ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ (Cabinet re shuffle)ಚರ್ಚೆ ಜೋರಾಗಿದ್ದು ಈ ವಿಚಾರವಾಗಿ ಕೆಲವು ಸಚಿವರಿಗೆ ಟೆನ್ಷನ್ ಹೆಚ್ಚಾಗಿದೆ. ಹೌದು ಸಿಎಂ ಸಿದ್ದರಾಮಯ್ಯ (Cm siddaramaiah) ಆಪ್ತ ಸಚಿವರಿಗೆ ಈಗ ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕ ಶುರುವಾಗಿದೆ.

ಸಚಿವ ಹೆಚ್.ಸಿ ಮಹಾದೇವಪ್ಪ (HC Mahadevappa) ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನ (Eshwaran khandre) ಸಂಪುಟದಿಂದ ಕೈ ಬಿಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ, ನಮ್ಮ ಪುತ್ರರಿಗೆ ಟಿಕೆಟ್ ನೀಡಿ.ಅವರನ್ನ ನಾವು ಗೆಲ್ಲಿಸುತ್ತೇವೆ.ಆ ನಂತರ ನಾವು ನಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಈ ಇಬ್ಬರು ಸಚಿವರು ಹೈಕಮ್ಯಾಂಡ್ ಬಳಿ ಡಿಮ್ಯಾಂಡ್ ಮಾಡಿದ್ದರು.

ಅದರಂತೆ ಮಹದೇವಪ್ಪ ಪುತ್ರ ಸುನೀಲ್ ಭೋಸ್ ಮತ್ತು ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಗೆಲುವು ಸಾಧಿಸಿ ಸಂಸತ್ ಪ್ರವೇಶ ಮಾಡಿದ್ದಾರೆ.
ಹೀಗಾಗಿ ಇದೀಗ ಹೈಕಮಾಂಡ್ ಈ ಇಬ್ಬರು ಸಚಿವರನ್ನ ಕೈ ಬಿಡಲು ಮುಂದಾಗಿದ್ದು ಸಚಿವರಿಗೆ ಟೆನ್ಷನ್ ಶುರುವಾಗಿದೆ.ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ ಜೊತೆಯಲ್ಲೇ ಮಹದೇವಪ್ಪ ಮತ್ತು ಖಂಡ್ರೆ ಸದ್ಯ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.












