ಹಾಸನದ ಸ್ವಾಭಿಮಾನಿ ಸಮಾವೇಶ ಯಶಸ್ವಿಯಾದ ಬೆನ್ನಲ್ಲೇ ಉತ್ತರ ಕರ್ನಾಟಕ (Uttara Karnataka) ಭಾಗದಲ್ಲೂ ಅದೇ ಮಾದರಿಯಲ್ಲೇ ಜನ ಕಲ್ಯಾಣ ಸಮಾವೇಶ ಆಯೋಜನೆ ಮಾಡಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.ಉಪ ಚುನಾವಣೆ ಗೆಲುವಿನ ಹುಮ್ಮಸ್ಸು ಹಾಗೂ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಲು ಈ ಸಮಾವೇಶದ ಪ್ಲಾನ್ ಮಾಡಲಾಗಿದೆ.

ನಿನ್ನೆ (ಡಿ.5) ಹಾಸನದಲ್ಲಿ (Hassan) ಕಾಂಗ್ರೆಸ್ ಬೃಹತ್ ಜನ ಕಲ್ಯಾಣ ಸಮಾವೇಶವನ್ನ ಮಾಡಿದ್ದು, ಈ ಸಮಾವೇಶ ಭರ್ಜರಿ ಯಶಸ್ಸನ್ನ ಕಂಡಿತ್ತು. ಇದ್ರಿಂದ ಹಳೇ ಮೈಸೂರು ಭಾಗದಲ್ಲಿ ಸರ್ಕಾರ ಹಾಗೂ ಪಕ್ಷದ ಪರ ಅಪಾರ ಜನ ಬೆಂಬಲ ವ್ಯಕ್ತವಾಗಿದೆ.
ಹೀಗಾಗಿ ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ ಕೂಡ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಜೊತೆಗೆ ಸರ್ಕಾರದ ಪಾರದರ್ಶಕ ಆಡಳಿತದ ಬಗ್ಗೆ ಜನರಿಗೆ ತಿಳಿಸಲು ಮತ್ತೊಂದು ಸಮಾವೇಶ ಮಾಡಲು ಮುಂದಾಗಿದೆ.










