ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಅಭ್ಯರ್ಥಿಯಾಗಿ ಸೋಲುಂಡಿದ್ದ ವೀಣಾ ಕಾಶಪ್ಪನರ್ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಇದ್ದಕ್ಕಿದ್ದಂತೆ ಸಂಯುಕ್ತ ಪಾಟೀಲ್ ಹೆಸರು ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. 2019ರಲ್ಲಿ ಚುನಾವಣೆಗೆ ನಿಂತಿದ್ದ ವೀಣಾ ಕಾಶಪ್ಪನವರ್ ಸೋತಿದ್ದರು,ಅಂದಿನಿಂದಲೂ ಅವರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲೂ ಪಕ್ಷದ ಪರ ಕೆಲಸ ಮಾಡಿದ್ದಾರೆ. ಆದರೂ ಟಿಕೆಟ್ ಮಿಸ್ ಆಗಿದೆ ಎಂದು ಕಾಂಗ್ರೆಸ್ ಶಾಸಕ ವೀಣಾ ಕಾಶಪ್ಪನವರ್ ಪತಿ ವಿಜಯಾನಂದ ಕಾಶಪ್ಪನವರ್ ಆಕ್ರೋಶ ಹೊರ ಹಾಕಿದ್ದಾರೆ. ಚುನಾವಣಾ ಸಮಿತಿಯನ್ನು ಈ ಬಗ್ಗೆ ಪ್ರಶ್ನಿಸಿದ್ದೇವೆ. ನ್ಯಾಯ ನೀಸಗುವ ವಿಶ್ವಾಸವಿದೆ ಎಂದಿದ್ದಾರೆ.

ಟಿಕೆಟ್ ಕೈ ತಪ್ಪಿದ್ದಕ್ಕೆ ವೀಣಾ ಕಾಶಪ್ಪನವರ ಕಣ್ಣೀರು ಹಾಕಿದ್ದು, ದೆಹಲಿ ಮಲ್ಲಿಕಾರ್ಜುನ ಖರ್ಗೆ ನಿವಾಸದ ಎದುರು ವೀಣಾ ಕಾಶಪ್ಪನವರ್ ಕಣ್ಣೀರಿಟ್ಟಿದ್ದಾರೆ. ಶಾಸಕರು ನನ್ನ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಕಾರಣ ಏನು ಅಂತ ಸ್ಥಳೀಯ ಶಾಸಕರನ್ನ ಕೇಳಬೇಕಿದೆ. ಯಾವ ಮಾನದಂಡದಲ್ಲಿ ಬೇಡ ಅಂತಿದ್ದಾರೆ ಎಂದು ಕೇಳಬೇಕು. ಚುನಾವಣೆ ಸಂದರ್ಭದಲ್ಲಿ ನನಗೆ ಪ್ರಾಮೀಸ್ ಮಾಡಿದ್ದರು. ಎಲೆಕ್ಷನ್ ವೇಳೆ ನಿಮಗೆ ಸಪೋರ್ಟ್ ಮಾಡ್ತಿವಿ, ನಿಮ್ಮ ಹೆಸರನ್ನೇ ಹೇಳ್ತೀವಿ ಎಂದಿದ್ದರು. ಆದರೆ ಈಗ ಮಾತು ಕೊಟ್ಟು ತಪ್ಪುತ್ತಿದ್ದಾರೆ ಎಂದು ಗದ್ಗದಿತಳಾಗಿದ್ದಾರೆ ವೀಣಾ ಕಾಶಪ್ಪನವರ್.

ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವೀಣಾ ಕಾಶಪ್ಪನವರ್ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಇದೀಗ ವೀಣಾ ಕಾಶಪ್ಪನವರ್ ಪರವಾಗಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಸ್ವಾಮೀಜಿ ಜಯ ಮೃತ್ಯುಂಜಯ ಸ್ವಾಮೀಜಿ ಅಖಾಡಕ್ಕಿ ಇಳಿದಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿರುವ ಸ್ವಾಮೀಜಿ, ವೀಣಾ ಕಾಶಪ್ಪನವರ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ವೀಣಾ ಕಾಶಪ್ಪನವರ್‌ಗೆ ಟಿಕೆಟ್ ಕೊಡುವಂತೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದ್ದಾರೆ. ಆದರೆ ವೀಣಾ ಕಾಶಪ್ಪನವರ್ ಬದಲಿಗೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್‌ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ್ ಹೆಸರು ಮುನ್ನೆಲೆಗೆ ಬಂದಿರುವ ಹಿನ್ನೆಲೆ ಬಾಗಲಕೋಟೆ ಕಾಂಗ್ರೆಸ್ ಕಚೇರಿ ಮುಂದೆ ವೀಣಾ ಕಾಶಪ್ಪನವರ್ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಗೋ ಬ್ಯಾಕ್ ಸಂಯುಕ್ತಾ ಪಾಟೀಲ್ ಎಂದು ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದ್ಯಾವುದನ್ನು ಗಮನಿಸದ ಸಂಯುಕ್ತಾ ಪಾಟೀಲ್, ಜಿಲ್ಲೆಯ ಸ್ಥಳೀಯ ನಾಯಕರನ್ನ ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಬೀಳಗಿ ಪಟ್ಟಣದಲ್ಲಿ ಶಾಸಕ ಜೆ. ಟಿ ಪಾಟೀಲ್, ಹಿರಿಯ ನಾಯಕ ಎಸ್ ಆರ್ ಪಾಟೀಲ್, ಬಾಗಲಕೋಟೆ ಶಾಸಕ ಹೆಚ್ ವೈ ಮೇಟಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಬ್ಬರ ನಡುವಿನ ಕಿತ್ತಾಟದಲ್ಲಿ ಟಿಕೆಟ್ ಘೋಷಣೆ ತಡವಾಗುತ್ತಿದೆ ಎನ್ನಲಾಗ್ತಿದೆ.
