ಸಂಪುಟ ವಿಸ್ತರಣೆ, ಸಂಪುಟ ಪುನರಚನೆ ಹಾಗೂ ಮುಖ್ಯಮಂತ್ರಿ ಬದಲಾವಣೆಯ ಸರ್ಕಸ್ಸಿನಲ್ಲಿ ರಾಜ್ಯದ ಆಡಳಿತ ದಿಕ್ಕಟ್ಟು ಹೋಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಸಾಮಾಜಿಕ ಜಾಲತಾಣದ ತನ್ನ ಅಧಿಕೃತ ಖಾತೆಯ ಮೂಲಕ ಬಿಜೆಪಿ ಪಕ್ಷದ ಪ್ರಹಸನದ ಕುರಿತು ಟೀಕಿಸಿದ ಸಿದ್ದರಾಮಯ್ಯ, ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಮುಖ್ಯಮಂತ್ರಿ ಬದಲಾವಣೆಯೋ ಇವೆಲ್ಲ ನಿಮ್ಮ ಪಕ್ಷದ ಹಣೆಬರಹ. ಈ ಸರ್ಕಸ್ ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ. ಶೀಘ್ರವಾಗಿ ಏನಾದರೂ ನಿರ್ಧಾರ ಕೈಗೊಂಡು ಈಗಿನ ಬಿಕ್ಕಟ್ಟು ಕೊನೆಗೊಳಿಸಿ, ಆಡಳಿತದ ಕಡೆ ಗಮನಕೊಟ್ಟು ರಾಜ್ಯವನ್ನು ಉಳಿಸಿ ಎಂದು ಆಗ್ರಹಿಸಿದ್ದಾರೆ.
ಸಂಪುಟ ವಿಸ್ತರಣೆಯೋ, ಪುನಾರಚನೆಯೋ, @CMofKarnataka ಬದಲಾವಣೆಯೋ
-ಇವೆಲ್ಲ ನಿಮ್ಮ ಪಕ್ಷದ ಹಣೆಬರಹ.ಈ ಸರ್ಕಸ್ ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ.
ಶೀಘ್ರವಾಗಿ ಏನಾದರೂ ನಿರ್ಧಾರ ಕೈಗೊಂಡು ಈಗಿನ ಬಿಕ್ಕಟ್ಟು ಕೊನೆಗೊಳಿಸಿ, ಆಡಳಿತದ ಕಡೆ ಗಮನಕೊಟ್ಟು
ರಾಜ್ಯವನ್ನು ಉಳಿಸಿ.@BJP4Karnataka
1/2— Siddaramaiah (@siddaramaiah) November 20, 2020
ಹಿಂದೆಲ್ಲ ಬಿಜೆಪಿ ನಾಯಕರು, ‘ಹೈಕಮಾಂಡ್ ಸಂಸ್ಕೃತಿ’ʼಮೂಲನಿವಾಸಿಗಳು-ವಲಸೆಗಾರರು’ ‘ಕುಟುಂಬ ರಾಜಕಾರಣ’ ಎಂಬೀತ್ಯಾದಿ ಪದಗಳನ್ನು ಜೋಡಿಸಿ ಹಗಲು ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು.ಈಗ ಅದೇ ಆರೋಪಗಳನ್ನು ಪರಸ್ಪರ ಮಾಡ್ಕೊಂಡು ಬತ್ತಲಾಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದೆಲ್ಲ @BJP4Karnataka ನಾಯಕರು,
‘ಹೈಕಮಾಂಡ್ ಸಂಸ್ಕೃತಿ’ ಮೂಲನಿವಾಸಿಗಳು-ವಲಸೆಗಾರರು’
‘ಕುಟುಂಬ ರಾಜಕಾರಣ’ ಎಂಬೀತ್ಯಾದಿ ಪದಗಳನ್ನು ಜೋಡಿಸಿ ಹಗಲು ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು.ಈಗ ಅದೇ ಆರೋಪಗಳನ್ನು ಪರಸ್ಪರ ಮಾಡ್ಕೊಂಡು ಬತ್ತಲಾಗುತ್ತಿದ್ದಾರೆ.
2/2— Siddaramaiah (@siddaramaiah) November 20, 2020