ನಿನ್ನೆಯಿಂದಲೇ ರಾಜ್ಯದಲ್ಲಿ ಆಜಾನ್ ವಿರೋಧಿಸಿ ಭಜನೆ ಪಠಣವನ್ನು ಶ್ರೀರಾಮ್ ಸೇನೆ ಆರಂಭಿಸಿದರೆ ಇದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಇಂದು ಶ್ರೀರಾಮ್ ಸೇನೆ ಕೈಗೊಂಡಿರುವ ಸುಪ್ರಭಾತ ಅಭಿಯಾನವನ್ನು ಕಾಂಗ್ರೆಸ್ ಮುಖಂಡ ಅಶ್ಪಾಕ್ ಕುಮಟಾಕರ ಸ್ವಾಗತಿಸಿದ್ದಾರೆ.
ಆದರೆ ಒಂದು ಧರ್ಮದ ವಿರುದ್ಧ ಸುಪ್ರಭಾತ ಹಚ್ಚುತ್ತಿರುವುದು ತಪ್ಪು. ದೇವನೊಬ್ಬ ನಾಮ ಹಲವು, ಧರ್ಮ ದಿಂದ ವಿಶ್ವಕ್ಕೆ ಶಾಂತಿ ಸಿಗಲಿ. ಧರ್ಮ ಧರ್ಮಗಳ ನಡುವೆ ಒಡಕನ್ನು ಉಂಟುಮಾಡಬಾರದು ಎಂದು ಮನವಿ ಮಾಡಿಕೊಂಡರು.
ನಾವು ಧರ್ಮ ಆಚರಣೆ ಮಾಡುವಾಗ ದೇವಸ್ಥಾನಗಳಲ್ಲಿ ಹನುಮಾನ್ ಚಾಲಿಸ ಓದುವುದು, ಮಸೀದಿಗಳಲ್ಲಿ ಅಜಾನ್ ಮಾಡುವುದು, ಚರ್ಚ್ ಗಳಲ್ಲಿ ಪ್ರಾರ್ಥನೆ ಮಾಡುವುದು, ಧರ್ಮದ ಆಚರಣೆ ಆಗಿವೆ. ಇವುಗಳು ವಿಶ್ವಕ್ಕೆ ಶಾಂತಿ ನೀಡುತ್ತವೆ. ಆದರೆ ಒಂದು ಧರ್ಮದ ವಿರುದ್ಧ ವಿಷ ಬೀಜ ಬಿತ್ತುವ ಕಲಸ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿಂದು ಎಲ್ಲ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ, ಸುಪ್ರಭಾತ, ಹಚ್ಚುವುದಕ್ಕೆ ನಮ್ಮ ಅಭ್ಯಂತರ ವಿಲ್ಲ. ಧರ್ಮದಿಂದ ಎಲ್ಲರಿಗೂ ಒಳ್ಳೆಯ ಸಂದೇಶ ಕೊಡಲಿ. ಆದರೆ ಒಂದು ಧರ್ಮದ ವಿರುದ್ಧ ಮಾಡುವುದು ಸರಿ ಅಲ್ಲ. ಧರ್ಮದಿಂದ ಒಳ್ಳೆಯ ಸಂದೇಶ ಹೋಗಲಿ. ಹಿಂದೂ ಮುಸ್ಲಿಂರು ಅಣ್ಣ ತಮ್ಮಂದಿರ ಹಾಗೆ ಬಾಳೋನ. ಸಹ ಬಾಳ್ವೆ ಜೀವನ ನಡೆಸೋಣ ಎಂದರು .











