ್ದೀರಿ, ಅನ್ಯಾಯ ಮಾಡಿದ್ದೀರಿ, ನಾನು ಸಾಲ ಮಾಡಿದ್ದೇನೆ. ನಾನು ಜನರಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ, ಯಾರಾದರೂ ನಿಲ್ಲಲಿ ಎಂದು ಬಹಿರಂಗ ಸಭೆಯಲ್ಲಿ ಕಣ್ಣೀರಾಗಿದ್ದಾರೆ.
ಆದರೆ ನನ್ನ ಕ್ಷೇತ್ರದಲ್ಲಿ ಕೆಟ್ಟ ಮನಸ್ಥಿತಿಯ ವ್ಯಕ್ತಿ ಮತ್ತೆ ಶಾಸಕನಾಗಬಾರದು. ಅಂತವರು ಈ ಕ್ಷೇತ್ರಕ್ಕೆ ದೊಡ್ಡ ಮಾರಕ, ಯಾರ ಮನೆ ಹೆಣ್ಣು ಮಕ್ಕಳನ್ನು ಏನ್ ಮಾಡ್ತಾರೋ ಗೊತ್ತಿಲ್ಲ. ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಜನರಿಗೆ, ಮಹಿಳೆಯರಿಗೆ ವಿನಾಕಾರಣ ತೊಂದರೆ ಕೊಟ್ಟಿರುವುದನ್ನು ಮನದಟ್ಟು ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಅವರೇ ಘೋಷಣೆ ಮಾಡಲಿ ಎಂದು ರಾಜೇಗೌಡ ಜೀವರಾಜ್‌ಗೆ ಸವಾಲೆಸೆದಿದ್ದಾರೆ.
ಇದನ್ನೂ ಓದಿ : ಹಾರ್ಮುಜ್ ಮಾರ್ಗದಲ್ಲಿ ನಿಮ್ಮ ತೈಲದ ಹಡಗು ಕಾಣಿಸಿದ್ರೆ ಬೆಂಕಿ ಹಚ್ತೀವಿ : ಟ್ರಂಪ್‌ಗೆ ಇರಾನ್ ಎಚ್ಚರಿಕೆ..
ಇಂದು ನಾನು ಕೂಡ ಘೋಷಣೆ ಮಾಡುತ್ತೇನೆ ನೀವು ಸ್ಪರ್ಧಿಸಲ್ಲ ಅಂದ್ರೆ ನಾನು ಸ್ಪರ್ಧಿಸಲ್ಲ. ನನ್ನ ಬದಲಿಗೆ ಕಾರ್ಯಕರ್ತರು ನಿಲ್ಲಲಿ ಎಂದು ಶಾಸಕ ರಾಜೇಗೌಡ ಆಗ್ರಹಿಸಿದ್ದಾರೆ.
ಮಲೆನಾಡಿನಲ್ಲಿ ನಿರಂತರವಾಗಿ ಕಾಡಾನೆ ದಾಳಿಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೀವರಾಜ್ ಹಾಲಿ ಶಾಸಕರ ವಿರುದ್ಧ ಟೀಕಿಸಿದ್ದರು. ಅಲ್ಲದೆ ಆ ಪ್ರತಿಭಟನೆಯ ವೇಳೆ ಬಿಜೆಪಿ ಕಾರ್ಯಕರ್ತರು ರಾಜೇಗೌಡ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಬಿಜೆಪಿಗೆ ಕೌಂಟರ್ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಸಮಾವೇಶವನ್ನು ನಡೆಸಲಾಗಿತ್ತು.






