• Home
  • About Us
  • ಕರ್ನಾಟಕ
Thursday, December 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

BUDGET: ಯಾವ ಇಲಾಖೆಗೆ ಎಷ್ಟು ಅನುದಾನ ಪ್ರತಿಧ್ವನಿಯಲ್ಲಿ ಸಂಪೂರ್ಣ ಮಾಹಿತಿ..

ಪ್ರತಿಧ್ವನಿ by ಪ್ರತಿಧ್ವನಿ
March 8, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ರಾಜ್ಯದಲ್ಲಿನ ಗುರುದ್ವಾರಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪನೆ ಎರಡು ಕೋಟಿ ರೂಗಳ ಅನುದಾನ
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದು ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸುವುದು: ಕುಮಾರವ್ಯಾಸ

ADVERTISEMENT

ಕೆ ಇ ಎ ಮುಖಾಂತರ ವೃತ್ತಿಪರ ಪೋಸ್ಟ್ ಗಳಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಂಪರ್ ಘೋಷಣೆ ವಿದ್ಯಾರ್ಥಿಗಳ 5 ಲಕ್ಷ ರೂಗಳಿಗಿನ ಸೀಮಿತಗೊಂಡ ಶುಲ್ಕದಲ್ಲಿ 50% ರಷ್ಟು ಮರುಪಾವತಿ

ಅಲ್ಪಸಂಖ್ಯಾತ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ 25 26 ನೇ ಸಾಲಿನಲ್ಲಿ ಹೊಸ 16 ಮಹಿಳಾ ಕಾಲೇಜುಗಳ ಸ್ಥಾಪನೆ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ಮೌಲ್ಯ ಹೆಚ್ಚಳ 20 ಲಕ್ಷಗಳಿಂದ 30 ಲಕ್ಷ ರೂಗಳಿಗೆ ಹೆಚ್ಚಿಗೆ

ಅಲ್ಪಸಂಖ್ಯಾತ ವರ್ಗಕ್ಕೆ ಮತ್ತೊಂದು ಬಂಪರ್ ಘೋಷಿಸಿದ ರಾಜ್ಯ ಸರ್ಕಾರ ಜೈನ ಸಿಖ್ ಮಸೀದಿಗಳ ಇಮಾಮ್ ಗಳಿಗೆ ನೀಡುತ್ತಿದ್ದ ಮಾಸಿಕ ಗೌರವಧನದಲ್ಲಿ ಏರಿಕೆ, ಮಾಸಿಕ ಗೌರವದನ 6,000ಗಳಿಗೆ ಹೆಚ್ಚಳ ಸಹಾಯಗಳಿಗೆ ಹೆಚ್ಚಳ

ಸಮಾಜ ಕಲ್ಯಾಣ ಇಲಾಖೆ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರ ಕಾಲೋನಿಗಳ ಅಭಿವೃದ್ಧಿಗೆ 100 ಕೋಟಿ ರೂಗಳ ಅನುದಾನ

ಜೈನ ಬೌದ್ಧ ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂಗಳ ಅನುದಾನ ಮೀಸಲು

ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಐಎಎಸ್ ಐಪಿಎಸ್ ಕೆಎಎಸ್ ಕೆಎಸ್ಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ಬೆಂಗಳೂರಿ ನಗರದಲ್ಲಿ ಎರಡು ಸುಸಜ್ಜಿತ ವಸತಿ ನಿಲಯಗಳ ಪ್ರಾರಂಭ

ಬುಡಕಟ್ಟು ಜನಾಂಗಕ್ಕೆ ರಾಜ್ಯ ಸರ್ಕಾರದ ಬಂಪರ್ ಆಫರ್ 13 ಬುಡಕಟ್ಟು ಜನಾಂಗಗಳಿಗೆ ರಾಜ್ಯದ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ಅವಕಾಶಕ್ಕಾಗಿ ವಿಶೇಷ ನಿರ್ನಾಮಕಾತಿ ನಿರ್ಧಾರ

ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 250 ಕೋಟಿ ರೂಪಾಯಿಗಳ ಅನುದಾನ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮಹಿಳಾ ಸ್ವ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಾಲದ ಮತ ಏರಿಕೆ ಒಂದು ಲಕ್ಷದಿಂದ ಸಹಾಯಧನವನ್ನ ಎರಡೂವರೆ ಲಕ್ಷ ಗಳಿಗೆ ಏರಿಕೆ

ಜೇನು ಕುರುಬ ಈರುಳ್ಳಿಗ ಹೊರಗ ಸೋಲಿಗ ಎರವ ಪನಿಯನ್ ಹಲಸೂರು ಗೌಡಲು ಸಿದ್ದಿ ಬೆಟ್ಟ ಕುರುಬ ಕಾಡು ಕುರುಬ ಕುಡಿಯ ಮತ್ತು ಮಲೆಕುಡಿಯ ಈ 13 ಬುಡಕಟ್ಟು ಜನಾಂಗಕ್ಕೆ ವಿಶೇಷ ನೇರ ನೇಮಕಾತಿಯ ವ್ಯವಸ್ಥೆ

ಕೆಟಿಟಿಪಿ ಆಕ್ಟ್ ಎರಡು ಕೊಟಿ ಮೊತ್ತದವರೆಗಿನ ಕರ್ನಾಟಕದ ಅಭಿವೃದ್ಧಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಪಂಗಡ ಹಿಂದುಳಿದ ವರ್ಗಗಳ ಒಂದು ಟು ಎ ಮತ್ತು ಬಿ ಗುತ್ತಿಗೆದಾರರಿಗೆ ಮೀಸಲಾತಿ

ದೇಶದ ಪ್ರತಿಷ್ಠಿತ ನೂರು ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಅಥವಾ ನಾಥಕೋತರ ಪದವಿಗಳಿಗೆ ಪ್ರವೇಶ ಪಡೆಯುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲು ನಿರ್ಧಾರ

 ಪ್ರಸಕ್ತ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ

ಸಮಾಜ ಕಲ್ಯಾಣ ಇಲಾಖೆ ಅಡಿ ಬರುವ ನಿಗಮಗಳಿಗೆ 25/26ನೇ ಸಾಲಿನಲ್ಲಿ 488 ಕೋಟಿ ರೂಪಾಯಿಗಳ ಅನುದಾನ

ಚಿಕ್ಕಬಳ್ಳಾಪುರದಲ್ಲಿ ಅಂತರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ಕೆಜಿಎಫ್ ನಲ್ಲಿ ರೈತರ ಆಧುನಿಕ ಮಾರುಕಟ್ಟೆ ಸ್ಥಾಪನೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ರಚನೆ

ಬೆಂಗಳೂರಿನಲ್ಲಿರುವ ಮಾರುಕಟ್ಟೆ ಸಮಿತಿಗಳಲ್ಲಿ ವಾಹನ ದಟ್ಟಣೆ ಹೆಚ್ಚಳ ಈ ಹಿನ್ನೆಲೆಯಲ್ಲಿ ಪರವಲಯದಲ್ಲಿ ಹೊಸ ಸ್ಯಾಟಲೈಟ್ ಮಾರ್ಕೆಟ್ ಸ್ಥಾಪಿಸಲು ನಿರ್ಧಾರ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನದ ವ್ಯಾಪ್ತಿಯಲ್ಲಿ 33 ವಿಶೇಷ ಪೋಲಿಸ್ ಠಾಣೆಗಳನ್ನು ಪ್ರಾರಂಭಿಸಲು ನಿರ್ಧಾರ

ಮಹಿಳಾ ಕಲ್ಯಾಣ ಇಲಾಖೆಗೆ ಈ ಬಾರಿ 62,000 ಕೋಟಿಗಳ ಅನುದಾನ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಗೆ ಉತ್ತೇಜನ ಲ್ಬುರ್ಗಿಯಲ್ಲಿ ನೂತನ ಮೆಗಾ ಡೈರಿ ಪ್ರಾರಂಭಿಸಲು ಸಿದ್ಧತೆ ಕೆಕೆಆರ್‌ಡಿಬಿ ವತಿಯಿಂದ 50 ಕೋಟಿ ರೂಗಳ ಅನುದಾನ

ವಿಧಾನಸಭೆ

೧೫ ನಿಮಿಷ ನಿಂತೇ ಬಜೆಟ್ ಮಂಡಿಸಿದ ಸಿಎಂ  ನಂತರ ಕುಳಿತು ಬಜೆಟ್ ಓದುತ್ತಿರುವ ಸಿಎಂ

ಮೇಕೆದಾಟು ಜಲಾಶಯ ಯೋಜನೆ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದೆ ಕೇಂದ್ರ ಸರ್ಕಾರದ ಸಕ್ಶಮ ಪ್ರಾಧಿಕಾರದ ತಿರುವಳಿ ಸಿಕ್ಕ ತಕ್ಷಣವೇ ಯೋಜನೆಯ ಅನುಷ್ಠಾನ

ಬೆಂಗಳೂರು ಅಭಿವೃದ್ಧಿ ಗೆ ಸಿಎಂ ಸಿದ್ದರಾಮಯ್ಯ ರವರಿಂದ ಬರಪೂರ ಕೊಡುಗೆ

ಬರೋಬ್ಬರಿ 7 ಸಾವಿರ ಕೋಟಿ ರೂ ಅನುದಾನ ಬಜೆಟ್ ನಲ್ಲಿ ಘೋಷಣೆ

ಬೃಹತ್ ಅಭಿವೃದ್ಧಿ ಕಾಮಗಾರಿಗಳ ಆಧ್ಯತೆ ಮೇಲೆ ಹೊಸದಾಗಿ ಉದ್ದೇಶಿತ ಸಂಸ್ಥೆ ಸ್ಥಾಪನೆ

ಬೆಳವಣಿಗೆಯು ಶೇ. 7.4ರಷ್ಟು ದಾಖಲಾಗಿದ್ದು, ದೇಶದ ಆರ್ಥಿಕತೆಯು ಶೇ. 6.4ರಷ್ಟು ಬೆಳವಣಿಗೆಯಾಗಿದೆ. ರಾಜ್ಯವು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕತೆಗಿಂತ ಹೆಚ್ಚಾಗಿದೆ.

12. ಕಳೆದ ವರ್ಷದಲ್ಲಿ ಶೇ.-4.9 ರಷ್ಟು ಬೆಳವಣಿಗೆ ದಾಖಲಾಗಿದ್ದ ಕೃಷಿ ವಲಯವು. 2024-25ರಲ್ಲಿ ಶೇ. 4ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಚೇತರಿಕೆ ಕಂಡಿದ್ದು, ದೇಶದ ಕೃಷಿ ವಲಯದ ಬೆಳವಣಿಗೆ ಶೇ.3.8ಕ್ಕಿಂತ ಹೆಚ್ಚಾಗಿದೆ. ಮುಂಗಾರು ಬಿತ್ತನೆಗೆ ಸರ್ಕಾರದ ಸಕಾರಾತ್ಮಕ ಕ್ರಮಗಳೊಂದಿಗೆ ಉತ್ತಮ ಮುಂಗಾರು ಮತ್ತು ಜಲಾಶಯಗಳು ಭರ್ತಿಯಾಗಿದ್ದರಿಂದ 2024-25ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸಲು ಕಾರಣವಾಗಿದೆ. ರಾಜ್ಯ ಸರ್ಕಾರವು ರೈತರ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ವಿವಿಧ ಇಲಾಖೆಗಳಿಗೆ ಕಳೆದ ವರ್ಷ 44,000 ಕೋಟಿ ರೂ. ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಒಟ್ಟು 51,339 ಕೋಟಿ ರೂ. ಅನುದಾನವನ್ನು ನೀಡಿದೆ.

13. ಕೈಗಾರಿಕಾ ವಲಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸುವಲ್ಲಿ ಕರ್ನಾಟಕವು ನೆಚ್ಚಿನ ರಾಜ್ಯವಾಗಿದೆ. ನಮ್ಮ

ಸರ್ಕಾರವು ಹೆಚ್ಚಿನ ಉದ್ಯೋಗವನ್ನು ಸೃಜಿಸುವುದರೊಂದಿಗೆ, ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯ ಸರ್ಕಾರವು ಕೈಗಾರಿಕಾ ನೀತಿ 2025-30ಕ್ಕೆ ಚಾಲನೆ ನೀಡಿದ್ದು, ಇದು 2030 ರ ವೇಳೆಗೆ ಉತ್ಪಾದನಾ ವಲಯದಲ್ಲಿ ಶೇ.12ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ 20 ಲಕ್ಷ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ. 2024-25ನೇ ಸಾಲಿನಲ್ಲಿ ಕೈಗಾರಿಕಾ ವಲಯವು ಶೇ.5.8ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಒಟ್ಟು 13,692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನವನ್ನು ಒದಗಿಸಲು ಸರ್ಕಾರವು ಸಮ್ಮತಿಸಿದೆ.

14. ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯದ ಕೊಡುಗೆಯೂ ಪ್ರಮುಖವಾಗಿದ್ದು, ಒಟ್ಟು ಮೌಲ್ಯವರ್ಧನೆಯಲ್ಲಿ (Gross Value Added) ಸೇವಾ ವಲಯಗಳ ಪಾಲು ಶೇ.66 ರಷ್ಟಿದೆ. 2024-25ನೇ ಸಾಲಿಗೆ ರಾಜ್ಯದಲ್ಲಿ ಸೇವಾ ವಲಯವು ಗಣನೀಯವಾಗಿ ಬೆಳವಣಿಗೆಯಾಗಿದ್ದು, ಶೇ.8.9 ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2 ಕ್ಕಿಂತ ಹೆಚ್ಚಾಗಿದೆ.

ಆಯವ್ಯಯ 2025-26

48

ರೂ. ನಷ್ಟ ಅನುಭವಿಸಬೇಕಾಯಿತು. ಅಲ್ಲದೆ, 15ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 5.495 ಕೋಟಿ ರೂ.ಗಳ ವಿಶೇಷ ಅನುದಾನ, ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆಗಾಗಿ 3,000 ಕೋಟಿ ರೂ. ಮತ್ತು ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಸೇರಿ ಒಟ್ಟು 11,495 ಕೋಟಿ ರೂ.ಗಳನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು. ಆದರೆ, ಕೇಂದ್ರ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. 2023-24ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ.

20

19. ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಹೆಚ್ಚಿಸುವ ಬಗ್ಗೆ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯವು ಪ್ರಬಲವಾಗಿ ತನ್ನ ವಾದವನ್ನು ಪ್ರತಿಪಾದಿಸಿದೆ. ಆರೋಗ್ಯಕರ ಮತ್ತು ಸಾಮರಸ್ಯದ ಆರ್ಥಿಕ ಒಕ್ಕೂಟ ರೂಪಿಸಲು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಸಮಾನತೆ ಮತ್ತು ದಕ್ಷತೆಯನ್ನು ಆಧರಿಸಿ ಹಂಚಿಕೆ ಮಾಡುವಂತೆ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿದೆ. ಬಲಿಷ್ಠ ಆರ್ಥಿಕತೆ ಹೊಂದಿರುವ ರಾಜ್ಯಗಳು ಬಡ ರಾಜ್ಯಗಳಿಗೆ

ಹೊಣೆಗಾರಿಕೆ ಅಧಿನಿಯಮವನ್ನು ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತರುವ ಮುನ್ನವೇ ಜಾರಿಗೆ ತರಲಾಯಿತು. ಅಲ್ಲದೆ, ರಾಜ್ಯದ ಒಟ್ಟು ಹೊಣೆಗಾರಿಕೆಗಳಲ್ಲಿ ಆಯವ್ಯಯದ ಹೊರಗಿನ ಸಾಲಗಳನ್ನು ಪರಿಗಣಿಸಿದ ಮೊದಲ ರಾಜ್ಯ ಕರ್ನಾಟಕ. ಆದಾಗ್ಯೂ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ. ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸುವಂತಾಯಿತು.

18. 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ತೆರಿಗೆ ಪಾಲು ಶೇ. 4.713 ರಿಂದ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.647ಕ್ಕೆ ಇಳಿಕೆಯಾಯಿತು. ಇದರಿಂದಾಗಿ ರಾಜ್ಯದ ತೆರಿಗೆ ಹಂಚಿಕೆಯು ಶೇ.23ರಷ್ಟು ಕುಸಿತವಾಗಿ, ರಾಜ್ಯವು ವಾರ್ಷಿಕ ಅಂದಾಜು 12 ಸಾವಿರ ಕೋಟಿ

15. ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲು ಸರ್ಕಾರವು ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ ಸೇರಿದಂತೆ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಹಲವು ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವುದರ ಜೊತೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಉತ್ತೇಜಿಸಲಿವೆ. ಸರ್ಕಾರವು ಜಾರಿಗೆ ತಂದಿರುವ ಈ ನೀತಿಗಳಿಂದ ರಾಜ್ಯದಲ್ಲಿ ಅಂದಾಜು ಒಂದು ಲಕ್ಷ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಈ ಉದ್ದೇಶಕ್ಕೆ ಸರ್ಕಾರವು 13,500 ಕೋಟಿ ರೂ. ಸಹಾಯಧನ ಮತ್ತು ಆರ್ಥಿಕ ನೆರವು ನೀಡಲು ಸಹಮತಿಸಿದೆ.

16. ನಮ್ಮ ಸರ್ಕಾರವು ಆರ್ಥಿಕತೆಯ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ರ ನೀಡಿದ್ದು, 2024-25ರ ಡಿಸೆಂಬರ್ ಅಂತ್ಯದವರೆಗೆ 4.4 ಬಿಲಿಯನ್ ಡಾಲ‌ರ್ ಮೌಲ್ಯದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ.

182

ರಾಜ್ಯದ ಹಣಕಾಸು ಪರಿಸ್ಥಿತಿ

17. ಕರ್ನಾಟಕ ರಾಜ್ಯವು, ಸುಸ್ಥಿರ ಋಣ ನಿರ್ವಹಣೆ ಮತ್ತು ವಿತ್ತೀಯ ಶಿಸ್ತು ಪಾಲಿಸುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಉತ್ತಮವಾಗಿ ನಿಭಾಯಿಸಿದೆ. ನಮ್ಮ ರಾಜ್ಯದಲ್ಲಿ ವಿತ್ತೀಯ

ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದು ಆ ಕೃಷಿಯನುದ್ಯೋಗಿಸುವ ಜನವನು ಪಾಲಿಸುವುದು

ಕುಮಾರವ್ಯಾಸ

5. ರಾಜ್ಯದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು, ನಮ್ಮ ಸರ್ಕಾರವು ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ, ಈ ಯೋಜನೆಯಡಿ 10 ಹವಾಮಾನ ವಲಯಗಳಲ್ಲಿ ಕೃಷಿ ಇಲಾಖೆಯ ಅಧೀನದ ಕ್ಷೇತ್ರಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಅಭಿವೃದ್ಧಿಪಡಿಸಿ, ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರಚುರಪಡಿಸಲಾಗುವುದು.

. 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂ. ಅನುದಾನ ಕಲ್ಪಿಸಲಾಗುವುದು.

ಶಿಫಾರಸ್ಸಿನ ಅನ್ವಯ ಸರ್ಕಾರವು ಸಮಯಾನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

ಈ

23. ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಒದಗಿಸಲಾಗಿದೆ. ಕಳೆದ ಎರಡು ಆಯವ್ಯಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ. ಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿ. ಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿರುತ್ತದೆ ಎಂಬುದು ಗಮನಾರ್ಹ.

24. ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು.

25. ಸರ್ಕಾರವು ತನ್ನ ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಲು ಬದ್ಧವಾಗಿದೆ.

4 2025-26

ಈ ನಿಟ್ಟಿನಲ್ಲಿ ವಿವಿಧ ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ಕೃಷಿ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ‘ಬಿ’ ಮತ್ತು ‘ಸಿ’ ವೃಂದಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಜಾರಿಗೊಳಿಸಲಾಗುವುದು. ವಿವಿಧ ನಿಯಮಗಳ ಸರಳೀಕರಣದ ಮೂಲಕ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲಾಗುವುದು.

28

26. ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಸೂಚಿಸಿರುವ ಮಿತಿಯೊಳಗೆ ನಿರ್ವಹಿಸಿ, ನಾವು ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡುವುದರೊಂದಿಗೆ ಬಂಡವಾಳ ವೆಚ್ಚದಲ್ಲಿಯೂ ಗಣನೀಯ ಹೆಚ್ಚಳ ಮಾಡಿದ್ದು, ಹೆಮ್ಮೆಯ ಸಂಗತಿ.

27. ವಿತ್ತೀಯ ಶಿಸ್ತು ಕಾಯ್ದುಕೊಂಡು ಜನಕಲ್ಯಾಣ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಆಯವ್ಯಯ ಹಂಚಿಕೆ ಮಾಡುವುದರೊಂದಿಗೆ, ಬಂಡವಾಳ ವೆಚ್ಚಗಳಿಗೂ ಅನುದಾನ ಒದಗಿಸಿ, ರಾಜ್ಯದ 29 ಆರ್ಥಿಕತೆಯನ್ನು ಸದೃಢಗೊಳಿಸುವ ಅಂಶಗಳೊಂದಿಗೆ ಕಳೆದ ಸಾಲಿನ ಆಯವ್ಯಯ ಮಂಡಿಸಿದ್ದೆನು. ಇದೀಗ 2025-26ನೇ ಸಾಲಿನ ಆಯವ್ಯಯವನ್ನು ಸಹ ಇದೇ ಆಶಯದೊಂದಿಗೆ ಮಂಡಿಸುತ್ತಿದ್ದೇನೆ.

ಶೇ.40ಕ್ಕೆ ಮಿತಿಗೊಳಿಸಬೇಕು ಎಂದು ನಾವು 16ನೇ ಹಣಕಾಸು ಆಯೋಗಕ್ಕೆ ಒತ್ತಾಯ ಮಾಡಿದ್ದೇವೆ.

23.

21. ಈ ಸವಾಲುಗಳ ನಡುವೆಯೂ, ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೋಢೀಕರಣ ಕ್ರಮಗಳಿಂದ ರಾಜಸ್ವ ಸ್ವೀಕೃತಿಗಳು ಉತ್ತಮ ಬೆಳವಣಿಗೆ ಸಾಧಿಸಿದ್ದು, ರಾಜ್ಯದ ಅಭಿವೃದ್ಧಿ ಕುರಿತ ನಮ್ಮ ದೂರದೃಷ್ಟಿಯ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ. 2024-25ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು ವಾರ್ಷಿಕ ಶೇ. 10.3 ರಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ.

24-

22. 2024-25 14,500 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆಯಿದ್ದು, ಆಯವ್ಯಯ ಗುರಿಗಿಂತ ಹೆಚ್ಚು ಸಂಗ್ರಹವಾಗಲಿದೆ. ತೆರಿಗೆಯೇತರ ರಾಜಸ್ವವು ವರ್ಷವಾರು ಶೇ.10.5ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಆದರೂ ಜಿ.ಎಸ್.ಡಿ.ಪಿ.ಯ ಶೇಕಡಾವಾರು ಪರಿಗಣಿಸಿದಾಗ ತೆರಿಗೆಯೇತರ ಸಂಪನ್ಮೂಲ ಹೆಚ್ಚಳಕ್ಕೆ ವಿಪುಲ ಅವಕಾಶಗಳಿವೆ. ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯ ಸರ್ಕಾರವು ‘ಸಂಪನ್ಮೂಲ ಕ್ರೋಢೀಕರಣ ಸಮಿತಿ’ಯನ್ನು ರಚನೆ ಮಾಡಿರುತ್ತದೆ. ಈ ಸಮಿತಿಯು ಮಧ್ಯಂತರ ವರದಿಯನ್ನು ನೀಡಿದ್ದು, ಸಮಿತಿಯ

ನೆರವಾಗಲು ಬದ್ಧರಾಗಿದ್ದರೂ, ಅದು ತನ್ನ ನಾಗರೀಕರ ಹಿತ ಕಾಯುವಲ್ಲಿ ಅಥವಾ ಆರ್ಥಿಕ ಪ್ರಗತಿಗೆ ಕುಂದುಂಟು ಮಾಡುವಂತಿರಬಾರದು. ಆದಾಯ-ಅಂತರ ಮತ್ತು ತಲಾ ಆದಾಯ ನಿರ್ಧರಿಸುವ ಮಾನದಂಡಗಳಲ್ಲಿಯೂ ಲೋಪಗಳಿರುವ ಹಿನ್ನೆಲೆಯಲ್ಲಿ, ಈ ಮಾನದಂಡಗಳಿಗೆ ಕಡಿಮೆ ಅಂಕ ನೀಡುವಂತೆ ಮನವಿ ಮಾಡಿದ್ದೇವೆ.

20. ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಕನಿಷ್ಠ ಶೇ.50ರಷ್ಟು ಪಾಲನ್ನು ರಾಜ್ಯಗಳಿಗೆ ನೀಡಬೇಕು ಎಂದು ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸುತ್ತದೆ. ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸ‌ರಚಾರ್ಜ್‌ಗಳನ್ನು ಒಟ್ಟು ತೆರಿಗೆ ರಾಜಸ್ವದ ಶೇ.5 ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ವಿಧಿಸಿದರೆ, ಹೆಚ್ಚಿನ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸಬೇಕು. ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ, ಒಟ್ಟು ತೆರಿಗೆ ಹಂಚಿಕೆಯಲ್ಲಿ ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ಶೇ.60ರಷ್ಟು ಪಾಲನ್ನು ಮರಳಿಸಬೇಕು. ಆದ್ದರಿಂದ, ಹಂಚಿಕೆಯಾಗುವ ತೆರಿಗೆಯಲ್ಲಿ ಇತರೆ ರಾಜ್ಯಗಳ ಪಾಲನ್ನು

2025-26

4

DA

30. ಕೃಷಿ ಬೆಳೆಗಳಲ್ಲಿ ನೀರನ್ನು ಸಮರ್ಥ ಬಳಕೆ ಮಾಡಿ. ಮಳೆಯಾ ಪ್ರದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂದಾ 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ಒದಗಿಸಲಾಗುವುದು. ರೂ. ಸಹಾಯಧನವನ್ನು

3.

31. ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ ಕ್ಷೇತ್ರ ವಿಸ್ತರಣೆ ಮತ್ತು ತೊಗರಿಯನ್ನು ಅಂತರ ಬೆಳೆಯನ್ನಾಗಿ ಪ್ರೋತ್ಸಾಹಿಸುವುದರ ಮೂಲಕ ಉತ್ಪಾದನೆಯಲ್ಲಿ ರಾಷ್ಟ್ರದಲ್ಲಿ: ಮುಂಚೂಣಿ ರಾಜ್ಯವನ್ನಾಗಿಸಲು ಉದ್ದೇಶಿಸಿದೆ. ಈ ಮೂಲಕ ರೈತರ ಆದಾಯ ಮತ್ತು ಪೌಷ್ಟಿಕ ಭದ್ರತೆಯನ್ನು ಸುಧಾರಿಸಲು 88 ಕೋಟಿ ರೂ. ಒದಗಿಸಲಾಗುವುದು.

32. ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳು ಹಾಗೂ 14 ಸಾಮಾನ್ಯ ಇನ್‌ಕ್ಯೂಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 5,000 ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು.

33. ಕೃಷಿ ಭಾಗ್ಯ ಯೋಜನೆಯಡಿ ಮೂರು ಲಕ್ಷಕ್ಕಿಂತ ಅಧಿಕ ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆಯಾಶ್ರಿತ ಕೃಷಿ ಪ್ರದೇಶದ ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವುದರೊಂದಿಗೆ ರೈತರ

ಜೀವನೋಪಾಯವನ್ನು ಸುಧಾರಿಸಲು ‘ಸಮಗ್ರ ಮಳೆಯಾಶ್ರಿತ ಕೃಷಿ 40 ನೀತಿ ‘ಯನ್ನು ಅನುಷ್ಠಾನಕ್ಕೆ ತರಲಾಗುವುದು.

37. ರೈತರಿಗೆ ಮಣ್ಣು ಪರೀಕ್ಷೆ ಹಾಗೂ ಅವರು ಬಳಸುವ ಪರಿಕರಗಳಾದ ರಸಗೊಬ್ಬರ, ಬಿತ್ತನೆ ಬೀಜ, ಸಸ್ಯ ಸಂರಕ್ಷಣಾ ಔಷಧಿ, ಜೈವಿಕ ಗೊಬ್ಬರ ಇತ್ಯಾದಿಗಳ ಗುಣಮಟ್ಟವನ್ನು ಪರೀಕ್ಷಿಸಲು ಇಲಾಖೆಯಡಿ 41 ಇರುವ 58 ಪ್ರಯೋಗಾಲಯಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲವರ್ಧನೆಗೊಳಿಸಲಾಗುವುದು.

38. ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಿ, ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಕಲ್ಪಿಸಲಾಗುವುದು.

39. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟಾರೆ 3,000 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುವುದು.

ಬೆಳೆಗಳ ಉತ್ಪಾದಕತೆ ಹಾಗೂ ಆದಾಯವನ್ನು ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯಡಿ 12.000 ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು.

ಇ

34. ಜಾಗತಿಕ ಮಟ್ಟದಲ್ಲಿ ಡಿಜಿಟಲ್, ಕೃತಕ ಬುದ್ಧಿಮತ್ತೆ ಹಾಗೂ ಜಿಯೋ ಸ್ಪೇಷಿಯಲ್ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿ, ಡಿಜಿಟಲ್ ಕೃಷಿ ಸೇವೆಗಳ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಕೇಂದ್ರವು ರೈತರಿಗೆ ಮತ್ತು ನೀತಿ ನಿರೂಪಕರಿಗೆ ಬೆಳೆಗಳ ಕುರಿತು ನಿಖರವಾದ ತೀರ್ಮಾನವನ್ನು ಕೈಗೊಂಡು ಬೆಳೆಗಳಲ್ಲಿ ಸಹಕಾರಿಯಾಗಲಿದೆ. ಉತ್ಪಾದಕತೆಯನ್ನು ಹೆಚ್ಚಿಸಲು

م

35. ರಾಜ್ಯದಲ್ಲಿ ಚಾಲ್ತಿಯಿರುವ ಹವಾಮಾನ ವಲಯಗಳ ವರ್ಗೀಕರಣ ಬಹಳ ವರ್ಷಗಳ ಹಿಂದೆ ಗುರುತಿಸಲಾಗಿರುವುದರಿಂದ ಹಾಗೂ ಇತ್ತೀಚಿನ ವರ್ಷಗಳ ನೈಸರ್ಗಿಕ ವೈಪರೀತ್ಯಗಳ ಬದಲಾವಣೆಯಿಂದ ಹವಾಮಾನ ವಲಯಗಳನ್ನು ಮರುವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು.

36. ಕರ್ನಾಟಕ ರಾಜ್ಯದ ಸಾಗುವಳಿ ಪ್ರದೇಶದ ಶೇ.64ರಷ್ಟು ಪ್ರದೇಶವು ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರವಾಗಿಸಿ ಸುಸ್ಥಿರವನ್ನಾಗಿಸಲು ಹಾಗೂ ರೈತರ 

ಜೈವಿಕ ಕೃಷಿ ಪರಿಕರ ಸ್ಟಾರ್ಟ್-ಅಪ್‌ಗಳು (Agri Start-up) ಉತ್ಪಾದಿಸುವ ಜೈವಿಕ ಪರಿಕರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸೂಕ್ತ ದರದಲ್ಲಿ ಮಾರಾಟ ಮಾಡಲು ಉತ್ತೇಜಿಸಲಾಗುವುದು.

41. ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಈವರೆಗೆ ಒಟ್ಟಾರೆ 12.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭೂ-ಸಂಪನ್ಮೂಲ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಭೂ-ಸಂಪನ್ಮೂಲ ಸಮೀಕ್ಷೆ ಆಧಾರದ ಮೇಲೆ ರೈತರು ಸೂಕ್ತವಾದ ಬೆಳೆಗಳನ್ನು ಬೆಳೆಯಲು, ಅಗತ್ಯವಿರುವ ರಾಸಾಯನಿಕ ಗೊಬ್ಬರ ಹಾಗೂ ಪೋಷಕಾಂಶಗಳನ್ನು ಬಳಸಿ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹಿಸಲಾಗುವುದು.

42. ಮಂಡ್ಯ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಈಗಾಗಲೇ ಅನುಮೋದನೆ ಮೂಲಸೌಕರ್ಯ ನೀಡಿದ್ದು, ಕಲ್ಪಿಸಲು 25 ಕೋಟಿ ರೂ. ಒದಗಿಸಿ, ಪ್ರಸಕ್ತ ಸಾಲಿನಲ್ಲಿ ತರಗತಿಗಳನ್ನು ಆರಂಭಿಸಲಾಗುವುದು.


43. ಬರ ಮತ್ತು ರೋಗ ನಿರೋಧಕ ಲಕ್ಷಣಗಳ ಸಂಶೋಧನೆ ಕೈಗೊಂಡು ಬೆಳೆಗಳ ಉತ್ತಮ ತಳಿ ಅಭಿವೃದ್ಧಿಪಡಿಸಲು

ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಅನ್ನು ಜಾರಿಗೊಳಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ 95 ಕೋಟಿ ರೂ. ಅನುದಾನ ಒದಗಿಸಿದೆ.


48. ತೋಟಗಾರಿಕಾ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಬೆಳೆಗಳ ಆರೋಗ್ಯ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ನೈಜ ಸಮಯದ (Real Time) ಆಧಾರದ ಮೇಲೆ ರೈತರಿಗೆ ಮಾಹಿತಿ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನ ಕೋಶ ಸ್ಥಾಪಿಸಲಾಗುವುದು.


49. ರಾಜ್ಯದ 20 GI ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳು ಕಣ್ಮರೆಯಾಗಿ ನಶಿಸಿ ಹೋಗುವುದನ್ನು ತಪ್ಪಿಸಲು ದೇಶಿ ತಳಿಗಳ ಬೀಜ ಬ್ಯಾಂಕ್ ಸ್ಥಾಪಿಸಲಾಗುವುದು.

50. ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆ ಮುಟುರು ರೋಗ, ತ್ರಿಪ್ಸ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲಾಗುವುದು.

51. ತೋಟಗಾರಿಕೆ ಇಲಾಖೆಯ ಅಧೀನದ ಆಯ್ದ ಕ್ಷೇತ್ರಗಳು ಮತ್ತು ನರ್ಸರಿಗಳಡಿ ಸಾರ್ವಜನಿಕ-ಖಾಸಗಿ ಸಹಯೋಗದೊಂದಿಗೆ ಹೂ-ಕೃಷಿ, ಅಲಂಕಾರಿಕ ಸಸ್ಯಗಳು, ಔಷಧೀಯ ಸಸ್ಯಗಳನ್ನು

ರೇಷ್ಮೆ

56. ಅಂತಾರಾಷ್ಟ್ರೀಯ ದರ್ಜೆಯ ದ್ವಿತಳಿ ಕಚ್ಚಾ ರೇಷ್ಮೆಯ ದೇಶೀಯ ಬೇಡಿಕೆಯನ್ನು ಪೂರೈಸಲು ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು.

a

57. ರಾಮನಗರ ಮತ್ತು ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಮೊದಲನೇ ಹಂತದ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

58. ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಯನ್ನು NABARD ಸಹಯೋಗದಲ್ಲಿ ಸ್ಥಾಪಿಸಲಾಗುವುದು.

59. ರೈತರು ಉತ್ಪಾದಿಸುವ ರೇಷ್ಮೆಗೂಡುಗಳಿಗೆ ಸೂಕ್ತ ಬೆಲೆ ದೊರಕಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಸಾಧಿಸುವ ದೃಷ್ಟಿಯಿಂದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ

2025-26

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್ (Phenotyping) ಸೌಲಭ್ಯ ಕಲ್ಪಿಸಲಾಗುವುದು.

