
ಕಳೆದ ಕೆಲವು ದಿನಗಳಿಂದ ವಿವಾದ ನಡೆಯುತ್ತಿದೆ. ಈ ಘಟನೆಯು ರಾತ್ರಿ 10:15 ರ ಸುಮಾರಿಗೆ (ಶುಕ್ರವಾರ) ನಡೆದಿದ್ದು, 10 ರಿಂದ 15 ಸ್ಥಳೀಯರ ಗುಂಪು ಈದ್ಗಾದಿಂದ ಮತ್ತೊಂದು ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಿತು ಎಂದು ಜೋಧ್‌ಪುರ ಪೊಲೀಸ್ ಕಮಿಷನರ್ ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಶುಕ್ರವಾರ ತಡರಾತ್ರಿ ಎರಡು ಧಾರ್ಮಿಕ ಗುಂಪುಗಳ ನಡುವೆ ಸೂರಸಾಗರ್ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದಂತೆ
ರಾಜಸ್ಥಾನ(Rajasthan) ಜೋಧ್‌ಪುರ ಪೊಲೀಸರು (Jodhpur police) ಶನಿವಾರ (Saturday) ಕನಿಷ್ಠ 51 ಜನರನ್ನು ಬಂಧಿಸಿದ್ದಾರೆ ಎಂದು ಪ್ರಸ್ತುತ ಘಟನೆಯ ಬೆಳವಣಿಗೆಯ ಬಗ್ಗೆ ತಿಳಿದಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ರಾಜಾರಾಮ್ ವೃತ್ತದ ಬಳಿಯ ಈದ್ಗಾದಲ್ಲಿ ಎರಡು ಹೊಸ ಗೇಟ್‌ಗಳನ್ನು ಅಳವಡಿಸುವ ವಿಚಾರದಲ್ಲಿ ಘರ್ಷಣೆ ಸಂಭವಿಸಿದೆ.

ಕಳೆದ ಕೆಲವು ದಿನಗಳಿಂದ ವಿವಾದ ನಡೆಯುತ್ತಿದೆ. ಈ ಘಟನೆಯು ರಾತ್ರಿ 10:15 ರ ಸುಮಾರಿಗೆ (ಶುಕ್ರವಾರ) ನಡೆದಿದ್ದು, 10 ರಿಂದ 15 ಸ್ಥಳೀಯರ ಗುಂಪು ಈದ್ಗಾದಿಂದ ಮತ್ತೊಂದು ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಿತು ಎಂದು ಜೋಧ್‌ಪುರ ಪೊಲೀಸ್ ಕಮಿಷನರ್ ರಾಜೇಂದ್ರ ಸಿಂಗ್ ಹೇಳಿದ್ದಾರೆ.ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಜನರ ಗುಂಪು ಸ್ಥಳೀಯ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸ್ ವ್ಯಾನ್ ಸೇರಿದಂತೆ ಎರಡು ಕಾರುಗಳನ್ನು ಧ್ವಂಸಗೊಳಿಸಿತು ಎಂದು ಸಿಂಗ್ ಹೇಳಿದರು.
ವಿಷಯ ತಿಳಿದ ಪೊಲೀಸ್ ಅಧಿಕಾರಿಗಳ ಪ್ರಕಾರ, ಈದ್ಗಾ ಹಿಂಬದಿಯ ಗೋಡೆಗೆ ಎರಡು ಹೊಸ ಗೇಟ್‌ಗಳನ್ನು ಸ್ಥಾಪಿಸುವ ಬಗ್ಗೆ ಕಳೆದ ಕೆಲವು ದಿನಗಳಿಂದ ವಿವಾದ ನಡೆಯುತ್ತಿದೆ. ಅವುಗಳ ನಿರ್ಮಾಣವು ಸ್ಥಳೀಯ ಪುರಸಭೆಯ ಕಾನೂನು ಪ್ರೋಟೋಕಾಲ್‌ಗಳನ್ನು ಅನುಸರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿ ಈದ್ಗಾದಲ್ಲಿ ಗೇಟ್‌ಗಳನ್ನು ಉದ್ಘಾಟಿಸಲು ಸಿಬ್ಬಂದಿ ಮುಂದಾದಾಗ ಸ್ಥಳೀಯರು ಪ್ರತಿಭಟಿಸಿದರು ಎಂದು ಸಿಂಗ್ ಹೇಳಿದ್ದಾರೆ. ಆದಾಗ್ಯೂ, ಪೊಲೀಸರು ಮತ್ತು ಸ್ಥಳೀಯ ಪುರಸಭೆಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು ರಾತ್ರಿ 9:30 ರ ಸುಮಾರಿಗೆ ಎರಡು ಗುಂಪುಗಳ ನಡುವೆ ವಿಷಯ ಇತ್ಯರ್ಥಗೊಂಡಿತು ಮತ್ತು ನಂತರ ಎರಡೂ ಗುಂಪಿನ ಐದು ಸದಸ್ಯರ ಸಮ್ಮುಖದಲ್ಲಿ ಸಂಧಾನ ನಡೆಯಿತು.

“ಒಪ್ಪಂದ ಪ್ರಕಾರ ಗೇಟ್‌ಗಳನ್ನು ತಕ್ಷಣವೇ ಮುಚ್ಚುವಂತೆ ಹೇಳಿದ್ದು, ಜನರ ಗುಂಪನ್ನು ಚದುರಿಸಲಾಗಿತ್ತು” ಎಂದು ಸಿಂಗ್ ಹೇಳಿದರು. ವ್ಯಾಪಾರಿಯೋಂಕಾ ಮೊಹಲ್ಲಾದಲ್ಲಿ 10 ರಿಂದ 15 ಜನರ ಗುಂಪು ಇದ್ದಕ್ಕಿದ್ದಂತೆ ಕಲ್ಲು ತೂರಾಟ ಆರಂಭಿಸಿದಾಗ ಉದ್ವಿಗ್ನತೆ ಉಂಟಾಯಿತು ಎಂದಿದ್ದಾರೆ ಅವರು.ಈ ಘಟನೆಯಲ್ಲಿ ಚೌಪಸ್ನಿ ಹೌಸಿಂಗ್ ಬೋರ್ಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಿತಿನ್ ದವೆ ಮತ್ತು ಕಾನ್‌ಸ್ಟೆಬಲ್ ಶೈತಾನ್ ಸಿಂಗ್ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ದವೆ ಅವರ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಬೆಳಗ್ಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ” ಎಂದು ಆಯುಕ್ತರು ತಿಳಿಸಿದ್ದಾರೆ.ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ), (ಪಶ್ಚಿಮ), ಶರದ್ ಚೌಧರಿ, ಕಲ್ಲು ತೂರಾಟದ ಘಟನೆಯ ನಂತರ, ಉದ್ರಿಕ್ತ ಗುಂಪು ಸ್ಥಳೀಯ ಅಂಗಡಿಗಳು, ಮನೆಗಳು ಮತ್ತು ಹಲವಾರು ಕಾರುಗಳನ್ನು ಧ್ವಂಸಗೊಳಿಸಿದೆ ಎಂದು ಹೇಳಿದರು. “ಒಂದು ಗುಂಪಿಗೆ ಸೇರಿದ ಪೊರಕೆ ಅಂಗಡಿಗೆ ಬೆಂಕಿ ಹಚ್ಚಲಾಯಿತು. ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು ಆದರೆ ಇದು ಹತ್ತಿರದ ಮನೆಯ ಗೇಟ್‌ಗೆ ಹಾನಿಯಾಗಿದೆ ಎಂದು ಡಿಸಿಪಿ ಚೌಧರಿ ಹೇಳಿದ್ದಾರೆ.