
ಬೆಂಗಳೂರು: ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾರನಕಟ್ಟೆಕೆರೆ ಸುಮಾರು 46 ಎಕ್ಕರೆ ವಿಸ್ತೀರ್ಣವನ್ನು ಹೊಂದಿದ್ದು, 21 ಎಕ್ಕರೆಗೂ ಹೆಚ್ಚು ವಿಸ್ತೀರ್ಣವನ್ನು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಖಾಸಗಿ ಸಂಘ, ಸಂಸ್ಥೆಗಳು ಆಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಿ ಭಾಗಶಹ ಕೆರೆಯನ್ನೇ ನುಂಗಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರನ್ನು ನೀಡಲಾಗಿದೆ.
ಕಾನೂನುಗಳನ್ನು ಉಲ್ಲಂಘಿಸಿ ಕೆರೆ ಒಳಗಡೆ ಕಟ್ಟಡಗಳನ್ನು ನಿರ್ಮಾಣ ಮಾಡಿ ಕೆರೆಯನ್ನು ಆಕ್ರಮಿಸಿ ಕೊಂಡಿರುವ, ನ್ಯಾಯಾಧೀಶರ ವಸತಿಗೃಹ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕಟ್ಟಡಗಳನ್ನು ಕೆರೆ ಒಳಗಿನಿಂದ ತೆರವುಗೊಳಿಸುವಂತೆ ಮತ್ತು ಕೆರೆಯನ್ನು ಪುನಶ್ಚೇತನಗೊಳಿಸುವಂತೆ ನೈಜ ಹೋರಾಟಗಾರರ ವೇದಿಕೆಯ ಹೆಚ್. ಎಂ ವೆಂಕಟೇಶ್ ಕಾಳಜಿ ಫೌಂಡೇಶನ್ ಜಿ ಎಲ್ ನಟರಾಜ್ ಮಾಹಿತಿ ಹಕ್ಕು ರಾಜ್ಯ ವೇದಿಕೆಯ ಹೆಚ್.ಎಸ್ ಸ್ವಾಮಿ ಮತ್ತು ಮಾಹಿತಿ ಅಧ್ಯಯನ ಕೇಂದ್ರದ ಎಲ್. ಎಸ್ ಮಲ್ಲಿಕಾರ್ಜುನ್ ರವರು ಲೋಕಾಯುಕ್ತಕ್ಕೆ ಇಂದು ದೂರನ್ನು ನೀಡಿರುತ್ತಾರೆ.
ಇತ್ತೀಚಿಗೆ ಈ ಕೆರೆ ಅಂಗಳಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ಹಂದಿ ಜೋಗಿ ಜನಾಂಗದ 42 ಕುಟುಂಬಗಳನ್ನು ಇಲ್ಲಿಂದ ಸ್ಥಳಾಂತರಿಸುವಂತೆ ತಾಲೂಕ ಆಡಳಿತಕ್ಕೆ ಸೂಚನೆ ನೀಡಿರುವುದನ್ನುಇಲ್ಲಿಸ್ಮರಿಸ ಬಹುದು