44. ಸಾವಯವ ಉತ್ಪನ್ನಗಳು ಮತ್ತು ಸಿರಿಧಾನ್ಯಗಳ ಬೇಡಿಕೆ ಮತ್ತು ಪೂರೈಕೆಗಳ ಅಂತರವನ್ನು ಸರಿದೂಗಿಸಲು ಹಾಗೂ ರೈತರಿಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸುವ ಉದ್ದೇಶದಿಂದ 20 ಕೋಟಿ ರೂ. ಮೊತ್ತದಲ್ಲಿ ‘ಸಾವಯವ ಮತ್ತು ಸಿರಿಧಾನ್ಯಗಳ ಹಬ್’ ಅನ್ನು ಸ್ಥಾಪಿಸಲಾಗುವುದು.

45. ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

46. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಪಡೆದುಕೊಳ್ಳಲಾಗುವುದು. ಕಾರ್ಯಸಾಧ್ಯತಾ ವರದಿಯನ್ನು

ತೋಟಗಾರಿಕೆ

47. ರೈತರಿಗೆ ಹೆಚ್ಚಿನ ಆದಾಯ ಒದಗಿಸುವಲ್ಲಿ ತೋಟಗಾರಿಕಾ ಬೆಳೆಗಳ ಕೊಡುಗೆ ಮಹತ್ವದ್ದಾಗಿದೆ. ಇತ್ತೀಚಿನ ಬೆಳೆ ಪದ್ಧತಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ತಂತ್ರಜ್ಞಾನದಲ್ಲಾದ ಆಧುನೀಕರಣದ ಅನುಕೂಲವನ್ನು ಬೆಳೆಗಾರರಿಗೆ ತಲುಪಿಸುವ ಉದ್ದೇಶದಿಂದ ಸಮಗ್ರ

ಬೆಳೆಸಲು ಹಾಗೂ ತೋಟಗಾರಿಕಾ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಾರ್ಯಕ್ರಮವನ್ನು ರೂಪಿಸಲಾಗುವುದು.

52. ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿಯನ್ನು ಪಡೆದುಕೊಳ್ಳಲಾಗುವುದು.

53. ತೋಟಗಾರಿಕಾ ಬೆಳೆಗಳ ಹನಿ ನೀರಾವರಿ ಕಾರ್ಯಕ್ರಮದಡಿ ಸುಮಾರು 52,000 ಫಲಾನುಭವಿಗಳಿಗೆ ರೂ. ಸಹಾಯ ಧನವನ್ನು ಒದಗಿಸಲಾಗುವುದು. 426 ಕೋಟಿ

54. ಮಲೆನಾಡು ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗದ ಬಾಧೆಗೆ ತುತ್ತಾಗಿ 2 ಲಕ್ಷಕ್ಕಿಂತ ಅಧಿಕ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ರೋಗ ನಿಯಂತ್ರಿಸಲು ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ 62 ಕೋಟಿ ರೂ. ಒದಗಿಸಲಾಗಿದೆ.

55. ತೆಂಗು ಬೆಳೆಯುವ ಪ್ರದೇಶಗಳಲ್ಲಿ ಕಪ್ಪು ತಲೆ ಹುಳುವಿನ ಬಾಧೆಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ಇದರ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.

ವಾಹನ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಬಜೆಟ್ ನಲ್ಲಿ ವಿಶೇಷ ಕಾರ್ಯ..

 ಸುಗಮ ಸಂಚಾರಕ್ಕಾಗಿ ಬೆಂಗಳೂರು ನಗರದ ಮುಖ್ಯ ರಸ್ತೆಗಳನ್ನು ಸಿಗ್ನಲ್ ಮುಕ್ತಗೊಳಿಸುವ (signal-free) ನಿಟ್ಟಿನಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 8,916 ಕೋಟಿ ರೂ. ವೆಚ್ಚದಲ್ಲಿ 40.50 ಕಿ.ಮೀ. ಉದ್ದದ Double Decker Flyover ರಸ್ತೆಯನ್ನು ನಿರ್ಮಾಣ..

iಕಾಲುವೆಯ ಬಫರ್ ಪ್ರದೇಶವನ್ನು ಬಳಸಿಕೊಂಡು 3,000 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲವನ್ನು ಅಭಿವೃದ್ಧಿ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಜಾಲವನ್ನು 660 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ..

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗುತ್ತಿರುವ ಮಾಶಾಸನದಲ್ಲಿ ಹೆಚ್ಚಳ 3000 ಹೆಚ್ಚಳ ತೋರಿಸಿದ ರಾಜ್ಯ ಸರ್ಕಾರ ಹಿಂದೆ 12,000 ನೀಡಲಾಗುತ್ತಿತ್ತು. ಹೊಸ ಮಾಸಶನ 15,000ಗಳಿಗೆ ಏರಿಕೆ

ರಾಜ್ಯದ ಚಿತ್ರಮಂದಿರಗಳ ಸಮಸ್ಯೆಗೆ ಸ್ಪಂದಿಸಿದ ಸರ್ಕಾರ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ

ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರತಿ ಪ್ರದರ್ಶನದ ಪ್ರವೇಶ ದರ ಮರು ನಿಗದಿ

ಪ್ರತಿ ಪ್ರದರ್ಶನಕ್ಕೆ 200 ರೂಪಾಯಿಗಳ ಟಿಕೆಟ್ ನಿಗದಿ

ಮೈಸೂರಿನಲ್ಲಿ ಅಂತರಾಷ್ಟ್ರೀಯ ಮಾನ್ಯತೆಯ ಚಿತ್ರನಗರಿ 500 ಕೋಟಿ ವೆಚ್ಚದಲ್ಲಿ ಕಾಮಗಾರಿ

150 ಎಕರೆ ಭೂಮಿಯಲ್ಲಿ ತಲೆಯತ್ತಲಿರುವ ಚಲನಚಿತ್ರ ನಗರಿ

 ಮುಂದಿನ ವರ್ಷದಿಂದ ಚಿತ್ರನಗರಿಯ ಸ್ಥಾಪನೆ ಕಾರ್ಯ

ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕೆ ಓ ಟಿಟಿ ವೇದಿಕೆ ರಚಿಸಲು ಕ್ರಮ

ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಅನುಷ್ಠಾನಕ್ಕೆ

ಒಟ್ಟು ಬಜೆಟ್ ಗಾತ್ರ ೪,೦೯,೫೪೯ ಕೋಟಿ

ಒಟ್ಟು ರಾಜಸ್ವ ವೆಚ್ಚ-೭೧,೩೩೬ ಕೋಟಿ

ಒಟ್ಟು ಬಂಡವಾಳ ವೆಚ್ಚ-೨೬೪೭೪ ಕೋಟಿ

ಒಟ್ಟು ರಾಜಸ್ವ ಕೊರತೆ-೧೯,೨೬೨ ಕೋಟಿ

ಒಟ್ಟು ವಿತ್ತೀಯ ಕೊರತೆ-೯೦,೪೨೮ ಕೋಟಿ

*ಬೆಂಗಳೂರು ಅಭಿವೃದ್ಧಿ ಗೆ ಸಿಎಂ ಸಿದ್ದರಾಮಯ್ಯ 7 ಸಾವಿರ ಕೋಟಿ ರೂ ಮೀಸಲು*

ನೊಂದಣಿ ಮುದ್ರಾಂಕ ಇಲಾಖೆಯಿಂದ ೨೮೦೦೦ ರಾಜಸ್ವ ಸಂಗ್ರಹದ ಗುರಿ

ಮೋಟಾರು ವಾಹನಗಳಿಂದ ತೆರಿಗೆ ಸಂಗ್ರಹ

ಈ ವರ್ಷಾಂತ್ಯಕ್ಕೆ ೧೩,೫೦೦ ಕೋಟಿ ತೆರಿಗೆ ಸಂಗ್ರಹದ ಗುರಿ

೨೫/೨೬ ಕ್ಕೆ ೧೫೦೦೦ ಕೋಟಿ ಸಂಗ್ರಹದ ಗುರಿ

ಖನಿಜಗಳ ಮೇಲೆ ತೆರಿಗೆ ಏರಿಕೆಯ ಬರೆ

ಗಣಿಗೆ ಭೂಮಿ ಕೊಟ್ಟವರಿಗೂ ತೆರಿಗೆ

ಗಣಿಗಾರಿಕೆಯಿಂದ ೭೨೫೦ ಕೋಟಿ ತೆರಿಗೆ ಸಂಗ್ರಹದ ಗುರಿ

ಖನಿಜಗಳ ಸಾಗಾಣಿಕೆ ಮೇಲೆ‌ ಟ್ಯಾಕ್ಸ್

ಹೊಸ ಖನಿಜ ನೀತಿಗೆ ಸರ್ಕಾರದ ತಿದ್ದುಪಡಿ

ಡಾ.ಯತೀಂದ್ರ ಯುವ ಬ್ರಿಗೇಡ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಟಗರು ಗಿಪ್ಟ್

16ನೇ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮೈಲಾರಿ ಟಗರು ಗಿಪ್ಟ್

ವಿಧಾನ ಸೌಧದ ಕೆಂಗಲ್ ಗೇಟ್ ನಲ್ಲಿ ಟಗರು ಜತೆ ಘೊಷಣೆ..!

ಮದ್ಯದ ದರ ಏರಿಕೆಗೆ ನಿರ್ಧಾರ

ಹೆಚ್ಚಳದ ಬಗ್ಗೆ ಮುಕ್ತವಾಗಿಟ್ಟುಕೊಂಡ ಸರ್ಕಾರ

ವರ್ಷಾಂತ್ಯಕ್ಕೆ ೩೬೫೦೦ ಕೋಟಿ ಸಂಗ್ರಹದ ಗುರಿ

೨೫/೨೬ ಕ್ಕೆ ೪೦೦೦೦ ಕೋಟಿ ಸಂಗ್ರಹದ ಗುರಿ

ನಕ್ಸಲ್ ಮುಕ್ತವಾದ ಕರ್ನಾಟಕ

ಹೀಗಾಗಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ

ಶರಣಾದ ನಕ್ಸಲರಿಗೆ ಪುನರ್ವಸತಿ ವ್ಯವಸ್ಥೆ

೧೦ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

ಉಚಿತ ಬಸ್ ಯೋಜನೆ ಮುಂದುವರಿಕೆ

೨೦೨೪/೨೫ ರಲ್ಲಿ ೫೦೧೫ ಕೋಟಿ ಹಣ ಖರ್ಚು

೨೫/೨೬ ಕ್ಕೆ ೫೩೦೦ ಕೋಟಿ ಹಣ ಮೀಸಲಿಟ್ಟ ಸರ್ಕಾರ

ಸ್ತೀಕ್ ಮೊತ್ತ ೬೦ ಸಾವಿರದಿಂದ ೭೨ ಸಾವಿರಕ್ಕೆ ಹೆಚ್ಚಳ

೨೫೫೫೧ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಅನ್ವಯ

ಚಂದ್ತಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ

ಅಹಿಂದ ಸಮುದಾಯಗಳಿಗೆ ಹೆಚ್ಚಿನ ಅನುದಾನ

ಬೌಧ್ಧ,ಜೈನ,ಸಿಕ್ ಸಮುದಾಯಕ್ಕೆ ೧೦೦ ಕೋಟಿ

ಕ್ರಿಶ್ಚಿಯನ್ ಸಮುದಾಯಕ್ಕೆ ೨೫೦ ಕೋಟಿ

ಅಲ್ಪಸಂಖ್ಯಾತರಿಗೂ ಭರಪೂರ ಅನುದಾನ

ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ವಿಚಾರ ಇಟ್ಟಿದ್ದಾರೆ

ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಇಟ್ಟಿಲ್ಲ

ಇದು ಸ್ವಂತ ಅಜೆಂಡಾ, ಬಜೆಟ್ ನಲ್ಲಿ ಇಟ್ಟಿದ್ದಾರೆ

ಸಿಟಿ ರವಿ ಹೇಳಿಕೆ

ಹಾಲಿನ‌ ದರ ಏರಿಕೆ ವಿಚಾರ

ಏರಿಕೆ ಮಾಡಿ ಅದನ್ನ ಯಾರಿಗೆ ಕೊಡ್ತೀವಿ

ಹಾಲು ಉತ್ಪಾದಕರ ಸಬ್ಸಿಡಿ ಕೊಡಿ

ಮೊದಲು ಅದನ್ನ ಕೊಟ್ಟು ಆಮೇಲೆ ಈ ಬಗ್ಗೆ ಚಿಂತನೆ ಮಾಡಿ

ಸಿಎಂ ಬಜೆಟ್ ಮಂಡನೆ ಮುಕ್ತಾಯ

ಸಿಎಂಗೆ ಅಭಿನಂದಿಸಿದ ಪ್ರತಿಪಕ್ಷ ಸದಸ್ಯರು

ಎಸ್.ಟಿ.ಸೋಮಶೇಖರ್,ಜಿಟಿಡಿಯಿಂದ ಅಭಿನಂದನೆ

ಸಿಎಂ ಬಳಿ ತೆರಳಿ ಅಭಿನಂದಿಸಿದ ಬಿಜೆಪಿ,ಜೆಡಿಎಸ್ ಶಾಸಕರು

ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿಕೆ

 ಬಜೆಟ್ ಆದ ಮೇಲೆ ಹಾಲಿನ ದರ ಏರಿಕೆ ಯಾಗಲಿದೆ

ದರ ಏರಿಕೆ ಮಾಡಿರೋದು ರೈತರಿಗೆ ಹೋಗಲಿದೆ

ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಥವಾ ಅಧಿವೇಶನ ದ ಬಳಿಕ ಹಾಲಿನ ದರ ಏರಿಕೆ

IMP
ಸಚಿವ ಮಹಾದೇವಪ್ಪ ಹೇಳಿಕೆ

ಮುಂದಿನ ಬಜೆಟ್ ಕೂಡ ಸಿಎಂ ಸಿದ್ದರಾಮಯ್ಯ ಮಂಡಿಸುತ್ತಾರೆ
 
ಈ ಅವಧಿಯ ಎಲ್ಲಾ ಬಜೆಟ್ ಕೂಡ ಮಂಡಿಸುತ್ತಾರೆ

ಮುಂದಿನ ಮೂರು ಬಜೆಟ್ ಕೂಡ ಮಂಡಿಸುತ್ತಾರೆ

ರಾಜಸ್ವ ಸ್ವೀಕೃತಿಗಳು ಪ್ರಸ್ತುತ ವರ್ಷ 2,477 ಕೋಟಿ ಹೆಚ್ಚಳವಾಗಿದೆ.

ಇದರ ಬೆಳವಣಿಗೆ 11% ಆಗಿದೆ.

ರಾಜಸ್ವ ವೆಚ್ಚ,2,90,231ಕೋಟಿ ಮುಂದಿನ ವರ್ಷಕ್ಕೆ 3,11,739, ನಿರ್ಧರಿಸಲಾಗಿದೆ.

7.3% ರಾಜಸ್ವದ ಸಂಗ್ರಹದಲ್ಲಿ ಬೆಳವಣಿಗೆ ಆಗಲಿದೆ.

ಗ್ಯಾರಂಟಿಗಳಿಗೆ ಯಾವುದೇ ಖೋತಾ ಆಗಿಲ್ಲ. ಅವನ್ನ ಮುಂದುವರೆಸುತ್ತೇವೆ.

ಸಿಎಂ ಸ್ಪಷ್ಟನೆ.

ನಾನು ಬಜೆಟ್ ಗಾತ್ರ ಹೆಚ್ಚಿದ್ದಕ್ಕೆ ಖುಷಿ ವ್ಯಕ್ತಪಡಿಸುತ್ತೇನೆ.

ಸಿಎಂ ಸಿದ್ದರಾಮಯ್ಯ

ನಾವು ಆರ್ಥಿಕ ಶಿಸ್ತನ್ನು ಪಾಲನೆ ಮಾಡಿಕೊಂಡು ಬಲಹೀನ ಸಮುದಾಯಗಳಿಗೆ ಬಲ ತುಂಬುವ ಕಾರ್ಯ ಮಾಡಿದ್ದೇವೆ.

ಸಿಎಂ ಸಿದ್ದರಾಮಯ್ಯ ಹೇಳಿಕೆ

ಮಾಜಿ ಸಚಿವ ಅರಗ ಜ್ಞಾನೇಂದ್ರ ಹೇಳಿಕೆ

ಈ ಬಜೆಟ್ ನಮಗೆ ತೃಪ್ತಿ ಕೊಟ್ಟಿಲ್ಲ

ಗ್ಯಾರಂಟಿ ಗಾಗಿ ಹಣ ಇಟ್ಟುಕೊಂಡಿದ್ದಾರೆ ಅಷ್ಟೇ

ಅಲ್ಪಸಂಖ್ಯಾತರಿಗೆ ಕೊಟ್ಟಿದ್ದಾರಡ

ಆದ್ರೆ ಮುಜರಾಯಿ ಗೆ ಕೊಟ್ಟಿಲ್ಲ

ಕ್ರಿಷ್ಚಿಯನ್ ರಿಗೂ ಕೊಟ್ಟಿಲ್ಲ,

ಇದು ಓಲೈಕೆ ಬಿಟ್ಟು ಬೇರೇನಿದೆ?

ಒಟ್ಟಾಗಿ ಬದುಕೋಕೆ ಬಿಡಲ್ಲ, ಇದಲ್ಲಿ ಮೊಸರೇ ಇಲ್ಲ, ಹುಡುಕುವ ಪ್ರಶ್ನೆ ಇಲ್ಲ

ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ..

ಎಲ್ಲರೂ ಸಂತೋಷ ಪಡಿಸುವ ಬಜೆಟ್ ಇದು

ಬೆಂಗಳೂರಿಗೆ ಕೊಡುಗೆ ,ನೀರಾವರಿಗೆ ಕೊಡುಗೆ ಇದೆ

ಸಾಲ ಮಾಡಿದ್ದೇವೆ ಎಂದರೆ ಕೇಂದ್ರ ಸರ್ಕಾರವೂ ಸಾಲ ಮಾಡಿದೆ

ಇದೊಂದ ಐತಿಹಾಸಿಕ ಬಜೆಟ್

ಎಲ್ಲರೊಗೂ ಒಲೈಕೆ ಮಾಡಬೇಕಲ್ಚಾ

ಕನಸಿನ ಕೂಸು ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಅನುದಾನ

ಇದು ನನ್ನೊಬ್ಬನ ಕನಸಲ್ಲ

ಐತಿಹಾಸಿಕ ಬಜೆಟ್ ಇದು

ಸಚಿವ ಮಹಾದೇವಪ್ಪ ಹೇಳಿಕೆ. ‌.

ಹಲಾಲ್ ಬಜೆಟ್ ಎಂದು ಬಿಜೆಪಿ ನಾಯಕರ ಹೇಳಿಕೆ ವಿಚಾರ..

ಇರೆಸ್ಪಾನಿಸ್ಸಿಬಲ್ ಹೇಳಿಕೆ ಇದು

ಬಜೆಟ್ ಅಂದ್ರೆ ಅಂಕಿ ಅಂಶ ಕೂಡೋದು ಅಲ್ಲ

ಸಂವಿಧಾನದಲ್ಲಿ ತುಳಿತಕ್ಕೆ ಒಳಗಾದ ಸಮಾಜದ ಬೆಳವಣಿಗೆಗೆ ಒತ್ತು ಇದೆ

ತುಳಿತಕ್ಕೆ ಒಳಗಾದವರನ್ನು ಮೇಲೆತ್ತಲು ಮಾಡಿದ್ದಾರೆ, ಇದರಲ್ಲಿ ತಪ್ಪು ಏನಿದೆ

4 ಸಾವಿರ ಕೋಟಿ SEP- TSP ಗೆ ಕೊಟ್ಟಿದ್ದಾರೆ

ಇದೊಂದು ಸುಸ್ಥಿರ ಬಜೆಟ್

ಎಲ್ಲಾ ಇಲಾಖೆಗೆ ಆದ್ಯತೆ ಕೊಟ್ಟಿದ್ದಾರೆ

ಸುಸ್ಥಿರ ಅಭಿವೃದ್ಧಿ ಗೆ ಸಹಕಾರಿಯಾಗಲಿದೆ

ಫಿಸಿಕಲ್ ಡಿಸಿಪ್ಲೀನ್ ಇದೆ, ಸಾಲ ಇತಿಮಿತಿಯಲ್ಲೇ ಮಾಡಿದ್ದಾರೆ

ಸಾಲದ ಮಿತಿ ಏನು ಹೆಚ್ಚಾಗಿಲ್ಲ

ಎಲ್ಲಾ ಧರ್ಮದವರಿಗೂ ಸಹಕಾರಿಯಾಗಲಿರುವ ಬಜೆಟ್ ಇದು

ಮುಂದಿನ 3 ವರ್ಷ ಸಿದ್ದರಾಮಯ್ಯ ನವರೇ ಬಜೆಟ್ ಮಂಡಿಸ್ತಾರೆ

ಶಾಸಕ ರವಿ ಗಣಿಗಾ ಹೇಳಿಕೆ

ಈಗ ಕನ್ನಡ ಚಿತ್ರ ಮಂದಿರ ನಶಿಸುತ್ತಿವೆ

ಪರ ಭಾಷಿಕರು ದೊಚುತ್ತಿದ್ದಾರೆ..

ಆದ್ರೆ ಎಲ್ಲಾ ಕಡೆ ಟಿಕೆಟ್ ದರ ೨೦೦ ರೂಪಾಯಿ ಇದೆ ಮಾಡಿದ್ದೇವೆ

ಜ್ಯೂಸ್ , ಪಾಪ್ ಕಾನ್ ದರ ಏರಿಕೆ ಯಾಗಿದೆ

ನೀರು ಸಹ ಹೆಚ್ಚಾಗಿದೆ, ಅದಕ್ಕೆ ಕಡಿವಾಣ ಹಾಕಬೇಕು

ಕನ್ನಡ ಚಿತ್ರಮಂದಿರಕ್ಕೆ ಬರಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ

ನಾವು ಕನ್ನಡ ಪ್ರೇಕ್ಷಕರು, ಕನ್ಜಡ ಉಳುವಿಗಾಗಿ ಮಾಡಿದ್ದೀವಿ

ಬಜೆಟ್ ಚನ್ನಾಗಿದೆ, ಮೊಸರಲ್ಲಿ ಕಲ್ಲು ಹುಡಿಕೋದು ಅಂದ್ರೆ ಇದೇ

ಕೃಷಿ ವಿವಿ ನಮ್ಮ ಕ್ಷೇತ್ರಕ್ಕೆ ಬಂದಿದೆ

ಇದು ಪ್ರಜಾಪ್ರಭುತ್ವ, ನಾವು ಪರ ಹೇಳಿದ್ರೆ ಕೆಲವರು ವಿರೋಧ ಮಾಡ್ತಾರೆ

ಕನ್ನಡ ಒರ ಹೋರಾಟಕ್ಕೆ ಚಿತ್ರರಂಗದವರು ಬರಬೇಕು

*ಸುದೀಪ್ ಪಿಆರ್ ಹೇಳಿಕೆ ವಿಚಾರ*

*ಇದಕ್ಕೆ ನನ್ನ ಪಿಆರ್ ಉತ್ತರ ಕೊಡ್ತಾರೆ*

ಶಾಸಕ ಶಿವಲಿಂಗೇಗೌಡ ಹೇಳಿಕೆ

ಬಜೆಟ್ ಚನ್ನಾಗಿದೆ, ಎಲ್ಲಾ ದೃಷ್ಟಿಯಿಂದ ಬಜೆಟ್ ಒಳ್ಳೆಯದ್ದು ಇದೆ

ಯಾವ್ಯಾವ ಕ್ಷೇತ್ರಕ್ಕೆ ಏನೂ ಕೊಟ್ಟಿದ್ದಾರೆ ಅನ್ನೋದು ನೋಡಬೇಕು

ಇದು ಬಿಜೆಪಿಯವರ ಅಭಿಪ್ರಾಯ

ಇವರು ಯಾರನ್ನ ದೂರಬೇಕು, ಮುಸ್ಲಿಂ ಅವರನ್ನ ದೂರಬೇಕು..

ಈ ದೇಶದಲ್ಲಿ ಅಶಾಂತಿ ದೃಷ್ಟಿ ಮಾಡೋಕೆ ಹೊರಟಿದ್ದಾರೆ

ವಿಧಾನಸೌದ..

