ನ್ಯಾಷನಲ್ ಹೆರಾಲ್ಡ್ಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿಯನ್ನು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು ಇತ್ತ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ.
ಇಲ್ಲಿವೆ ಪ್ರಮುಖ ಅಂಶಗಳು
1) ಇನ್ನೆರಡು ದಿನಗಳಲ್ಲಿ ಸೋನಿಯಾ ಗಾಂಧಿರನ್ನು ಇನ್ನೊಂದು ಸುತ್ತಿನ ವಿಚಾರಣೆಗೆ ಕರೆಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿಗೆ ಕೋವಿಡ್ನಿಂದ ಚೇತರಿಸಿಕೊಂಡಿರುವ ಸೋನಿಯಾ ಗಾಂಧಿರನ್ನು ಕೋವಿಡ್ ಪ್ರೋಟೋಕಾಲ್ ದರಷ್ಟಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸಲಾಗಿದೆ.
2) ಸೋನಿಯಾದ ವಿಚಾರಣೆಯನ್ನು ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಐವರು ಮಹಿಳಾ ಅಧಿಕಾರಿಗಳು ನಡೆಸಿದ್ದಾರೆ. ತನಿಖಾ ಸಂಸ್ಥೆಯು ಒಟ್ಟು 50 ಪ್ರಶ್ನೆಗಳನ್ನು ಕೇಳಿದೆ ಎಂದು ತಿಳಿದು ಬಂದಿದೆ.
3) ಗುರುವಾರ ಮಧ್ಯಾಹ್ನದ ನಂತರ ಇಡಿ ಕಚೇರಿಗೆ ಆಗಮಿಸಿದ ಸೋನಿಯಾಗೆ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕ ಗಾಂದಿ ಸಾಥ್ ನೀಡಿದ್ದರು. ಸೋನಿಯಾರ ಜೊತೆ ಪುತ್ರಿ ಪ್ರಿಯಾಂಕ ವಾದ್ರಾ ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಕಚೇರಿಯ ಒಳಗೆ ಉಳಿದುಕೊಂಡಿದ್ದರು.
4) ಇತ್ತ ಸೋನಿಯಾ ಇಡಿ ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದ ಕಾಂಗ್ರೆಸ್ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದೆ.
5) ಇತ್ತ ದೇಶಾದ್ಯಂತ ಬಿಜೆಪಿ ವಿರುದ್ದ ಪ್ರತಿಭಟನೆಗೆ ಕರೆ ಕೊಟ್ಟಿದ್ದ ಕಾಂಗ್ರೆಸ್ ತನ್ನ ಆಕ್ರೋಶವನ್ನ ಹೊರಹಾಕಿದೆ. ಕೆಲವೆಡೆ ರಸ್ತೆ ಬಂದ್ ಮಾಡಿದರೆ, ಕೆಲವೆಡೆ ರೈಲ್ ಬಂದ್ ಮಾಡಲಾಯಿತ್ತು ಇನ್ನು ಕೆಲವೆಡೆ ಕಾರು ಹಾಗೂ ಬೈಕ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಯಿತು.
6) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಬಗೆಗ್ಗಿನ ಕಲ್ಪನೆಯೂ ನಮ್ಮ ಪಕ್ಷದ ನಾಯಕರಿಂದ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಹಾಗೂ ಗಾಂಧೀ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ಪ್ರಧಾನಿ ಮತ್ತೊಮ್ಮೆ ಹುಟ್ಟಿಬರಬೇಕು ಎಂದು ಕಾಂಗ್ರೆಸ್ ಕಿಡಿಕಾರಿದೆ.
7) ಇತ್ತ ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿರುವ ಬಿಜೆಪಿ ದುರಾಘರ್(ಹಠಮಾರಿ ಧೋರಣೆ) ಎಂದು ಟೀಕಿಸಿದೆ. ಕಾಂಗ್ರೆಸ್ ಒಂದು ಕುಟುಂಬದ ಸಂಘಟನೆಯಾಗಿ ಮಾರ್ಪಟ್ಟಿದೆ ಹಾಗೂ ಅದರ ಆಸ್ತಿಯನ್ನು ಸಹ ಕುಟುಂಬವೇ ಅನುಭವಿಸುತ್ತಿದೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
8) ಇಂದು ಮುಂಜಾನೆ ಕಾಂಗ್ರೆಸ್ ನಡೆಸಿದ ಸಭೆಯಲ್ಲಿ ಒಟ್ಟು 13 ಸಮಾನ ಮನಸ್ಕ ವಿರೋಧ ಪಕ್ಷಗಳು ಭಾಗಿಯಾಗಿದ್ದವು. ಆಡಳಿತರೂಢ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿವೆ.
9) ಒಟ್ಟು ಮೂರು ಭಾರೀ ಸಮನ್ಸ್ ನೀಡಲಾಗಿದ್ದು ಕೋವಿಡ್ ಕಾರಣದಿಂದಾಗಿ ಜೂನ್ 8 ಹಾಗೂ ಜೂನ್ 23ರಂದು ವಿಚಾರಣೆಗೆ ಹಾಜರಾಗಿರಲಿಲ್ಲ.
10) ಇತ್ತ ಕರ್ನಾಟಕದಲ್ಲಿ ಕೆಪಿಸಿಸಿ ವತಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಮ್ಮ ಕಾರಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.