ನಟ ಚೇತನ್ ಕುಮಾರ್ ಬ್ರಾಹ್ಮಣ್ಯದ ಕುರಿತು ಹಾಕಿದ್ದ ಪೋಸ್ಟ್ ಅನ್ನು ಬ್ರಾಹ್ಮಣರ ವಿರುದ್ಧ ಅವಹೇಳನವಾಗಿ ಮಾತಾನಾಡುತ್ತಿದ್ದಾರೆ ಎಂದು ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಸವನಗುಡಿ ಪೋಲಿಸ್ ದೂರು ದಾಖಲಿಸಿದ್ದರು. ಈ ಕುರಿತು ಬಸವನಗುಡಿ ಪೋಲಿಸರು ನಟ ಚೇತನ್ ಅವರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದು ನಾಳೆ ನಟ ಚೇತನ್ ವಿಚಾರಣೆಗೆ ಹೋಗಿ ಹೇಳಿಕೆ ನೀಡಲಿದ್ದಾರೆ. ಈ ಪ್ರಕರಣದ ಕುರಿತು ಪ್ರತಿಧ್ವನಿ ನ್ಯೂಸ್ಗೆ ಪ್ರತಿಕ್ರಿಯಿಸಿದ್ದಾರೆ.
ಏನಿದು ಪ್ರಕರಣ?
ಕಳೆದ ಒಂದು ವಾರದಿಂದ ನಟ ಚೇತನ್ ಅವರ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿದ್ದು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಕ್ಕೆ ಅವಹೇಳನ ಮಾಡಿದ್ದಾರೆ ಕೂಡ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಬಸವನಗುಡಿ ಪೋಲಿಸ್ ಠಾಣೆಗೆ ವಿಪ್ರ ಯುವ ವೇದಿಕೆ ಅದ್ಯಕ್ಷ ಪವನ್ ಕುಮಾರ್ ದೂರು ನೀಡಿದ್ದರು. ಈ ಕುರಿತು ಈಗ ಬಸವನಗುಡಿ ಪೋಲಿಸರು ನಟ ಚೇತನ್ ಅವರಿಗೆ ನೋಟಿಸ್ ನೀಡಿದ್ದು ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಟ ಚೇತನ್, ಬ್ರಾಹ್ಮಣ್ಯದ ವಿರುದ್ಧ ನನ್ಮ ಸಾಮಾಜಿಕ ಮಾಧ್ಉಮದಲ್ಲಿ ಹಾಕಿದ ಪೋಸ್ಟ್‌ಗಳ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇಂದು ಬೆಂಗಳೂರು ಬಸವನಗುಡಿ ಪೋಲಿಸ್ ಠಾಣೆಯಿಂದ ನನಗೆ ನೋಟಿಸ್ ಬಂದಿದೆ. ನಾಳೆ ಬೆಳಿಗ್ಗೆ ನಾನು ಪೋಲಿಸ್ ಠಾಣೆಗೆ ಹೋಗುತ್ತಿದ್ದೇನೆ. ಸಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ! ಎಂದು ಬರೆದುಕೊಂಡಿದ್ದಾರೆ.
ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ.!
ಬಾಬಾ ಸಾಹೇಬರು ಕಲಿಸಿಕೊಟ್ಟಿರುವುದು ಒಂದೇ ನಾವೆಲ್ಲರೂ ಸಮಾನೆರು. ಆದರೆ ಬ್ರಾಹ್ಮಣ್ಯ ಅನ್ನೊದು ಜಾತಿ ವ್ಯವಸ್ಥೆಯನ್ನು ಕಟ್ಟಿಕೊಟ್ಟಿದೆ, ಇದನ್ನು ನಾನು ಮಾತ್ರ ಹೇಳ್ತಿಲ್ಲ ಅನೇಕ ದೊಡ್ಡ ನಾಯಕರು ಹೇಳಿದ್ದಾರೆ. ಬಾಬಾ ಸಾಹೇಬರು, ಪೆರಿಯಾರ್, ಬಸವಣ್ಣ ಮತ್ತು ಬುದ್ದ ಅವರು ಕೂಡ ಇದನ್ನೆ ಹೇಳಿರುವುದು, ಇದನ್ನು ಪ್ರಶ್ನೆ ಮಾಡೊರನ್ನು ಈತರದ ಸಮಸ್ಯೆಗಳಿಗೆ ಸಿಲುಕಿಸುತ್ತಿದ್ದಾರೆ. ಮುಖ್ಯವಾಗಿ ಸಂವಿಧಾನ ಬೆಂಬಲಿಸುವವರು, ಅಸಮಾನತೆಯನ್ನು ವಿರೋಧಿಸಿ ಹೋರಾಡುವವರನ್ನು ಸುಳ್ಳು ಪ್ರಕರಣ ದಾಖಲಿಸಿ ಸಮಸ್ಯೆಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನಮ್ಮ ವಿರೋಧ ಧರ್ಮದ ವಿರುದ್ಧವಲ್ಲ.
ಬ್ರಾಹ್ಮಣ್ಯ ಅನ್ನೊದು ಎಲ್ಲಾ ಜಾತಿಯಲ್ಲೂ ಇದೆ ಎಲ್ಲಾ ಧರ್ಮದಲ್ಲೂ ಇದೆ ಆದರೆ ಭೇದ – ಭಾವನೇ ಸಿದ್ದಾಂತ, ಶ್ರೇಷ್ಠ – ಕನಿಷ್ಠ ಅಂತ ಮೌಢ್ಯವನ್ನು ತುಂಬುವ ಯಾರೇ ಆದರು ನಾವು ಅವರ ವಿರುದ್ಧ ನಿಲ್ಲುತ್ತೇವೆ. ಮೌಢ್ಯವನ್ನು ತುಂಬಿ ಶಿಕ್ಷಣದಿಂದ, ಮೂಲಭೂತ ಸೌಕರ್ಯಗಳಿಂದ ವಂಚಿಸುವವರ ವಿರುದ್ಧ ನಾವು.
ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿವುದು ಅವರ ತಪ್ಪಲ್ಲ ಆದರೆ ಭೇದಭಾವ ಮುಂದುವರೆಸಿಕೊಂಡು ಬರುವುದು ತಪ್ಪು. ಈತರದ ಕೆಟ್ಟ ವ್ಯವಸ್ಥೆ ಬ್ರಾಹ್ಮಣರು ಮಾತ್ರ ಮಾಡಿದ್ದಾರೆ ಅಂತಲ್ಲ ಬೇರೆಯವರು ಮಾಡಿದ್ದಾರೆ. ಈತರದ ಕೆಟ್ಟ ವ್ಯವಸ್ಥೆಗೆ ನಾವು ಕೂಡ ಪಾಲುದಾರರು. ನನಗೆ ಎಲ್ಲವೂ ಸಿಕ್ಕಿದೆ ನಾನು ಎಲ್ಲವನ್ನೂ ಅನುಭವಿಸುತ್ತಿದ್ದೇನೆ ಎಂದರೆ ಅದನ್ನು ಸಮಾಜಕ್ಕೆ ವಾಪಸ್ ಕೊಡಬೇಕು ಅಲ್ಲವೇ ಎಂದಿದ್ದಾರೆ. ಈತರ ಅಸಮಾನತೆ ಬೆಂಬಲಿಸುವವರ ವಿರುದ್ಧ ನಾವು ಯಾವಾಗಲು ಹೋರಾಡುತ್ತೇವೆ. ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿ ಕಾರ್ಯಕರ್ತ ಗಿರೀಶ್ ಭಾರದ್ವಾಜ್ FRRO ಗೆ ನೀಡಿರುವ ಕಂಪ್ಲೆಂಟ್ ಕುರಿತು ಮಾತನಾಡುದ ಅವರು, ನಾನು ಅಕಸ್ಮಾತ್ ಅಮೇರಿಕಾದಲ್ಲಿ ಹುಟ್ಟಿರಬಹುದು, ಆದರೆ ನನ್ನ ತಾತ ಇಲ್ಲಿಯವರು, ಅವರು ಸ್ವಾತಂತ್ರ್ಯ ಹೋರಾಟಗಾರರು ಈಗಲೂ ನನ್ನ ಅಜ್ಜಿಗೆ ನನ್ನ ತಾತನ ಪರವಾಗಿ ಸ್ವಾತಂತ್ರ್ಯ ಹೋರಾಟಗಾರ ಪೆನ್ಸನ್ ಬರುತ್ತಿದೆ. ನಾನು ಅಮೇರಿಕಾದ ಓದು ಮುಗಿಯುತ್ತಿದ್ದಂತೆ ತೀರ್ಮಾನ ಮಾಡಿದ್ದೆ, ನಾನು ಕರ್ನಾಟಕದಲ್ಲೇ ಉಳಿಯೊದು, ನನ್ನ ಜನರಿಗಾಗೆ ಬದುಕೊದು ಎಂದು. ನಾನು ಯಾವುದೇ ವೀಸಾ ಕಾನೂನುಗಳನ್ನು ಉಲ್ಲಂಘನೆ ಮಾಡಿಲ್ಲ, ನನಗೆ ಗೊತ್ತಿದೆ ವೀಸಾ ಕಾನೂನಿನ ಪ್ರಕಾರ ನಾನು ಇಲ್ಲಿ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಮತ್ತು ಮತ ಚಲಾಯಿಸಲು ಸಾಧ್ಯವಿಲ್ಲ ಎಂದೂ ನಾನದನ್ನು ಮಾಡಿಲ್ಲ ಮಾಡಲ್ಲ. ಇದನ್ನು ಹೊರತು ಪಡಿಸಿ ನಾನು ಕೂಡ ಈ ದೇಶದ ಪ್ರಜೆ ಎಂದು ಹೇಳಿದ್ದಾರೆ.
ಈಗ ಪೋಲಿಸರಿಂದ ಬಂದಿರುವ ನೋಟಿಸ್ಗೆ ನಾನು ನಾಳೆ ಹೋಗಿ ಉತ್ತರಿಸುತ್ತೇನೆ. ಉತ್ತರಿಸಿದ ನಂತರ ನಾನು ಮಾತಾಡುತ್ತೇನೆ ಎಂದಿದ್ದಾರೆ. ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ