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ್ ಸ್ವಾಮಿ ಸುದ್ದಿಗೋಷ್ಟಿ

ಕರ್ನಾಟಕ ರಾಜ್ಯದ ಬಜೆಟ್ ಮಂಡನೆಯಾಗಿದೆ

ರಾಜ್ಯಕ್ಕೆ ಬಜೆಟ್ ನ್ನ‌ ಮಂಡನೆ ಮಾಡಿದ್ದಾರೆ

ಮೊದಲಿನಿಂದಲೂ ಚೊಂಬು, ತೆಂಗಿನ ಚಿಪ್ಪು ಅಂತಿದ್ರು

ರಾಜ್ಯದ ಜನರಿಗೆ ಚೊಂಬು ಕೊಟ್ಟಿದ್ದಾರೆ

ದಲಿತರಿಗೆ ಚಿಪ್ಪು ಕೊಟ್ಟಿದ್ದಾರೆ

ಬೇಕಾದವರಿಗೆ ಮೃಣ್ಟಾನ ಬೋಜನ‌ ಹಾಕಿದ್ದಾರೆ

ಇದು ಅಭಿವೃದ್ಧಿ ಶೂನ್ಯ ಬಜೆಟ್

ಕಳೆದ ಆಯವ್ಯಯದಲ್ಲಿ‌‌ ಪ್ರಸ್ತಾಪ ಮಾಡಿದ್ರು ಅದು ಯಾವುದು ನೆರವೇರಿಲ್ಲಾ

ಬೃಹತ್ ಕೈಗಾರಿಕೆಗಳು ನಿರಾವರಿ ಯೋಜನೆಗಳು ಇಲ್ಲಾ

ಕೆಲವು ಸಮುದಾಯ ಒಲೈಕೆ ಮತ ಬ್ಯಾಂಕ್ ಮಾಡಿಕೊಳ್ಳುವ ಜನಾಂಗದ ಮೇಲೆ ನೇರವಾಗಿ ಬಂಡವಾಳ ಹೂಡಿದ್ದಾರೆ

ಚುನಾವಣೆ ಬಂದಾಗ ಹಣ ಕೊಡಬೇಕಿಲ್ಲಾ

ಬಜೆಟ್ ನಲ್ಲೆ ಕೊಟ್ಟಿದ್ದಾರೆ

ಅತ್ಯಂತ ಸಾಲಹೊಂದಿದ ರಾಜ್ಯವನ್ನಾಗಿ ಮಾಡಿದ್ದಾರೆ

ರಾಜ್ಯದ ಜನ ಪರಿಸ್ಥಿತಿ ಏನಾಗಿದೆ ಅಂತ ನೋಡಿಕೊಳ್ಳಬೇಕು

ಕೆಂಗಲ್ ಗೇಟ್

ಶಾಸಕ ಶಿವಲಿಂಗೇಗೌಡ ಹೇಳಿಕೆ..

ಬಿಜೆಪಿ ಸಿದ್ದಾಂತ ಒಂದು ಕಮ್ಯುನಿಟಿ ವಿರೋದಿಸಿಯೇ ಅಧಿಕಾರಕ್ಕೆ ಬಂದಿರೋದು

ಹಲಾಲ್ ಅವರ ಸಂಸ್ಕೃತಿ

ಏನ್ ಕೊಟ್ಟಿದ್ದಾರೆ ಅಲ್ಲಿ

ಅಂಕಿ ಅಂಶ ಮುಂದೆ ಹೇಳ್ತಿನಿ

ಅವರಿಗೆ ಏನ್ ಕೊಟ್ಟಿದ್ದಾರೆ ಚರ್ಚೆಗೆ ಬರಲಿ

ಒಟ್ಟಾರೆ ಬಜೆಟ್ ವಿಶ್ಲೇಷಣೆ ಮಾಡಬೇಕಿದೆ

*ಶಾಸಕ ಎ ಮಂಜು ಹೇಳಿಕೆ*

ಅಭಿವೃದ್ಧಿ ಬಜೆಟ್ ಆಗಬೇಕು

ಆದ್ರೆ ಇಲ್ಲಿಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ

ಯಾವುದೇ ಕ್ಷೇತ್ರಕ್ಕೆ ಅನುಕೂಲ ಆಗುವ ಬಜೆಟ್ ಇಲ್ಲ

ಅವರವರ ಕ್ಷೇತ್ರಕ್ಕೆ ಅಷ್ಟೇ ಅನುಕೂಲ ಆಗಿದೆ

ಒಂದು ಸಮುದಾಯದ ಪರ ಅನುಕೂಲ ಆಗೋ ಬಜೆಟ್ ಇದೆ

ಪಶು ಇಲಾಖೆಯಲ್ಲಿ ಡಾಕ್ಟರ್ ಅಪಾಂಟ್ ಆಗ್ತಿಲ್ಲ

ಮಾಲೂರು ಶಾಸಕ ನಂಜೇಗೌಡ ಹೇಳಿಕೆ..

ಸಿದ್ದರಾಮಯ್ಯ ಅವರು ೧೬ ನೆ ಬಜೆಟ್ ಮಂಡನೆ ಮಾಡಿದ್ದಾರೆ

ಇಗ ಕೋಲಾರ ಜಿಲ್ಲೆಗೆ ಸ್ವಾತಂತ್ರ್ಯ ಬಂದಿದೆ

ಕೋಲಾರ ಜಿಲ್ಲೆಗೆ ಮೆಡಿಕಲ್ ಕಾಲೇಜು ಕೊಟ್ಟಿದ್ದಾರೆ

ಭಾರತೀಯ ಪೊಲೀಸ್ ಪಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ

೩೧೯೦ ಕೋಟಿ ಕೈಗಾರಿಕೆಗೆ ಕಳೆದ ಬಜೆಟ್ ನಲ್ಲಿ ಕೊಟ್ಟಿದ್ರು

ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಜನರ ಪರ ಧನ್ಯವಾದಗಳನ್ನ ಅರ್ಪಿಸುತ್ತೇವೆ

ಛಲವಾದಿ ನಾರಾಯಣ್ ಸ್ವಾಮಿ ಹೇಳಿಕೆ

ನಾನು ಅಹಿಂದ ನಾಯಕ ಅಂತಾರೆ ಸಿಎಂ

ಇಲ್ಲಿ ಬಂಡವಾಳ ಅಲ್ಪಸಂಖ್ಯಾತರ ಮೇಲೆ ಮಾತ್ರ ಆಗಿದೆ

ವಕ್ಫ್ ವಿಚಾರದಲ್ಲಿ ದೊಡ್ಡ ಗೊಂದಲ ನಡೆದಿದೆ

ವಕ್ಫ್ ಮಂಡಳಿ ಮುಸ್ಲಿಂರ ವಯ್ಯಕ್ತಿಕ ಮಂಡಳಿ ಅದರಲ್ಲಿ‌ ಸರ್ಕಾರ ಕೈ ಹಾಕುವಂತಿಲ್ಲಾ ಅಂದ್ರು

ಇಗ ವಕ್ಫ್ ಆಸ್ತಿ ರಕ್ಷಣೆಗೆ ೧೫೦ ಕೋಟಿ ಮೀಸಲಿಟ್ಟಿದ್ದಾರೆ

ಇದು ಓಲೈಕೆ ರಾಜಕಾರಣ

ಮುಸ್ಲಿಂರಿಗಷ್ಟೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲು ಕೊಡಲಾಗಿದೆ

ಇದಕ್ಕೆ ನಮ್ಮ ವಿರೋಧ ಇಲ್ಲಾ

ದಲಿತರ ಕತೆ ಏನಾಯ್ತು..?

ಛಲವಾದಿ ನಾರಾಯಣಸ್ವಾಮಿ ಹೇಳಿಕೆ..

ಮುಸ್ಲಿಂ ಬಂಧುಗಳಿಗೆ ಮಾಡಿಕೊಳ್ಳಿ ನಮಗೇನು ಬೇಜಾರಿಲ್ಲ

ಕರ್ನಾಟಕದ ಒಟ್ಟು ಸಾಲ 7,64,655 ಕೋಟಿ ರೂಪಾಯಿ

ಜನಸಂಖ್ಯೆ 6 ರಿಂದ 7 ಕೋಟಿ ಇದೆ

ಸರಾಸರಿ 1 ಲಕ್ಷ ರೂಪಾಯಿ ಒಂದು ಹುಟ್ಟಿದ ಮಗುವಿನ ಮೇಲೂ ಸಾಲ ಇರಲಿದೆ

ಈ ಎಲ್ಲರಿಗೂ ಒಂದೊಂದು ಲಕ್ಷ ರೂಪಾಯಿ ಸಾಲ ಮಾಡಿಕೊಟ್ಟಿದ್ದಾರೆ

ಮಜಾ ಮಾಡಿ ಎಲ್ರೂ,ಇದು ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿರುವ ಸಾಲ

ಸಿದ್ದರಾಮಯ್ಯ ಅವರ ಸರ್ಕಾರ ಲೂಟಿ ಸರ್ಕಾರ

ಕಳೆದ ವರ್ಷದ ಸಾಲ 1,250 ಕೋಟಿ

ಈ ವರ್ಷ 1,16 ಸಾವಿರ ಕೋಟಿ ಸಾಲವಿದೆ

ವರ್ಷಗಳ ಹೋಲಿಕೆ ಸರಾಸರಿ ನೋಡಿದ್ರೆ ಇದು10 ಸಾವಿರ ಕೋಟಿಗೂ ಹೆಚ್ಚು ಈ ಸಲ ಸಾಲ ಆಗಿದೆ

ಇದು ಫಿಸಿಕಲ್ ರೆಸ್ಪಾಸಿಬಲಿಟಿ ಆ್ಯಕ್ಟ್ ಪ್ರಕಾರ ಮಾಡಲಾಗಿದೆ.

ಈ ಕಾಯ್ದೆ ಮಾನದಂಡದ ಅಡಿಯಲ್ಲೇ ಈ ಸಾಲ ಮಾಡಲಾಗಿದೆ. ಇದು 25% ಒಳಗೇ ಇದೆ.

ವಿತ್ತೀಯ ಕೊರತೆ 3% ಗಿಂತ ಹೋಗಬಾರದು ಅಂತಿದೆ.

ನಾವು 2.95 ಮಿತಿಯ ಒಳಗೇ ಸಾಲ ಮಾಡಿದ್ದೇವೆ.

ಆದರೆ ವಿಪಕ್ಷಗಳಿಗೆ ಇದರ ಬಗ್ಗೆ ಮಾಹಿತಿ ಇಲ್ಲದೆ ಸುಮ್ಮನೆ ಮಾತನಾಡಿದ್ದಾರೆ.

ಸಿಎಂ ಹೇಳಿಕೆ

ಛಲವಾದಿ ನಾರಾಯಣ್ ಸ್ವಾಮಿ ಹೇಳಿಕೆ..

ನಾವು ಸರ್ಪ್ಲೆಸ್ ಬಜೆಟ್ ಬಿಟ್ಟೋಗಿದ್ವಿ

ಇದುವರೆಗೂ ಏನು ಸಾಧನೆ ಮಾಡುದ್ರಿ

ಅಭಿವೃದ್ಧಿ ಶೂನ್ಯ ಬಜೆಟ್

39ಸಾವಿರ ಕೋಟಿ ದಲಿತರಿಗೆ ಇಟ್ಟಿದ್ದೀನಿ ಅಂದಿದ್ರು

ಪರಿಶಿಷ್ಟ ಜಾತಿ ವರ್ಗದವರಿಗೆ ಎಲ್ಲಾ ಸರ್ಕಾರದವ್ರು ಹಣ ಇಟ್ಟಿದ್ದಾರೆ

ಇದು ಕೇಂದ್ರ ಸರ್ಕಾರದ ನೀತಿ ಆಯೋಗದ ಕರ್ಯಕ್ರಮಗಳು

ಸಮುದಾಗಳಿಗೆ ಇಟ್ಟಿದ್ದ ಹಣ ದುರುಪಯೋಗ ಆಗ್ಬಾರ್ದು ಎಂಬ ಕಾರಣಕ್ಕೆ

ಒಂದು ಕಾನೂನು ಮಾಡಿದ್ರು ಒಂದು ಪೈಸೆ ಕೂಡ ಬೇರೆದಕ್ಕೆ ಉಪಯೋಗ ಮಾಡ್ಬಾರ್ದು

ಎಲ್ಲಾ ಸರ್ಕಾರ ಕೂಡ ಅಸೆಟ್ ಮಾಡ್ತಿದೆ

ಇಲ್ಲಿ ಎಲ್ಲಾರ ಕಣ್ಣಮುಂದೆ ದಲಿತರಿಗೆ ದ್ರೋಹ ಮಾಡ್ತಿದ್ದೀರ

ಇದು ದಲಿತರ ಮೇಲೆ ಸರ್ಕಾರ ಮಾಡ್ತಿರಿವ ದೌರ್ಜನ್ಯ

ದೌರ್ಜನ್ಯ ಮಾಡಿದವರ ಮೇಲೆ ಕೇಸ್ ಹಾಕ್ಬೋದು

ಈ ಬಾರಿ ನೀವು ಇದನ್ನ ಡೈವರ್ಟ್ ಮಾಡುದ್ರೆ ನಾವು ಕೋರ್ಟ್ ಮೊರೆ ಹೋಗ್ತಿವಿ

ಮರಳಿ ಆಟ ಶುರು ಮಾಡಿದ ಬಿಜೆಪಿ ರೆಬೆಲ್ಸ್ !

ನೇರವಾಗಿ ಅಮಿತ್ ಶಾ ತಲುಪಿದ ಅಸಮಾಧಾನ

ರಾಜ್ಯ ಬಿಜೆಪಿ ಭಿನ್ನಮತದ ಬಗ್ಗೆ ಮಾಹಿತಿ

ಇಂದಿನ ಖಾಸಗಿ ಕಾರ್ಯಕ್ರಮದಲ್ಲಿ ಷಾ ಗೆ ಚೀಟಿ ನೀಡಿದ ಲಿಂಬಾವಳಿ

ಆ ಬಳಿಕ ಯಡಿಯೂರಪ್ಪ, ವಿಜಯೇಂದ್ರ ಜೊತೆ ಷಾ ಕೆಲ ನಿಮಿಷ ಮಾತುಕತೆ

ಲಿಂಬಾವಳಿ ಜೊತೆಯೂ ಪ್ರತ್ಯೇಕ ಚರ್ಚೆ

*ಆ ನಂತರ ದೆಹಲಿಗೆ ಬರುವಂತೆ ಲಿಂಬಾವಳಿಗೆ ಸೂಚನೆ*

ರೆಬೆಲ್ ನಾಯಕನಿಗೆ ಸೂಚನೆ ನೀಡಿದ ಅಮಿತ್ ಷಾ

*ಶೀಘ್ರದಲ್ಲೇ ರೆಬೆಲ್ಸ್ ಟೀಂ ದೆಹಲಿಗೆ*

ರಾಜ್ಯ ಬಿಜೆಪಿ ಭಿನ್ನಮತ,‌ ಅಧ್ಯಕ್ಷ ಸ್ಥಾನದ ವಿಚಾರ ಚರ್ಚೆ

ಚರ್ಚೆ ಬಳಿಕವೇ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ತೀರ್ಮಾನ?

ವಿಧಾನಸಭೆ ಮೊಗಸಾಲೆಯಲ್ಲೂ ಸಭೆ ಸೇರಿದ್ದ ರೆಬೆಲ್ಸ್ ಟೀಂ ನ ಕೆಲ ಸದಸ್ಯರು

ತಮ್ಮ ಮುಂದಿನ ಹಾದಿ ಬಗ್ಗೆ ಚರ್ಚೆ ನಡೆಸಿದ್ದ ನಾಯಕರುಗಳು

ಅಲ್ಪಸಂಖ್ಯಾತ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಈ ಬಾರಿ ಬಜೆಟ್ ನಲ್ಲಿ ಅವರಿಗೆ ಹಣ ನೀಡಿದ್ದೇವೆ.

ಬಿಜೆಪಿಯವರಂತೆ ಸಬ್ ಕಾ ಸಾಥ್ ಅಂತ ಹೇಳಿ ಒಂದು ಧರ್ಮ ಜಾತಿ ಓಲೈಕೆಯನ್ನ ನಾವು ಮಾಡಲ್ಲ

ಬಿಜೆಪಿಯವರು ಸೆಕ್ಯುಲರಿಸಂಗೆ ವಿರೋಧ ವ್ಯಕ್ತಪಡಿಸುವವರು

ಅದಕ್ಕೆ ಅವರು ಇದನ್ನ ಹಲಾಲ್, ಮತ್ತೊಂದು ಅನ್ನೋ ಸಂಕುಚಿತ ಮನೋಭಾವದಿಂದ ಕರೆದಿದ್ದಾರೆ.

ನಾವು ಎಲ್ಲರನ್ನೂ ಒಳಗೊಂಡ ದೂರದೃಷ್ಟಿಯ,ಆರ್ಥಿಕ ಸಾಮಾಜಿಕ ಬೆಳವಣಿಗೆಗೆ ಒತ್ತು ಕೊಡುವ ಬಜೆಟ್ ನೀಡಿದ್ದೇವೆ

ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಸಿಎಂ

ಸಿಎಂ ಹೇಳಿಕೆ

25-26 ನೇ ಸಾಲಿನ ಬಜೆಟ್ ಮಂಡನೆ ಆಗಿದೆ

ಇದು ಪೂರ್ಣ ಪ್ರಮಾಣದ ಬಜೆಟ್

ಕಳೆದ ಸಾಲಿನಲ್ಲಿ 3ಲಕ್ಷದ 71,ಸಾವಿರದ 121 ಕೋಟಿ ಮೊತ್ತದ ಬಜೆಟ್ ಮಂಡನೆ ಆಗಿತ್ತು

ಈ ಸಲ ಅದು ನಾಲ್ಕು ಲಕ್ಷ ಕೋಟಿ ತಲುಪಿದೆ.

ಕಳೆದ ಬಾರಿಗಿಂತ ಸುಮಾರು 38,167 ಕೋಟಿ ರೂಪಾಯಿ ಹೆಚ್ಚಳವಾಗಿದೆ

10:03 ರಷ್ಟು ಬಜೆಟ್ ಬೆಳವಣಿಗೆ ಆಗಿದೆ

ಆಹಾರ ಇಲಾಖೆ ಹೊರತು ಪಡಿಸಿ ಉಳಿದೆಲ್ಲ ಇಲಾಖೆಗಳಿಗೆ ಹೆಚ್ಚು ಹಣ ನೀಡಲಾಗಿದೆ.

ಬಿಜೆಪಿ ರಾಜಕೀಯ ಕಾರಣಕ್ಕೆ ಇದನ್ನ ವಿರೋಧಿಸುತ್ತಿದ್ದಾರೆ.

ದೇಶದ ಉಳಿದೆಡೆ ನಮ್ಮ ಗ್ಯಾರಂಟಿ ಗಳ ಕಾಫಿಯನ್ನ ಅವರು ಮಾಡ್ತಿದ್ದಾರೆ.

ಸಿಎಂ ಹೇಳಿಕೆ

ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಒಪಿಎಸ್ OPS ಬಗ್ಗೆ ಪ್ರಸ್ತಾಪವೇ ಮಾಡಿಲ್ಲ

ಬಹಳ ದೊಡ್ಡ ಭಾಷಣ ಮಾಡ್ತಾರೆ ಅಷ್ಟೇ..

ನಿರುದ್ಯೋಗ ಉದ್ಯೋಗವೇ ಇಲ್ಲ

ಏರ್ ಪೋರ್ಟ್ ಬಗ್ಗೆ ಮಾತಾಡಿಲ್ಲ, HAL ಏರ್ ಪೋರ್ಟ್ ಏನಾಗಿದೆ..?

ಹೊಸ ಪೋರ್ಟ್ ಮಾಡಬೇಕು, ರೈತರ ಭೂಮಿ ಖರೀದಿ

ಸಿಎಂ ನಂಬರ್ ಮಾಡಿದ್ರೆ, ಸಾಲದಲ್ಲಿ ನಂಬರ್ ಮಾಡಿದ್ದಾರೆ

ಈ ಬಜೆಟ್ ಗಾತ್ರದಲ್ಲಿ 27% ಸಾಲ ಮಾಡಿದೆ, ಬಡ್ಡಿ ಕಟ್ಟೋದ್ರಲ್ಲೇ ದಿನ ಕಳೆದುಹೋಗುತ್ತದೆ

ಆದರೆ ಸಿದ್ದರಾಮಯ್ಯ ಅವರೇ ನಿಮ್ದು ಇದು ಕೊನೆ ಬಜೆಟ್..

ಸರ್ವಜನಾಂಗದ ಶಾಂತಿ ತೋಟದಲ್ಲಿ ಯಾರು ಪಾಲುದಾರರು..? ಅಲ್ಪ ಸಂಖ್ಯಾತರ ಮಿಂಚಿನ ಓಟ

ಪರಿಶಿಷ್ಟ ಜಾತಿಗಾಗಿ SCP, TSP ಹಣ ಬಳಕೆ ಮಾಡಿ, ಗ್ಯಾರಂಟಿ ಯೋಜನೆಗೆ ಬಳಕೆ ಮಾಡ್ಬೇಡಿ

ಸತೀಶ್ ಜಾರಕಿಹೊಳಿ ಅವರು ಎಸ್.ಟಿ ಎಸ್.ಸಿ ಹಣ ಬಳಕೆ ಮಾಡಬಾರದಾಗಿತ್ತು ಅಂತ ಹೇಳಿದ್ದಾರೆ

ನನಗೆ ಬಹಳ ಖುಷಿ ಆಯ್ತು, ಯಾಕೆಂದರೆ ಸಿಎಂಗೆ ಬಹಳ ಹತ್ತಿರದ ಸಚಿವರು ಸತೀಶ್ ಜಾರಕಿಹೊಳಿ

ನನಗೆ ಅನ್ಸುತ್ತೆ ಈ ಬಾರಿ ಗ್ಯಾರಂಟಿಗೆ ದಲಿತರ ಹಣ ಬಳಸಲ್ಲ ಅನ್ಸುತ್ತೆ

*exclusive*

ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್ ನಲ್ಲಿ ಏಕರೂಪ ಟಿಕೆಟ್ ದರ ನಿಗದಿ ವಿಚಾರ

ಬೆಂಗಳೂರು ಮಾಲ್ ಓನರ್ಸ್,ಪಿವಿಆರ್, ಸಿನಿಮಾ ಥಿಯೇಟರ್ ಮಾಲೀಕರ ಅಸಮಾಧಾನ

ಸರ್ಕಾರದ ಸೂಚನೆ ಅಥವಾ ಆದೇಶದ ಬಗ್ಗೆ ನಮಗೆ ಕ್ಲಾರಿಟಿ ಇಲ್ಲ.

ಪ್ರತಿ ಟಿಕೆಟ್ 200 ರೂ ನಿಗದಿ ಮಾಡಿದ್ರೆ ಚಿತ್ರಮಂದಿರ ಮಾಲೀಕರು ಕಥೆ ಏನು..!

ಕೇವಲ 200 ರೂ ನಿಗದಿಯಿಂದ ಡೈರೆಕ್ಟ್ ಸ್ಪೇಷಲ್, ಮಲ್ಟಿಪ್ಲೆಕ್ಸ್, ಐಮ್ಯಾಕ್ ಮಂದಿರಗಳಲ್ಲಿ‌ ಲಾಸ್ ಆಗಲಿದೆ.

ಒಂದು ಸಿನಿಮಾ‌ ಪ್ರದರ್ಶನದಿಂದ ಕೇವಲ‌ 6 ಸಾವಿರ ಕಲೆಕ್ಷನ್ ಆಗಲಿದೆ.

ಇದರಿಂದ ಸಿನಿಮಾ ಪ್ರದರ್ಶನ ನಡೆಸಲು ಸಾಧ್ಯವೇ..?

