ಬೆಳಗಾವಿಯಲ್ಲಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾಗಿಗೆ ಆಗ್ರಹ ಮಾಡಿ ಕಳೆದ ನಾಲ್ಕು ವರ್ಷಗಳಿಂದ ಶಾಂತಿಯುತ ಹೋದಾಟ ನಡೆಸುತ್ತಿದ್ದೇವೆ. ಚನ್ನಮ್ಮನ ನಾಡಿನಲ್ಲಿ ಕಾಂತ್ರಿ ಆರಂಭವಾಗಿದೆ. ಕ್ರಾಂತಿಯನ್ನು ಮಾಡಲು ಸರ್ಕಾರ ಬಡಿದೆಬ್ಬಿಸಿದೆ. ನಮ್ಮ ಹೋರಾಟಕ್ಕೆ ವಕೀಲರು ಬೆಂಬಲ ಕೊಟ್ಟ ಹಿನ್ನೆಲೆ ಕ್ರಾಂತಿಗೆ ನಾಂದಿ ಹಾಡಿದೆ ಎಂದಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವುದು ಸಂವಿಧಾನ ಬಾಹಿರ ಅನ್ನೋ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಸ್ವಾಮೀಜಿ, ಅಂಬೇಡ್ಕರ್ ಅವರ ಸಂವಿಧಾನದ ರೀತಿಯಲ್ಲಿ ಬದುಕಿದ್ದೇವೆ. ಸಮಾಜದ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳಕಳಿ ಇಲ್ಲದೇ ಇದ್ರೆ. ನಮಗೆ ಮೀಸಲಾತಿ ಕೊಡಲ್ಲ ಎಂದು ಹೇಳಲಿ ಪರವಾಗಿಲ್ಲ ಎಂದಿದ್ದಾರೆ. ಹೋರಾಟ ಸಂವಿಧಾನ ವಿರೋಧಿ ಎನ್ನುವ ಹೇಳಿಕೆ ವಾಪಸ್ ಪಡೆಯಬೇಕು. ಸಿಎಂ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಲಿಂಗಾಯತ ಸಂವಿಧಾನ ವಿರೋಧಿ ಆಗಿದ್ರೆ ಮತದ ಹಕ್ಕು ಹೇಗೆ ಬರೋಕೆ ಸಾಧ್ಯ..? ನಮ್ಮ ಲಿಂಗಾಯತ ಶಾಸಕರನ್ನು ತೆಗೆದು ಹಾಕಿ. ನಮ್ಮ ಹೋರಾಟಕ್ಕೆ ಹಿಂದೆ ಕಾಂಗ್ರೆಸ್ ಶಾಸಕರು ಬೆಂಬಲ ಕೊಟ್ಟಿದ್ರು. ನಮ್ಮ ಹೋರಾಟ ಸಂವಿಧಾನ ವಿರೋಧವಾಗಿದ್ದರೆ ಯಾಕೆ ಹೋರಾಟಕ್ಕೆ ಅನುಮತಿ ಕೊಟ್ಟಿರಿ. ನಿಮಗೆ ನಮ್ಮ ಬಗ್ಗೆ ಕಳಕಳಿ ಇಲ್ಲ. ನಮ್ಮ ಶಾಸಕರಿಗೆ ಬೈದು, ಅಪಮಾನ ಮಾಡಿದ್ರು. ಜಿಲ್ಲಾಧಿಕಾರಿ ಮೂಲಕ ಟ್ರ್ಯಾಕ್ಟರ್ ಱಲಿ ನಿಲ್ಲಿಸುವ ಕೆಲಸ ಮಾಡಿದ್ರು. ನಮ್ಮ ಹೋರಾಟವನ್ನು ಹತ್ತಿಕ್ಕಲು ದನಕ್ಕೆ ಬಡಿದಂಗೆ ಬಡಿಸಿದ್ರು ಎಂದು ಕಿಡಿಕಾರಿದ್ದಾರೆ.
ನಮ್ಮ ಹೋರಾಟದ ವೇದಿಕೆಗೆ ಸಚಿವೆ ಹೆಬ್ಬಾಳ್ಕರ್, ಬಾಬಾ ಸಾಹೇಬ್ ಪಾಟೀಲ್, ಚನ್ನರಾಜ್ ಬಂದಿದ್ರು. ಹೋರಾಟದಲ್ಲಿ ಪಾಲ್ಗೊಂಡ ಸಚಿವರು, ಶಾಸಕರನ್ನ ತಾಕತ್ ಇದ್ರೆ ವಜಾಗೊಳಿಸಿ. ನ್ಯಾಯ ಪಡೆಯಲು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದಿದ್ದೀರಿ. ನಮ್ಮ ಸಮಾಜಕ್ಕೆ ಬೈಯುವ ಮೂಲಕ ಬಸವಣ್ಣನಿಗೆ ಅಪಮಾನ ಮಾಡಿದ್ದೀರಿ. ಲಿಂಗಾಯತರ ಸ್ವಾಭಿಮಾನ ಕೆಣಕುವ ಯತ್ನ ಮಾಡಿದ್ದೀರಿ. ಡಿಸೆಂಬರ್ 16 ರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಮಾಡ್ತಿವಿ. ಅಧಿವೇಶನ ಇರೋವರೆಗೆ ಧರಣಿ ಸತ್ಯಾಗ್ರಹ ಮಾಡ್ತೀನಿ ಎಂದಿದ್ದಾರೆ.
10 ಸಾವಿರ ಜನ ಬಂದ್ರೆ ಮುತ್ತು ಕೊಡೊಕೆ ಆಗುತ್ತಾ ಎನ್ನುವ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಗೃಹ ಸಚಿವ ಜಿ ಪರಮೇಶ್ವರ ನಮ್ಮನ್ನು ಪ್ರೀತಿ ಮಾಡುವ ವ್ಯಕ್ತಿ. ನೀವು ಓದಿದ್ದಿದ್ದು, ಉಳಿದಿದ್ದು ಸಿದ್ದಗಂಗಾ ಮಠದಲ್ಲಿ. ಸಿದ್ದಗಂಗಾ ಮಠಕ್ಕೆ ಅಪಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ತುತ್ತು ಕೊಟ್ಟ ಸಮಾಜಕ್ಕೆ ನೀವು ಅವೈಜ್ಞಾನಿಕ ಹೇಳಿಕೆ ಕೊಟ್ಟು ಅಪಮಾನ ಮಾಡಿದ್ದೀರಿ. ಲಿಂಗಾಯತ ಮೇಲಿನ ಹಲ್ಲೆಯನ್ನು ಖಂಡಿಸಿ. ಕೊರಟಗೆರೆ ಕ್ಷೇತ್ರದ ಲಿಂಗಾಯತ ಜನರು ಧರಣಿ ಮಾಡಬೇಕು. ವಿಷ ಕೊಟ್ಟರು ನಾವು ಅನ್ನ ಕೊಡುವ ಸಮಾಜ ನಮ್ಮದು ಎಂದಿದ್ದಾರೆ.