ಕರ್ನಾಟಕ ರಾಜ್ಯದಲ್ಲಿ ಬಹುಮತಗಳಿಸಿ ಕಾಂಗ್ರೆಸ್ ಅಧಿಕಾರಕ್ಕೇನೋ ಬಂದಿದೆ, ಆದರೆ ಇನ್ನೂ ಸರ್ಕಾರ ರಚನೆಯಾಗಬೇಕಿದೆ. ಅಷ್ಟರಲ್ಲೇ ಜನರು, ಕಾಂಗ್ರೆಸ್ ಸರ್ಕಾರ ಬಂದಾಗಿದೆ ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.
“ಅದ್ಯಾವ್ ನನ್ ಮಗ ಬರ್ತಾನೆ ಬರ್ರಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅದ್ ಯಾರೆ ಬರ್ತಾರೆ ಬರ್ಲಿ, ನಾನ್ ಮಾತಾಡ್ತೀನಿ. ನೀವು ಇಲ್ಲಿಗೆ ಬರೋಕೆ ಹೋಗಬೇಡಿ, ನಾವ್ ಕರೆಂಟ್ ಬಿಲ್ ಕಟ್ಟಲ್ಲ” ಎಂದು ಮಹಿಳೆ ವಿದ್ಯುತ್ ಬಿಲ್ ಕೊಡಲು ಬಂದ ಸಿಬ್ಬಂದಿಗೆ ಆವಾಜ್ ಹಾಕಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿವೆ.