• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!

ರಾಜಕೀಯವೇ ನನಗೆ ಬದುಕಲ್ಲ, ಮಂತ್ರಿಗಿರಿ, ಶಾಸಕ ಸ್ಥಾನದ ಅವಶ್ಯಕತೆ ಇಲ್ಲ ಎಂದು ಶಾಸಕ ಉದಯ್‌ ಹೇಳಿದ್ದಾರೆ..

ಪ್ರತಿಧ್ವನಿ by ಪ್ರತಿಧ್ವನಿ
March 3, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಕುಮಾರಸ್ವಾಮಿ ಷಡ್ಯಂತ್ರದಿಂದ ಪ್ರಜ್ವ‌ಲ್‌ನನ್ನು ಜೈಲಿಗೆ ಹಾಕಿಸಿದ್ದಾರೆ : ಕದಲೂರು ಉದಯ್ ಸ್ಫೋಟಕ ಆರೋಪ..!
Share on WhatsAppShare on FacebookShare on Telegram

ಮಂಡ್ಯ : ಈಗ ಹುಟ್ಟಿರುವ ಮೊಮ್ಮಗನಿಗೆ ಕುಮಾರಸ್ವಾಮಿ ವೇದಿಕೆ ರೆಡಿ ಮಾಡ್ತಿದ್ದಾರೆ. ಬೆಂಗಳೂರು ಬಿಟ್ಟು ದೆಹಲಿಗೆ ಪಾದಯಾತ್ರೆ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್‌ ಶಾಸಕ ಕದಲೂರು ಉದಯ್ ವಾಗ್ದಾಳಿ ನಡೆಸಿದ್ದಾರೆ.

ADVERTISEMENT
Akilesh yadav : ಇವರೆಲ್ಲಾ ರಾಷ್ಟ್ರೀಯ ನಾಯಕರು #pratidhvani #akhileshyadav  #modi #bjp #politics

ಜಿಲ್ಲೆಯ ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಮಾಡೋದು ಯಾವ ನ್ಯಾಯ? ಹೋರಾಟಕ್ಕೆ ಕುಮಾರಸ್ವಾಮಿ ಒಬ್ಬರದೇ ಬೆಂಬಲ ಅಲ್ಲ. ನಮ್ಮ ಬೆಂಬಲ ಕೂಡ ಇರುತ್ತದೆ. ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡಬೇಡಿ, ಅಮ್ಯೂಸ್ಮೆಂಟ್ ಪಾರ್ಕ್ ವಿರೋಧ ಮಾಡ್ತೀರಿ. ರೈತರ ಮಕ್ಕಳು ಉದ್ಯೋಗ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ.

ಕೆಆರ್‌ಎಸ್‌ ಅಭಿವೃದ್ಧಿಯಾದರೆ ಸಾವಿರಾರು ಯುವಕರಿಗೆ ಕೆಲಸ ಸಿಗುತ್ತದೆ. ಸ್ಥಳೀಯ ಜನರು ಜೀವನ ಕಟ್ಟಿಕೊಳ್ತಾರೆ.
ಅಭಿವೃದ್ಧಿಗೂ ಹೋರಾಟ ಮಾಡ್ತೀರಾ? ಹೋರಾಟವನ್ನು ನಿಮ್ಮ ಇಷ್ಟಕ್ಕೆ ಬಂದಂತೆ ಮಾಡಬಹುದಾ?
ನೀವು ಪಾದಯಾತ್ರೆ  ಮಾಡುವುದಾದರೆ, ಬೆಂಗಳೂರು ಬಹಳ ಹತ್ತಿರವಿದೆ. ಹೀಗಾಗಿ ದೆಹಲಿಗೆ ಪಾದಯಾತ್ರೆ ಮಾಡಲಿ.
ಎಕ್ಸೈಜ್ ಮಾಡಿದರೆ ಆರೋಗ್ಯ ವೃದ್ಧಿ ಆಗುತ್ತದೆ. ಇವರು ಇಲ್ಲಿ ಬಂದು ಉಪದೇಶ ಮಾಡುವ ಅವಶ್ಯಕತೆ ಇಲ್ಲ ಎಂದು ಟಾಂಗ್‌ ನೀಡಿದ್ದಾರೆ.

ಇದನ್ನೂ ಓದಿ : ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

ಹಳ್ಳಿಗಳು ಉದ್ದಾರ ಆಗಬೇಕು ಎಂದು ಪ್ರಧಾನಿ ಮೋದಿ ಹೇಳ್ತಾರೆ. ಇವರು ಬಂದು ಹಳ್ಳಿ ಉಳಿಯಬೇಕು ಎಂದು ಹೇಳುತ್ತಾರೆ.
ಕುಮಾರಸ್ವಾಮಿ ಅವರ ಉದ್ದೇಶ ರಾಜಕೀಯ ಮಾಡುವುದು. ರೈತ, ಬಡವರ, ಒಕ್ಕಲಿಗರ ಮಕ್ಕಳು ಹೆಸರು ಮಾಡಬಾರದು.
ಇವರ ಕುಟುಂಬ ಮಾತ್ರ ರಾಜಕೀಯವಾಗಿ ಇರಬೇಕು. ಈಗ ಹುಟ್ಟಿರುವ ಮೊಮ್ಮಗನಿಗೆ ಜಾಗ ಮಾಡೋಕೆ ವೇದಿಕೆ ರೆಡಿ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಕುಟುಂಬ ಯಾರನ್ನು ಬೆಳೆಯೋದಕ್ಕೆ ಬಿಟ್ಟಿಲ್ಲ. ರಾಜಕೀಯವೇ ನನಗೆ ಬದುಕಲ್ಲ, ಮಂತ್ರಿಗಿರಿ, ಶಾಸಕ ಸ್ಥಾನದ ಅವಶ್ಯಕತೆ ಇಲ್ಲ. ಜನರ ಬಳಿ ಹೋಗಿ ಸರ್ವೆ ಮಾಡಿದಾಗ ದುಡ್ಡಿನ ದುರಹಂಕಾರ ಅಂದ್ರೆ ಏನು ಅರ್ಥ? ಎಂದು ತಿಳಿಯುತ್ತದೆ. ಜನರ ಅಭಿಪ್ರಾಯದಿಂದಲೇ ನಗರಸಭೆ ಮಾಡಿದ್ದು.ನನ್ನ ವೈಯಕ್ತಿಕ ಲಾಭಕ್ಕಾಗಿ ಮಾಡಿಕೊಂಡಿಲ್ಲ, ಜನರಿಗಾಗಿ ಮಾಡಿದ್ದು ಎಂದು ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಅಣ್ಣನ ಮಗನ (ಪ್ರಜ್ವಲ್ ರೇವಣ್ಣ) ಬೆಳವಣಿಗೆಯನ್ನು ಸಹಿಸಿಕೊಳ್ಳದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ನಮ್ಮಂತ ಬಡವರ ಮಕ್ಕಳನ್ನ ಸಹಿಸಿಕೊಳ್ಳುತ್ತಾರಾ? ತಮ್ಮ ಮಗ ನಿಖಿಲ್ ಚುನಾವಣೆಯಲ್ಲಿ ಗೆದ್ದಿಲ್ಲಾ ಅಂತ ಅಣ್ಣನ ಮಗನನ್ನೆ ಜೈಲಿಗೆ ಹಾಕಿಸಿದ್ರು. ಕ್ರಿಯೇಟ್ ಮಾಡಿ ಪ್ರಜ್ವಲ್‌ನ ಜೈಲಿಗೆ ಕಳಿಸಿದ್ರು. ಪ್ರಜ್ವಲ್ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿ ಕಾರಣ. ಸಿಡಿ ಬಿಡಿಸಿದ್ದೆ ಕುಮಾರಸ್ವಾಮಿ. ಎಂತೆಂತೊರೊ ಜೈಲಿಂದ ಹೊರ ಬಂದಿದ್ದಾರೆ. ಮಾಜಿ ಪ್ರಧಾನಿ ಮನಸ್ಸು ಮಾಡಿದ್ರೆ ಬಿಡಿಸಬಹುದಿತ್ತು. ಷಡ್ಯಂತ್ರ ಮಾಡಿ ಪ್ರಜ್ವ‌ಲ್‌ನ ಜೈಲಿಗೆ ಹಾಕಿಸಿದ್ದಾರೆ ಎಂದು ಉದಯ್ ಕೇಂದ್ರ ಸಚಿವರ ವಿರುದ್ಧ ಸ್ಪೋಟಕ ಹೇಳಿಕೆ ನೀಡಿದ್ದಾರೆ.

Israel-Iran War : ಅಮೆರಿಕ ಜಗತ್ತಿನಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ..! #pratidhvani

ಇವರು ಪಾದಯಾತ್ರೆ ಮಾಡೋದಕ್ಕಿಂತ  ಚರ್ಚೆಗೆ ಬರಲಿ. ಇವರ ಕೊಡುಗೆ ಏನು ಜನರ ಮುಂದೆ ಬಿಚ್ಚಿಡೋಣ.
ಇವರಿಗೆ ರೈತರ ಮಕ್ಕಳು ಬೆಳೆಯಬಾರದು ಅನ್ನೋ ಉದ್ದೇಶವಿದೆ. ಬಚ್ಚೇಗೌಡ, ನಾಗೇಗೌಡ, ಚಂದ್ರೇಗೌಡ, ವರದೇಗೌಡ, ಸಿದ್ದರಾಜು ಇವರನ್ನ ಮನೆಯಲ್ಲಿ ಕೂರಿಸಿದ್ದಾರೆ. 2008ರಲ್ಲಿ ಮ್ಯಾಚ್ ಪಿಕ್ಸಿಂಗ್‌ ಮಾಡಿಕೊಂಡು, ರಾಜಕೀಯವಾಗಿ ಯಾರನ್ನೂ ಬೆಳೆಯಲು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಇವರ ಡೊಂಬರಾಟವನ್ನು ಜನ ಮರೆತಿಲ್ಲ. ಮದ್ದೂರು ಅಭಿವೃದ್ಧಿ ಆಗಬಾರದಾ? ಇವರ ಕೊಡುಗೆ ಏನು? ಮಾಜಿ ಎಂಎಲ್ಎ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ?
ಯುಜಿಡಿ ಕಾಮಗಾರಿ ಹೇಗೆ ಮಾಡಿದ್ದಾರೆ ಎಂದು ಎಲ್ಲ ಅವಾಂತರಗಳನ್ನು ತೋರಿಸುತ್ತೇನೆ ಎಂದು ಕದಲೂರು ಉದಯ್‌ ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

Tags: Congress MLADelhi footMarchDevelopmentH d Kumar swamyHealth tipsJDS KarnatakaKadalur Udaykannada newsKarnataka CongressKarnataka PoliticsKaveri AartiKRS Developmentkumaraswamy familymandya newsNikhil KumaraswamyPrajwal Revannaprajwal revanna sex scandal casePratidhvaniUnion Minister
Previous Post

ಇರಾನ್ ನಿಂದ ಭಾರತ ಏನೆಲ್ಲಾ ಖರೀದಿಸುತ್ತೆ.? ಯುದ್ಧದಿಂದ ಯಾವೆಲ್ಲ ಬೆಲೆ ಏರಲಿದೆ?

Next Post

ಹಾರ್ಮುಜ್‌ ಮಾರ್ಗದಲ್ಲಿ ನಿಮ್ಮ ತೈಲದ ಹಡಗು ಕಾಣಿಸಿದ್ರೆ ಬೆಂಕಿ ಹಚ್ತೀವಿ : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ..

Related Posts

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ
ರಾಜಕೀಯ

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

by ಪ್ರತಿಧ್ವನಿ
March 3, 2026
0

ಫೋನ್ ಕದ್ದಾಲಿಕೆ ಆರೋಪದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ...

Read moreDetails
ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ: ನಂತರ ಆದದ್ದೇನು ?

March 3, 2026
Next Post
ಹಾರ್ಮುಜ್‌ ಮಾರ್ಗದಲ್ಲಿ ನಿಮ್ಮ ತೈಲದ ಹಡಗು ಕಾಣಿಸಿದ್ರೆ ಬೆಂಕಿ ಹಚ್ತೀವಿ : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ..

ಹಾರ್ಮುಜ್‌ ಮಾರ್ಗದಲ್ಲಿ ನಿಮ್ಮ ತೈಲದ ಹಡಗು ಕಾಣಿಸಿದ್ರೆ ಬೆಂಕಿ ಹಚ್ತೀವಿ : ಟ್ರಂಪ್‌ಗೆ ಇರಾನ್‌ ಎಚ್ಚರಿಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada