ಬೆಳಗಾವಿ ರಾಜಕಾರಣದಲ್ಲಿ (Belagum politics) ಭುಗಿಲೆದ್ದಿರುವ ಅಸಮಾಧಾನ ಸದ್ಯಕ್ಕೆ ತಣ್ಣಗಾಗೋ ಲಕ್ಷ್ಮಣ ಗೋಚರವಾಗುತ್ತಿಲ್ಲ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ನಡುವಿನ ತಿಕ್ಕಾಟ ಇನ್ನಷ್ಟು ಹೆಚ್ಚಾದಂತಿದೆ.
ಇಂದು (ಜ.19) ಬೆಳಗಾವಿಯ ಸತೀಶ್ ಜಾರಕಿಹೊಳಿ ವಿರೋಧಿ ಬಣದ ಮಾಜಿ ಶಾಸಕನ ಮನೆಗೆ ಡಿಕೆಶಿ ಭೇಟಿಕೊಟ್ಟಿದ್ದಾರೆ. ಮಾಜಿ ಶಾಸಕ ಫಿರೋಜ್ ಸೇಠ್ (Firoz sait) ಮನೆಗೆ ಡಿಸಿಎಂ ಡಿಕೆಶಿ ಭೇಟಿ ನೀಡಿದ್ದಾರೆ.
ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಫಿರೋಜ್ ಸೇಠ್ ಮನೆಗೆ ಡಿಕೆಶಿ ಭೇಟಿ ಕೊಟ್ಟಿದ್ದಾರೆ. ಜ.21ರಂದು ನಡೆಯುವ ಜೈಗಾಂಧಿ, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮ ಆಹ್ವಾನ ನೆಪದಲ್ಲಿ ಭೇಟಿ ಡಿಕೆಶಿ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಟಿಕೇಟ್ ಕೈತಪ್ಪಿದ ನಂತ್ರ ಪಕ್ಷದ ಚಟುವಟಿಕೆಯಿಂದ ಫಿರೋಜ್ ಸೇಠ್ ದೂರ ಉಳಿದಿದ್ದರು. ಟಿಕೇಟ್ ಕೈ ತಪ್ಪಿದ್ದರಿಂದ ಸಚಿವ ಸತೀಶ್ ಜಾರಕಿಹೋಳಿ ವಿರುದ್ಧ ಅಸಮಾಧಾನಗೊಂಡಿದ್ದ ಶೇಠ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು.
ಇಂದು ಇವರ ನಿವಾಸಕ್ಕೆ ಭೇಟಿ ಕೊಟ್ಟ ಡಿಕೆಶಿ, ಸುಮಾರು 15ನಿಮಿಷಗಳ ಕಾಲ ಫಿರೋಜ್ ಶೇಠ್ ಜೊತೆ ಮಾತುಕತೆ ನಡೆಸಿದ್ದಾರೆ.ಆ ಮೂಲಕ ಬೆಳಗಾವಿಯಲ್ಲಿ ಸತೀಶ್ ಜಾರಕಿಹೋಳಿ ವಿರೋಧ ಬಣ ಒಗ್ಗೂಡಿಸಲು ಡಿಕೆಶಿ ಮುಂದಾದ್ರಾ ಎಂಬ ಅನುಮಾನಕ್ಕೆ ಈ ಬೆಳವಣಿಗೆ ಕಾರಣವಾಗಿದೆ.