ಬೆಂಗಳೂರು (Bengaluru): ಮಹಿಳೆಯರ ಪ್ರೀಮಿಯರ್ ಲೀಗ್ 2024 (WPL) ನಲ್ಲಿ RCB ತಂಡ ಡೆಲ್ಲಿ ಕಾಪಿಟಲ್ಸ್ (Delhi Capitals) ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯಗಳಿಸಿ ಟ್ರೋಫಿ ಎತ್ತಿ ಹಿಡಿದಿದೆ.
ಚೊಚ್ಚಲ ಟ್ರೋಫಿ ಗೆದ್ದು ದಾಖಲೆ ಬರೆದ ಸ್ಮೃತಿ ಮಂದಾನ (Smriti Mandhana) ನಾಯಕತ್ವದ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಅನೇಕರು ವನಿತೆಯರ ತಂಡವನ್ನು ಅಭಿನಂದಿಸಿದ್ದಾರೆ.
ಕೊಹ್ಲಿ ವಿಡಿಯೋ ಕಾಲ್

ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಗೆಲ್ಲುತ್ತಿದ್ದಂತೆ ಆರ್‌ಸಿಬಿ ಪುರುಷರ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ವಿಡಿಯೋ ಕರೆ ಮೂಲಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ವಿರಾಟ್ ಕೊಹ್ಲಿ ಮಹಿಳಾ ತಂಡದ ಜೊತೆ ಮಾತನಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆನಂದ..ಪರಮಾನಂದ: ಚಹಲ್

ಆರ್‌ಸಿಬಿ ಮಹಿಳಾ ತಂಡ ಚಾಂಪಿಯನ್ ಆಗುತ್ತಿದ್ದಂತೆ ಬೆಂಗಳೂರು ತಂಡದ ಮಾಜಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal ) ವಿಭಿನ್ನ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ” ಆನಂದ..ಪರಮಾನಂದ…ಪರಮಾನಂದ.. ನಮ್ಮ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು,” ಎಂದು ಚಹಲ್ ಕನ್ನಡದಲ್ಲಿ ಅಭಿನಂದಿಸಿದ್ದಾರೆ.
ನಮ್ಮ ಹುಡುಗಿಯರಿಗೆ ಅಭಿನಂದನೆಗಳು: ದಿನೇಶ್ ಕಾರ್ತಿಕ್

ಚಾಂಪಿಯನ್ ಆರ್‌ಸಿಬಿ ಮಹಿಳಾ ತಂಡವನ್ನು ಆರ್‌ಸಿಬಿ ಪುರುಷರ ತಂಡದ ದಿನೇಶ್ ಕಾರ್ತಿಕ್ (Dinesh Karthik) “ಆರ್‌ಸಿಬಿ…. ಎಂಥಾ ಅದ್ಭುತ ಪ್ರದರ್ಶನ…ನಮ್ಮ ಹುಡುಗಿಯರಿಗೆ ಅಭಿನಂದನೆಗಳು,” ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನೀವು ಎಷ್ಟು ಸುಂದರ ಎಂದ ಮ್ಯಾಕ್ಸ್ ವೆಲ್

ಆರ್ ಸಿಬಿಯ ಮತ್ತೊಬ್ಬ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅಭಿನಂದಿಸಿದ್ದಾರೆ. “ನೀವು ಎಷ್ಟು ಸುಂದರ ಆರ್‌ಸಿಬಿ,” ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊನೆಗೂ ಈ ಸಲ ಕಪ್ ನಮ್ದು : ಕ್ರಿಸ್ ಗೇಲ್

ಆರ್‌ಸಿಬಿ ಪುರುಷರ ತಂಡದ ಪರ ಹಲವು ವರ್ಷಗಳ ಕಾಲ ಆಡಿದ್ದ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ (Chris Gayle) ಅವರು ಕೂಡ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಆರ್‌ಸಿಬಿ ವುಮೆನ್ಸ್ ಡಬ್ಲ್ಯುಪಿಎಲ್ ಚಾಂಪಿಯನ್ಸ್‌ಅಸಾಧಾರಣ ಆವೃತ್ತಿ ಆಡಿದ ನಿಮಗೆ ಅಭಿನಂದನೆಗಳು. ಕೊನೆಗೂ ಈ ಸಲ ಕಪ್ ನಮ್ದು ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಗೆದ್ದ ಆರ್‌ಸಿಬಿ ಮಹಿಳಾ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು. ದೀರ್ಘಾವಧಿಯಿಂದ ಕಪ್ ಗೆಲ್ಲದೇ ಉಳಿದಿರುವ ಆರ್‌ಸಿಬಿ ಪುರುಷರ ತಂಡ ಕೂಡ ಐಪಿಎಲ್ ಗದ್ದರೆ ಅದು ಅದ್ಭುತವಾಗಿರಲಿದೆ. ಒಳ್ಳೆಯದಾಗಲಿ,” ಎಂದು ಆರ್‌ಸಿಬಿಯ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya) ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
#wpl #wpl2024 #cricket #rcb #rcbwomensteam