ಇಂದು 2025-26ನೇ ಸಾಲಿನ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ (Cm Siddaramaiah) ಮಂಡಿಸಲುನೀಗಾಗಲೇ ಆರಂಭಿಸಿದ್ದಾರೆ. ಈ ಬಜೆಟ್ ನ ಗಾತ್ರ 4.09 ಲಕ್ಷ ಕೋಟಿಯಾಗಿರಲಿದೆ (4.09 lakh crores)
ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಸಂಗ್ರಹಕ್ಕೆ (Taxation) ಹೆಚ್ಚು ಆಧ್ಯತೆ ನೀಡಿದೆ. 2025-26 ರಲ್ಲಿ ಗಣಿ, ಭೂ ಇಲಾಖೆಯಿಂದ 9000 ಕೋಟಿ ತೆರಿಗೇಯತರ ರಾಜಸ್ವ ಗುರಿ ಹೊಂದಲಾಗಿದೆ ಎಂದು ಸಿಎಂಹೇಳಿದ್ದಾರೆ.

ಮೊದಲಿಗೆ ಆರಂಭದಲ್ಲಿ ನಿಂತುಕೊಂಡೇ ಬಜೆಟ್ ಪ್ರತಿ ಓದಿದ ಸಿಎಂ, ಕೆಲ ಹೊತ್ತಿನ ನಂತರ ಸ್ಪೀಕರ್ ಗಮನಕ್ಕೆ ತಂದು ಆ ನಂತರ ಕುಳಿತುಕೊಂಡು ಬಜೆಟ್ ಓದಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಇನ್ನು ಬಜೆಟ್ ನಲ್ಲಿ ಸುರಂಗ ರಸ್ತೆ ಮಾರ್ಗ (Tunel way) ಪ್ರಸ್ತಾಪವಾಗಿದೆ. ೪೦ ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಉತ್ತರ- ದಕ್ಷಿಣ ಮತ್ತು ಪೂರ್ವ- ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್ ಗಳನ್ನ ಕೈಗೊಳ್ಳಲು ಅನುಕೂಲವಾಗುವಂತೆ ೧೯ ಸಾವಿರ ಕೋಟಿ ಮೀಸಲಿಡಲಾಗಿದೆ.