• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Congress Guarantee | ಬಹು ಬೇಡಿಕೆಯ ಗ್ಯಾರಂಟಿ ನಾಳೆ ಫೈನಲ್, ಗುರುವಾರದಿಂದಲೇ ಗ್ಯಾರಂಟಿ..!

Any Mind by Any Mind
May 30, 2023
in Top Story, ಇತರೆ / Others, ಇದೀಗ
0
Congress Guarantee | ಬಹು ಬೇಡಿಕೆಯ ಗ್ಯಾರಂಟಿ ನಾಳೆ ಫೈನಲ್, ಗುರುವಾರದಿಂದಲೇ ಗ್ಯಾರಂಟಿ..!
Share on WhatsAppShare on FacebookShare on Telegram

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರ ಜೊತೆಗೆ ಪ್ರತ್ಯೇಕವಾಗಿ ಪ್ರಣಾಳಿಕೆಯನ್ನೂ ನೀಡಿತ್ತು. ಪ್ರಣಾಳಿಕೆ ಜಾರಿ ಸ್ವಲ್ಪ ತಡವಾದರೂ 5 ಗ್ಯಾರಂಟಿ ಯೋಜನೆಗಳ ಜಾರಿ ಮಾಡುವುದು ತಡ ಆಗುವುದಿಲ್ಲ ಎನ್ನುವ ಭರವಸೆನ್ನು ನೀಡಿತ್ತು. ಮೊದಲ ಕ್ಯಾಬಿನೆಟ್​ನಲ್ಲೇ ಗ್ಯಾರಂಟಿ ಜಾರಿ ಬಗ್ಗೆ ಹೇಳಿಕೊಂಡಿದ್ದ ಕಾಂಗ್ರೆಸ್​ ಪಕ್ಷ, ಇದೀಗ ಮೊದಲ ಕ್ಯಾಬಿನೆಟ್​ನಲ್ಲಿ ತಾತ್ವಿಕ ಒಪ್ಪಿಗೆ ನೀಡಿ ಜನರ ಆಶಯದಂತೆ ಕೆಲಸ ಮಾಡುವ ಮುನ್ಸೂಚನೆ ನೀಡಿದೆ. ಆದರೆ ಜನರು ಗ್ಯಾರಂಟಿಗಳು ಜಾರಿ ಆಗುವುದು ಯಾವಾಗ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಅದರಲ್ಲಿ ಬಹು ಬೇಡಿಕೆಯ ಗ್ಯಾರಂಟಿ ಅಂದ್ರೆ 200 ಯೂನಿಟ್​ ವಿದ್ಯುತ್​ ಉಚಿತ ಹಾಗು ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣ.

ADVERTISEMENT

ಸಾರಿಗೆ ನಿಗಮಗಳ ಎಂಡಿ ಜೊತೆ ಸಾರಿಗೆ ಸಚಿವರ ಸಭೆ

ಗುರುವಾರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇದೀಗ ಸಾರಿಗೆ ನಿಗಮಗಳ ಸದ್ಯದ ಸ್ಥಿತಿಗತಿ ಹಾಗು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಟ್ಟರೆ ಆಗಬಹುದಾದ ನಷ್ಟ. ಎಲ್ಲಾ ಆಯಾಮದಿಂದಲೂ ಸಚಿವರು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಭೆಯಲ್ಲಿ ನಾಲ್ಕು ನಿಗಮಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿವೆ..? ಯಾವ ನಿಗಮ ಎಷ್ಟು ಆದಾಯ ಗಳಿಸುತ್ತಿವೆ..? ಎಷ್ಟು ನಷ್ಟದಲ್ಲಿವೆ? ಎನ್ನುವ ಮಾಹಿತಿ ಪಡೆದ ಬಳಿಕ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದರೆ ಪ್ರತಿ ವರ್ಷ ಅಂದಾಜು 3200 ಕೋಟಿ ಖರ್ಚು ಆಗಲಿದೆ ಎನ್ನುವ ಮಾಹಿತಿ ಪಡೆದಿದ್ದಾರೆ.

ಕೊರೊನಾ ಕಾಲದಲ್ಲಿ ಸಾರಿಗೆ ಸಂಸ್ಥೆಗಳಿಗೆ ನಷ್ಟ..

ಕೊರೊನಾ ಕಾಲದಲ್ಲಿ ಸಾರಿಗೆ ಸಂಚಾರ ಬಂದ್​ ಆಗಿದ್ದರಿಂದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಸರ್ಕಾರ ಸಹಾಯಧನ ನೀಡಿದ್ರೆ ಮಹಿಳೆಯರಿಗೆ ಉಚಿತ ಸಂಚಾರದ ಯೋಜನೆ ಜಾರಿಗೆ ಅನುಕೂಲವಾಗುತ್ತದೆ. ಕೊರೊನಾ ಕಾಲದ ನಷ್ಟ ಸರಿದೂಗಿಸಲು ಬ್ಯಾಂಕ್​ಗಳಲ್ಲಿ ಸಾಲ ಪಡೆಯಲಾಗಿದೆ. ಸಾರಿಗೆ ನಿಗಮದ ಕೆಲವು ಆಸ್ತಿಗಳನ್ನು ಅಡಮಾನ ಇಡಲಾಗಿದೆ. ಈಗಾಗಲೇ ಹಲವು ರೀತಿಯ ಪಾಸ್​ಗಳಿಂದ ನಿಗಮಗಳಿಗೆ ಸಾವಿರಾರು ಕೋಟಿ ಹಣ ಬರಬೇಕಿದೆ. ನೌಕರರಿಗೆ ಸಂಬಳ ನೀಡಲು ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಕೂಡ ಗ್ಯಾರಂಟಿಗಳ ಜಾರಿಗೆ ಕಸರತ್ತು ಮಾಡಿದ್ದು, ಶಕ್ತಿ ಭವನದಲ್ಲಿ ಯೋಜನಾ ವರದಿಗಳ ಮೇಲೆ ಚರ್ಚೆ ಮಾಡಲಾಗ್ತಿದೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ ನಿರ್ಬಂಧ ಇಲ್ಲ..!

ಸಾರಿಗೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ ಬಳಿಕ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಸಭೆ ಇದೆ. ನಾಳೆ ಸಿಎಂ ಸಿದ್ದರಾಮಯ್ಯ ಫೈನಲ್ ಮಾಡ್ತಾರೆ. ಇಂದಿನ ಸಭೆಯಲ್ಲಿ ಅಧಿಕಾರಿಗಳು ಮೂರ್ನಾಲ್ಕು ಆಯ್ಕೆಗಳನ್ನು ತಿಳಿಸಿದ್ದಾರೆ. ಮಹಿಳೆಯರಿಗೆ ಉಚಿತ ಸಂಚಾರ ಯೋಜನೆ ಜಾರಿ ಮಾಡೋದ್ರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ. 4 ನಿಗಮಗಳಲ್ಲಿ ಒಟ್ಟು 23,978 ವಾಹನಗಳಿವೆ. 1,04650 ಜನ ಸಿಬ್ಬಂದಿಗಳಿದ್ದಾರೆ. 4,449 ಬಸ್‌ಗಳು ಹೊಸದಾಗಿ ಸೇರ್ಪಡೆಯಾಗಲಿದೆ. 82 ಲಕ್ಷದ 51ಸಾವಿರ ಪ್ರಯಾಣಿಕರು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರಸಿದ್ಧ ಸಾರಿಗೆ ಸಂಸ್ಥೆ ಆಗಿ KSRTC , BMTC ಬೆಳೆದಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಬಸ್ ಇರಲ್ಲ. ನಾಲ್ಕು ನಿಗಮದ ಬಸ್​ಗಳಲ್ಲೇ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿದೆ ಎಂದಿದ್ದಾರೆ ಸಚಿವ ರಾಮಲಿಂಗಾ ರೆಡ್ಡಿ. ಇನ್ನು ಉಚಿತ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇರಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುವ ಸಚಿವರು, ನಾಳೆ ಈ ಬಗ್ಗೆ ಸಿಎಂ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ನಾವು ಬಿಜೆಪಿಯವರ ಹತ್ರ ಹೇಳಿಸಿಕೊಳ್ಳಬೇಕಿಲ್ಲ. ಅವರು ಪ್ರತಿಭಟನೆ ಮಾಡೋದಕ್ಕೆ ಅವಕಾಶವನ್ನೇ ನೀಡಲ್ಲ ಎಂದಿದ್ದಾರೆ.

ಕೃಷ್ಣಮಣಿ

Tags: 200 units of free electricity5 guaranteescmsiddaramiahCongress GovernmentCongress GuaranteeDCM DK ShivakumarDKShivakumarfree bus travel for womenlatestnewsmanifestoRamalinga Reddysiddaramaiah
Previous Post

Actor Dhanush and Baba Ramdev : ನಟ ಧನುಷ್ ಮತ್ತು ಬಾಬಾ ರಾಮ​ದೇವ್ ಫೋಟೋ ಸಖತ್‌ ವೈರಲ್..!

Next Post

Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ

Related Posts

ಪತಿಯ ಶವದ ಜೊತೆಗೆ 10 ದಿನ ಕಳೆದ ಪತ್ನಿ: ಚಿಕ್ಕಮಗಳೂರಿನಲ್ಲಿ ಮನಕಲುಕುವ ಘಟನೆ
Top Story

ಪತಿಯ ಶವದ ಜೊತೆಗೆ 10 ದಿನ ಕಳೆದ ಪತ್ನಿ: ಚಿಕ್ಕಮಗಳೂರಿನಲ್ಲಿ ಮನಕಲುಕುವ ಘಟನೆ

by ಪ್ರತಿಧ್ವನಿ
April 9, 2026
0

ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಪ್ರದೇಶದಲ್ಲಿ ಮಾನವೀಯತೆ ಕಲುಕುವ ಘಟನೆ ಬೆಳಕಿಗೆ ಬಂದಿದೆ. ವೃದ್ಧನೊಬ್ಬರು ಮೃತಪಟ್ಟ ಬಳಿಕ, ಅವರ ಮಾನಸಿಕ ಅಸ್ವಸ್ಥ ಪತ್ನಿ ಸುಮಾರು 10 ದಿನಗಳ ಕಾಲ...

Read moreDetails
ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

ಆರ್ ಎಸ್ ಎಸ್ ವಿರುದ್ಧ  ಖರ್ಗೆ ದ್ವೇಷ ಭಾಷಣ ಆರೋಪ: ಬಿಜೆಪಿ ದೂರು

April 7, 2026
ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

ಶಬರಿಮಲೆ ಪ್ರವೇಶ ವಿಚಾರ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸ್ಪಷ್ಟನೆ

April 7, 2026
ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

ರಾಜ್ಯಪಾಲರ ವಿರುದ್ಧ ಟೀಕೆ: “ಕನ್ನಡ ವಿರೋಧಿ ಧೋರಣೆ ಬಿಡಲಿ, ರಾಜೀನಾಮೆ ನೀಡಲಿ” ಒತ್ತಾಯ

April 6, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
Next Post
Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ

Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada