ರಾಜ್ಯದಲ್ಲಿ 545 ಮಂದಿಯ ಪಿಎಸ್ಐ ನೇಮಕಾತಿ ಹಗರಣ ಬಹಿರಂಗವಾದ ಬೆನ್ನಲ್ಲೇ ಸಹಾಯ ಪ್ರಾಧ್ಯಾಪಕರ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಇದರಲ್ಲಿ ಸಚಿವ ಅಶ್ವಥ್ ನಾರಾಯಣ್ ಭಾಗಿಯಾಗಿದ್ದಾರೆ ಕೂಡಲೇ ಈ ಕುರಿತು ತನಿಖೆ ನಡೆಸಿ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಹೌದು, ಅತ್ತ ಪಿಎಸ್‌ಐ ಪರೀಕ್ಷೆ ಅಕ್ರಮವಾಗಿದ್ದು ನಿಷ್ಠಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದರೆ. ಇತ್ತ ಸಹಾಯ ಪ್ರಾಧ್ಯಾಪಕರ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಸಚಿವ ಅಶ್ವಥ್ ನಾರಾಯಣ್ ಸೇರಿ ಹಲವಾರು ಜನರ ವಿರುದ್ಧ ಬೆಂಗಳೂರು ಹೈಕೋರ್ಟ್ ವಕೀಲ ಎ.ಪಿ. ರಂಗನಾಥ್ ಪ್ರಕರಣ ದಾಖಲಿಸಿದ್ದಾರೆ.
1242 ಸಹಾಯಕ ಪ್ರಧ್ಯಾಪಕರ ಪರೀಕ್ಷೆ ಹುದ್ದೆಗೆ 600 ಹುದ್ದೆಗಳಿಗೆ 35 ರಿಂದ 75 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಕೇಳಿಬಂದಿದೆ. ಆದರೆ ಪೊಲೀಸರು ಕೇವಲ ಭೂಗೀಳ ಶಾಸ್ತ್ರ ಪತ್ರಕೆ ಸೋರಿಕೆ ಬಗ್ಗೆ ತನಿಖೆ ನಡೆಸುತ್ತಿದ್ದೆ ಆಧರೆ ಇಲ್ಲಿ ಇಂಗ್ಲಿಷ್ ಪತ್ರಿಕೆಯಲ್ಲೂ ಅಕ್ರಮ ನಡೆದಿರುವುದು ಕಂಡು ಬಂದಿದ್ದು ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಹೈಕೋರ್ಟ್ ವಕೀಲ ಎ.ಪಿ. ರಂಗನಾಥ್ ದದೂರು ಸಲ್ಲಿಸಿದ್ಧಾರೆ.
ದೂರಿನ ಪ್ರಕಾರ, ಸಹಾಯ ಪ್ರಾಧ್ಯಾಪಕರ ಪರೀಕ್ಷೆ ಅಕ್ರಮದಲ್ಲಿ ಕೆಇಎ ಅಧ್ಯಕ್ಷ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ , ಕಾಲೇಜು ಶಿಕ್ಷಣ ಆಯುಕ್ತ ಪಿ. ಪ್ರದೀಪ್, ಕೆಎಸ್‌ಒಯು ಕುಲಸಚಿವ ರಾಜಣ್ಣ , ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ್, ನೀವೃತ ಪ್ರಧ್ಯಾಪಕ ಶಿವಲಿಂಗಯ್ಯ, ಕೆಎಸ್‌ಒಯು ಪ್ರಧ್ಯಾಪಕ ಅಪ್ಪಾಜಿ ಗೌಡ ಮತ್ತು ಇತತರು ಸಹಾಯ ಪ್ರಧ್ಯಾಪಕರ ಪರೀಕ್ಷೆ ಅಕ್ರಮದಲ್ಲಿ ತೊಡಗಿರುವುದು ಕಂಡುಬಂದಿದ್ದು ಸೂಕ್ತ ವಿಚಾರಣೆ ಹಾಗೂ ತನಿಖೆ ನಡೆಸಲು ಕೋರಿ ದೂರು ನೀಡಿದ್ದಾರೆ.