ನಮಗೆ ಸರ್ಕಾರದ ಆದೇಶದ ಬಗೆಗಿನ ಸ್ಪಷ್ಟನೆ ಸಿಕ್ಕಿಲ್ಲ. ಮುಂದೆ ಆ ಬಗ್ಗೆ ನಾವೇಲ್ಲ ಸಭೆ ನಡೆಸಿ ತೀರ್ಮಾನ ಮಾಡ್ತೇವೆ.

ಈಗಾಗಲೇ ಗ್ರಾಹಕರ ದೂರಿನ್ವಯ ಮಾಲ್ ನಲ್ಲಿರುವ ಥಿಯೇಟರ್ ಗಳಲ್ಲಿ ದರ ಇಳಿಕೆ ಮಾಡಿದ್ದಾರೆ.

ನಾನಾ ಆಫರ್ ಗಳನ್ನು ನೀಡಿ ದರ ಕಡಿತ ಮಾಡಿದ್ದಾರೆ. ಹಾಗಾಗಿ ಎಲ್ಲಾ ಮಾದರಿಯ ಥಿಯೇಟರ್ ಸರ್ಕಾರದ ದರ ನಿಗದಿ ಆಗುತ್ತಾ…?

ನಮ್ಮಲ್ಲೂ ಹಲವು ಪ್ರಶ್ನೆಗಳಿವೆ. ಆ ಬಗ್ಗೆ ಸರ್ಕಾರದ ಜತೆ ಮಾತನಾಡುವ ಸನ್ನಿವೇಶ ನಿರ್ಮಾಣವಾದ್ರೆ ಮಾತುಕತೆ ನಡೆಸುತ್ತೇವೆ.

 *ಬೆಂಗಳೂರು ಮಾಲ್ ಅಸೋಸಿಯೇಷನ್ ಮುಖಂಡ ನಂದೀಶ್ ಟಿವಿ೫ ಕನ್ನಡ ಹೇಳಿಕೆ*

ಇದು ಧರ್ಮಾಧಾರಿತ ಬಜೆಟ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು..

ಇತ್ತೀಚೆಗೆ ಸಿದ್ದರಾಮಯ್ಯ ಸ್ವಲ್ಪ ಎಚ್ಚೆತ್ತುಕೊಂಡಿದ್ದಾರೆ

ರಿಜರ್ವೆಷನ್ 4% ಕೊಟ್ಟಾಗ ಧರ್ಮದ ಆಧಾರದ ಮೇಲೆ ಇತ್ತು

ನಮ್ಮ ಸರ್ಕಾರ ಬಂದು ಧರ್ಮಾಧಾರಿತ ಮೀಸಲಾತಿ ಇರಲ್ಲ ಅಂತ ನಾವೇ ತೆಗೆದಿದ್ದು

ಈಗ ನೇರವಾಗಿ ತಿನ್ನುವ ಬದಲು ಸುತ್ತುಕೊಂಡು ಬಂದು ತಿನ್ನುತ್ತಿದ್ದಾರೆ

ಜೈನರಿಗೆ ಬರೀ 100 ಕೋಟಿ, ಕ್ರೈಸ್ತರಿಗೆ 250 ಕೋಟಿ ರೂಪಾಯಿ,

ಮುಸ್ಲಿಂಗೆ 1000 ಕೋಟಿ ರುಪಾಯಿ ಯಾಕೆ..?

ಇದೇನು ಗಿಫ್ಟ್..? ಇದು ಜಮೀರ್ ಅಹ್ಮದ್ ಗೆ ಖುಷಿ ಆಗಿರುತ್ತದೆ

ಸಿದ್ದರಾಮಯ್ಯ ಅವರು ರಿಸೈನ್ ಮಾಡಿ, ಜಮೀರ್ ಅಹ್ಮದ್ ಸಿಎಂ ಮಾಡಿದ್ರೆ ಉತ್ತಮ

ಹೆಚ್.ಸಿ ಮಹಾದೇವಪ್ಪಗೆ
ನಾಚಿಕೆ ಆಗಬೇಕು

ಇದನ್ನು ನೋಡಿದ್ರೆ ಹೆಚ್.ಸಿ ಮಹಾದೇವಪ್ಪ ರಾಜೀನಾಮೆ ಕೊಟ್ಟು ಬರಬೇಕು

ಗಂಡು ಅಂದರೆ ಜಮೀರ್ ಅಹ್ಮದ್.. ರೀ..

ಜನಾಂಗವನ್ನು ಬಲಿ ಕೊಡುವ ಕೆಲಸ ಜಮೀರ್ ಅಹ್ಮದ್ ಮಾಡಲ್ಲ

ಧರ್ಮದ ಮೇಲೆ ಅಲ್ಪಸಖ್ಯಾತರಿಗೆ ಮೀಸಲಾತಿ ಕೊಟ್ಟಿಲ್ಲ ಎಂಬ ಸಿಎಂ ಹೇಳಿಕೆ ವಿಚಾರ..

ಸಿದ್ದರಾಮಯ್ಯಗೆ ಛಲವಾದಿ ನಾರಾಯಣಸ್ವಾಮಿ ಹೇಳಿಕೆ..

ಮೊದಲು 5% ಮೀಸಲಾತಿ ಕೊಟ್ಟಿದ್ದು ಧರ್ಮದ ಮೇಲೆ

ಅವರು ಕೊಟ್ಟಾಗ ಮುಸ್ಲಿಂ ಮೀಸಲಾತಿ ಅಂತ ಇತ್ತು

ನಮ್ಮ ಸರ್ಕಾರ ಬಂದು ಧರ್ಮಾಧಾರಿತ ಮೀಸಲಾತಿ ಇಲ್ಲ ಅಂತ ತೆಗೆದೆವು

ಈಗ ಕಾಂಗ್ರೆಸ್‌ನವರು ಎಚ್ಚೆತ್ತುಕೊಂಡಿದ್ದಾರೆ

ಈಗ ನೇರವಾಗಿ ತಿನ್ನುವ ಬದಲು ಸುತ್ತಾಕೊಂಡು ತಿನ್ನುತ್ತಿದ್ದಾರೆ

ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಿ ಜಮೀರ್‌ನ ಸಿಎಂ ಮಾಡಲಿ

ಆ ತಾಕತ್ತು ಜಮೀರ್ ಅಹಮದ್‌ಗೆ ಇದೆ

ನಾಚಿಕೆಯಾಗಬೇಕು ಡಾ.ಮಹದೇವಪ್ಪಗೆ

ಅಂಬೇಡ್ಕರ್‌ ತತ್ವ ಸಿದ್ದಾಂತದ ರಕ್ತ ಹರಿಯುತ್ತಿದ್ರೆ ರಾಜೀನಾಮೆ ಕೊಟ್ಟು ಬರಲಿ

ನೋಡ್ರೀ ಗಂಡು ಅಂದ್ರೆ ಜಮೀರ್ ಅಹಮದ್ ಕಣ್ರೀ

ಮಹದೇವಪ್ಪ ತರ ಸಮಾಜ ಬಲಿಕೊಡುವ ನೀಚ ಕೆಲಸ ಜಮೀರ್ ಮಾಡಿಲ್ಲ

ಸಿಎಂ ಪತ್ನಿ,‌ಭೈರತಿ ಸುರೇಶ್‌ ಇಡಿ ಸಮನ್ಸ್ ರದ್ದು ವಿಚಾರ..

ನಾವು ಕೋರ್ಟ್ ತೀರ್ಪಿನ ಮೇಕೆ ಕಾಮೆಂಟ್ ಮಾಡಲ್ಲ

ಲೋಕಾಯುಕ್ತದ ಮೇಲೆ ಕಾಮೆಂಟ್ ಮಾಡ್ತೇವೆ

ಲೋಕಾಯುಕ್ತ ಕೊಡುವ ವರದಿ ಮೇಲೆ ಕೋರ್ಟ್ ತೀರ್ಮಾನ ತೆಗೆದುಕೊಂಡಿದೆ

ಕೋರ್ಟ್ ಆದೇಶಗಳು ತನಿಖಾ ಸಂಸ್ಥೆಗಳು ಕೊಡುವ ವರದಿಗಳ ಮೇಲೆ ನಿಂತಿರುತ್ತವೆ

ಇದು ಆಗುತ್ತೆ ಅಂತ ನಮಗೆ ಮೊದಲೇ ಗೊತ್ತಿತ್ತು

ಕೋರ್ಟ್ ತೀರ್ಪನ್ನ ನಾವು ಸ್ವಾಗತ ಮಾಡ್ತೇವೆ

ಛಲವಾದಿ ನಾರಾಯಣಸ್ವಾಮಿ ಹೇಳಿಕೆ..

ಮುಲ್ಲಾಗಳಿಗೆ ಗೌರವ ಧನ ಹೆಚ್ಚಳ..

ಉರ್ದು ಶಾಲೆಗಳಿಗೆ 100 ‌ಕೋಟಿ ರೂಪಾಯಿ

ಯಾಕೆ ಕನ್ನಡ ಶಾಲೆಗೆ ಕೊಡಲ್ವಾ..?

ಅಲ್ಪಸಂಖ್ಯಾತರಿಗೆ 1000 ಕೋಟಿಗಳ ಮತ ಸಂರಕ್ಷಣಾ ವರದಾನ ಮಾಡಿದೆ

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಬಗ್ಗೆ ಚಕಾರವಿಲ್ಲ

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾತಾಡಿದ್ರಾ..?

ಮೊದಲು ಬ್ರ್ಯಾಂಡ್ ಬೆಂಗಳೂರು ಅಂದ್ರು, ಆಗ ಬ್ರ್ಯಾಂಡಿ ಬೆಂಗಳೂರು ಆಯ್ತು

ಈ ಗ್ರೇಟರ್ ಬೆಂಗಳೂರು ಅಂತಾರೆ

ತುಖ್ಡಾ ಬೆಂಗಳೂರು, ಬೆಂಗಳೂರನ್ನು ಏಳು ಭಾಗ ಮಾಡ್ತಾರೆ ಅಂತೆ

ಜನ ನಿಮ್ಮನ್ನು ಭಾಗ ಮಾಡ್ತಾರೆ..

ಕಳಸಬಂಡೂರಿ, ಕೃಷ್ಣ ಹಾಗೂ ಕಾವೇರಿ ಕಣಿವೆಯಲ್ಲಿ ಕಾಮಗಾರಿಗಳು ಹಾಗೆ ಇದೆ

ಪಾದಯಾತ್ರೆಯಲ್ಲೇ ಮೇಕೆದಾಟು ಮುಳುಗಿದೆ

Tags: Araga JnanedraBheema Naikbudgetbudget 2025Chalavadi NarayanaswamyChristianDK ShivakumarGaniga RaviMahadevappashivalingegowdasiddaramaiahSilk
Previous Post

ಮಹಿಳಾ ದಿನಾಚರಣೆಯಲ್ಲಿ, ಕಾರು ಅಪಘಾತ ನೆನೆದ ಸಚಿವೆ

Next Post

ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಮಹಿಳೆಯರು ಸಜ್ಜಾಗಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ

Related Posts

Daily Horoscope: ಇಂದು ಈ ರಾಶಿಯ ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ..!
Top Story

Daily Horoscope: ಇಂದು ಈ ರಾಶಿಯ ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ..!

by ಪ್ರತಿಧ್ವನಿ
December 4, 2025
0

ಮೇಷ ರಾಶಿಯ ಈ ದಿನದ ಭವಿಷ್ಯ ಮೇಷ ರಾಶಿಯವರು ಇಂದು ದೂರದ ಪ್ರಯಾಣ ಹೋಗುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ ಹೆಚ್ಚಾಗುತ್ತದೆ. ಇಂದು ನಿಮ್ಮ...

Read moreDetails

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

December 3, 2025

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

December 3, 2025
Next Post

ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಮಹಿಳೆಯರು ಸಜ್ಜಾಗಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ

Recent News

Daily Horoscope: ಇಂದು ಈ ರಾಶಿಯ ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ..!
Top Story

Daily Horoscope: ಇಂದು ಈ ರಾಶಿಯ ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ..!

by ಪ್ರತಿಧ್ವನಿ
December 4, 2025
Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಈ ರಾಶಿಯ ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ..!

Daily Horoscope: ಇಂದು ಈ ರಾಶಿಯ ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ..!

December 4, 2025

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada