ಕೊಡಗು: ಹಲವು ವರ್ಷಗಳ ಬಳಿಕ ಭಾಗಮಂಡಲ ಮೇಲ್ಸೇತ್ವುವೆ ಉದ್ಘಾಟನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ. ಭಾಗಮಂಡಲ ಮೇಲ್ಸೇತುವೆ ಉದ್ಘಾಟಿಸಿದ್ದಾರೆ ನಾಡ ದೊರೆ ಸಿಎಂ ಸಿದ್ದರಾಮಯ್ಯ. ಬರೋಬ್ಬರಿ 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಭಾಗಮಂಡಲ ಮೆಲ್ಸೆತುವೆಯನ್ನು ಈ ಹಿಂದಿನ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಸಮಯಲ್ಲಿ ಮೇಲ್ಸೇತುವೆಗೆ ಅನುಮೋದನೆ ಸಿಕ್ಕಿತ್ತು.
ಮಳೆಗಾಲದಲ್ಲಿ ರಸ್ತೆ ಬಂದ್ ಆಗಿ ಸಂಪರ್ಕ ಕಳೆದುಕೊಳ್ಳುತ್ತಿದ್ದ ಗ್ರಾಮದ ಜನತೆಗೆ ಮೆಲ್ಸೇತುವೆ ಆಗಿರೋದು ಜನತೆಯಲ್ಲಿ ಹರ್ಷ ಮೂಡಿಸಿದೆ. ಕೊಡಗು ಜಿಲ್ಲೆ ಭಾಗಮಂಡಲದಲ್ಲಿ ನಿರ್ಮಾಣವಾಗಿರೋ ಮೆಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಭಾಗಮಂಡಲ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಮೈಸೂರಿನಿಂದ ಕೊಡಗಿಗೆ ಬಂದು ಸೇತುವೆ ಉದ್ಘಾಟನೆ ಮಾಡಿದ್ದೇನೆ. ಪೊನ್ನಣ್ಣ ಒತ್ತಾಯದ ಮೇರೆಗೆ ಇಂದು ಕೊಡಗಿಗೆ ಆಗಮಿಸಿದೆ ಎಂದಿದ್ದಾರೆ.
ಮೇಲ್ಸೇತುವೆಯನ್ನ ಬಹಳ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ತ್ರೀವೆಣಿ ಸಂಗಮ ಭರ್ತಿಯಾಗಿ ರಸ್ತೆಗಳು ಬಂದ್ ಆಗಿ ಜನರಿಗೆ ಸಮಸ್ಯೆ ಆಗುತ್ತಿತ್ತು. ಈ ಸೇತುವೆಗೆ ಪ್ರಸ್ತಾವನೆ ಬಂದಾಗಲು ನಾನು ಮುಖ್ಯಮಂತ್ರಿಯಾಗಿದ್ದೆ. ಈಗ ಉದ್ಘಾಟನೆ ವೇಳೆಯಲ್ಲೂ ನಾನು ಸಿಎಂ ಆಗಿದ್ದೇನೆ. ಕೊಡಗು ಜಿಲ್ಲೆಯಲ್ಲಿ ಎರಡು ಕಾಂಗ್ರೆಸ್ ಗೆಲ್ಲಿಸಿರೋದಕ್ಕೆ ಕೊಡಗಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ ಸಿದ್ದರಾಮಯ್ಯ. ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ ನಮ್ಮ ಮೇಲೆ ಇರಲಿ. ಕಾಂಗ್ರೆಸ್ ನುಡಿದಂತೆ ನಡೆದ ಸರಕಾರ ಎಂದಿದ್ದಾರೆ.
165 ಭರವಸೆಗಳಲ್ಲಿ 158 ಭರವಸೆ ಕಾಂಗ್ರೆಸ್ ಈಡೆರಿಸಿದೆ. ಬಿಜೆಪಿ ನೂರಾರು ಭರವಸೆಗಳನ್ನ ಕೊಟ್ರು 10 ಪರ್ಸೆಂಟ್ ಈಡೇರಿಸಿಲ್ಲ. ಯಾವ ಸರ್ಕಾರ ನುಡಿದಂತೆ ನಡೆಯುತ್ತೆ ಅನ್ನೋದನ್ನ ಜನತೆಯೇ ತಿಳಿದುಕೊಳ್ಳಬೇಕು. 5 ಗ್ಯಾರಂಟಿ ಯೋಜನೆಯನ್ನ 1 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಈಡೇರಿಸಿರೋದು, ಸಮಾಜದಲ್ಲಿ ಬಡವರಿಗೆ ಆರ್ಥಿಕವಾಗಿ ಸಹಕರ ನೀಡಿರೋದು ಕಾಂಗ್ರೆಸ್ ಸರ್ಕಾರ. ಮನುಷ್ಯ ಮನುಷ್ಯರನ್ನ ಪ್ರಿತಿಸಬೇಕು ದ್ವೇಶಿಸಬಾರದು. ಎಲ್ಲರಲ್ಲೂ ಭಾತೃತ್ವ ಬೆಳೆಸಬೇಕು ಜಾತಿ, ಧರ್ಮ, ಒಡೆಯುವ ಕೆಲಸ ಮಾಡಬಾರದು. ಮನುಷ್ಯ ಹುಟ್ಟುತ್ತ ವಿಶ್ವಮಾನವರಾಗುತ್ತಾರೆ, ಸಮಾಜದ ಕೆಡುಕಿನಿಂದ ಅಲ್ಪಮಾನವರಾಗುತ್ತಾರೆ. ಸಮಾಜ ಒಡೆಯುವ ಕೆಲಸ ಮಾಡಬಾರದು ಒಂದು ಮಾಡುವ ಕೆಲಸ ಮಾಡಬೇಕು. ಭಾರತವನ್ನ ಹಿಂದುಗಳ ದೇಶ ಮಾಡಲು ಸಾಧ್ಯವಿಲ್ಲ, ಎಲ್ಲರೂ ಸಮಾನರು ಎಂದಿದ್ದಾರೆ.
ಕೊಡಗಿನ ಇಬ್ಬರು ಶಾಸಕರು ಕೊಡಗಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದೇನೆ. ಕೊಡಗಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ. ಸಿ ಲ್ಯಾಂಡ್ ವಿಚಾರದಲ್ಲೂ ಒಂದು ಸಮಿತಿ ಮಾಡಿ ವರದಿ ನೀಡಲು ಸೂಚಿಸಲಾಗುವುದು. ಕೊಡಗಿನ ರೈತರು ಭಯ ಪಡುವ ಅಗತ್ಯ ಇಲ್ಲ. ಮೈಕ್ರೋ ಫೈನಾನ್ಸ್‌ಗೆ ಯಾರು ಭಯ ಪಡುವ ಅಗತ್ಯ ಇಲ್ಲ. ಅದಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ಬದ್ದವಾಗಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.