ಬೆಂಗಳೂರು :- ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಕೇವಲ ಅಮಾಯಕ ಯುವತಿಯರು ಮಾತ್ರವಲ್ಲದೇ, ಸರ್ಕಾರಿ ಉದ್ಯೋಗದಲ್ಲಿದ್ದ ಯುವತಿಯರು, ಮಹಿಳೆಯರಿಗೂ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬಂದಿದ್ದು, ಇಬ್ಬರು ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಪ್ರಜ್ವಲ್ ವಿರುದ್ಧ ಎಸ್‌ಐಟಿ ಮುಂದೆ ದೂರು ದಾಖಲಿಸಿದ್ದಾರೆ. ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ, ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಇನ್ನು ಈಗಾಗಲೇ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಹುಟುಕಾಟ ಆರಂಭವಾಗಿದೆ. ಇದರ ಜೊತೆಗೆ ನಿನ್ನೆ ಸಂಸದ ಪ್ರಜ್ವಲ್ ರೇವಣ್ಣರ ವಿರುದ್ಧ ಇನ್ನೆರಡು ದೂರುಗಳು ದಾಖಲಾಗಿದ್ದು, ಸಂತ್ರಸ್ತೆಯರು ಸರ್ಕಾರಿ ನೌಕರಿಯಲ್ಲಿದ್ದು, ಅವರಿಗೆ ಪ್ರಜ್ವಲ್ ರೇವಣ್ಣ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ. ಇತ್ತ ದೂರು ನೀಡುವ ಸಂದರ್ಭದಲ್ಲಿ ಮಹಿಳೆಯರು ಪ್ರಜ್ವಲ್ ರೇವಣ್ಣ ಮೇಲಿಂದ ಮೇಲೆ ವಿಡಿಯೋ ಕರೆಗಳನ್ನು ಮಾಡುತ್ತಿದ್ರು.
ಎಷ್ಟು ಹೇಳಿದ್ರೂ ಒತ್ತಾಯಪೂರ್ವಕವಾಗಿ ಸಂಸದರ ಕಚೇರಿಗೆ ಬರಲು ಹೇಳುತ್ತಿದ್ರು. ಅಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಒತ್ತಡ ಹೇರುತ್ತಿದ್ರು. ನನ್ನೊಂದಿಗೆ ಸಹಕರಿಸಿದ್ರೆ, ನಿಮ್ಮ ವರ್ಗಾವಣೆ ಸುಲಭ ಎನ್ನುತ್ತಿದ್ರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.