• Home
  • About Us
  • ಕರ್ನಾಟಕ
Thursday, October 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಡಿಜಿಟಲ್ ಮಾಧ್ಯಮಕ್ಕೆ ಶಕ್ತಿ ತುಂಬಿದ ಸಿಎಂ ಸಿದ್ದರಾಮಯ್ಯ..

ಪ್ರತಿಧ್ವನಿ by ಪ್ರತಿಧ್ವನಿ
April 29, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಡಿಯೋ, ವಿಶೇಷ
0
Share on WhatsAppShare on FacebookShare on Telegram

ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರಿಗೆ KSDMF ನಿಂದ ಅಭಿನಂದನೆ. ಶೀಘ್ರದಲ್ಲೇ ರಾಜ್ಯಮಟ್ಟದ ಡಿಜಿಟಲ್ ಮಾಧ್ಯಮ ಸಮ್ಮೇಳನ..

ADVERTISEMENT

ಡಿಜಿಟಲ್ ಮಾಧ್ಯಮಕ್ಕೆ ಜಾಹಿರಾತು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜಾಹೀರಾತು ನೀತಿ-2024 ಜಾರಿಗೊಳಿಸಿರುವುದು ನಮಗೆ ಶಕ್ತಿತುಂಬಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಬೆಂಗಳೂರಿನಲ್ಲಿ ವಿಶೇಷವಾದ ಡಿಜಿಟಲ್ ಮಾಧ್ಯಮ ಸಮೇಳನವನ್ನು ಹಮ್ಮಿಕೊಂಡು ರಾಷ್ಟ್ರಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ಆಹ್ವಾನಿಸುವ ಚಿಂತನೆಯಿದೆ ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF) ರಾಜ್ಯಾಧ್ಯಕ್ಷರಾದ ಬಿ. ಸಮೀವುಲ್ಲಾ(B Samiulla) ಹೇಳಿದ್ದಾರೆ.

ಕೆಎಸ್ ಡಿಎಂಎಫ್ ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ (K V Prabhakar) ಹಾಗೂ ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ (Hemanth Nimbalkar) ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಡಿಜಿಟಲ್ ಮಾಧ್ಯಮ ನೀತಿಯಿಂದಾಗಿ ಬೇರೆ ಪತ್ರಿಕೆ, ಟಿವಿಯಂತೆ ಡಿಜಿಟಲ್ ಮಾಧ್ಯಮವು ಪತ್ರಿಕೋದ್ಯಮದ ಭಾಗವೆಂದು ಅಧಿಕೃತವಾಗಿದೆ. ದೇಶದಲ್ಲಿ ಡಿಜಿಟಲ್ ಪಾಲಿಸಿ ಕೆಲವು ರಾಜ್ಯಗಳಲ್ಲಿ ಇದೆಯಾದರೂ ನಮ್ಮ ರಾಜ್ಯದಲ್ಲಿ ಈ ನೀತಿ ಸಮಗ್ರವಾಗಿದ್ದು, ವೃತ್ತಿಪರವಾಗಿ ರಚನೆಯಾಗಿದೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಡಿಜಿಟಲ್ ನೀತಿಯನ್ನು ಜಾರಿಗೆ ತರುವಲ್ಲಿ ಮಹತ್ವದ ಕಾರ್ಯವನ್ನು ನಿರ್ವಹಿಸಿದ್ದಾರೆ. ಡಿಜಿಟಲ್ ಮಾಧ್ಯಮವು ಪರ್ಯಾಯ ಮಾಧ್ಯಮವಾಗಿ ನೈಜ ಪತ್ರಿಕೋದ್ಯಮ, ನಿಷ್ಪಕ್ಷಪಾತವಾಗಿ, ಮಾನವತೆಯಿಂದಾಗಿ ಪರ್ಯಾಯ ಪತ್ರಿಕೋದ್ಯಮವು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರು.

ಈ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF) ತನ್ನ ಸಂಘಟಿತ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಡಿಜಿಟಲ್ ಮಾಧ್ಯಮ-2024 (Digital Media-2024) ಜಾರಿಗೆ ತರಲಾಗಿದೆ. ಈ ನೀತಿಯಲ್ಲಿ ಪತ್ರಕರ್ತರಿಗೆ ಪೂರಕವಾಗಿ ಕೆಲವೊಂದು ಅಗತ್ಯ ಬದಲಾವಣೆ, ತಿದ್ದುಪಡಿಯಾಗಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಕೆಎಸ್ ಡಿಎಂಎಫ್ (KSDMF) ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಥೆಯ ಆಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಬಿ.ಸಮೀವುಲ್ಲಾ ಜೊತೆಗಿನ ವೃತ್ತಿ ಬಾಂಧವ್ಯವನ್ನು ಸ್ಮರಿಸಿದರು. ರಾಜ್ಯದಲ್ಲಿ ಡಿಜಿಟಲ್ ನೀತಿ ತರುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೊತೆ ಡಿಜಿಟಲ್ ಮಾಧ್ಯಮದ ಅಗತ್ಯತೆ ಬಗ್ಗೆ ತಿಳಿ ಹೇಳಿ ಆ ಬಗ್ಗೆ ಚರ್ಚೆ ನಡೆಸಿದ್ದೆ. ಕೃತಕ ಬುದ್ದಿಮತ್ತೆಯು ಡಿಜಿಟಲ್ ಮಾಧ್ಯಮಕ್ಕೂ ದಾಂಗುಡಿಯಿಟ್ಟಿದೆ ಎಂದರು.

ಸಣ್ಣ ಪತ್ರಿಕೆಯಂತೆ ಡಿಜಿಟಲ್ ಮಾಧ್ಯಮವನ್ನು ಕೈಹಿಡಿಯುವ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೂ ಜಾಹೀರಾತು ನೀಡಲು ಹಣಕಾಸು ವೆಚ್ಚ, ಡಿಜಿಟಲ್ ಮೀಡಿಯಾ ನೀತಿಯ ನೀಲನಕ್ಷೆ ಬಗ್ಗೆಯೂ ತಿಳಿಸಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು. ಹೀಗಾಗಿ ಡಿಜಿಟಲ್ ಜಾಹೀರಾತು ನೀತಿ ತರಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಡಿಜಿಟಲ್ ನೀತಿಯನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದೆ ಬದಲಾವಣೆ ಮಾಡಲಾಗುವುದು ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತ್ರಕರ್ತರ ಅಭಿವೃದ್ಧಿಗಾಗಿ ಆರೋಗ್ಯ, ಗ್ರಾಮೀಣ ಪತ್ರಕರ್ತರಿಗಾಗಿ ಬಸ್ ಪಾಸ್, ದಿನಪತ್ರಿಕೆ ಹಂಚುವವರಿಗೂ ಅನುಕೂಲ‌ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಾಧ್ಯಮ ಮಾನ್ಯತೆಯಿರುವವರಿಗೆ ಆರೋಗ್ಯ ಸಂಜೀವಿನಿಯಡಿ ಕಾರ್ಡ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಡಿಜಿಟಲ್ ಮಾಧ್ಯಮದವರಿಗೂ ವಾರ್ತಾ ಇಲಾಖೆಯಿಂದ ಐಡಿ ಕಾರ್ಡ್ ಅಥವಾ ಮಾನ್ಯತಾ ಕಾರ್ಡ್ ನೀಡಲು ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಜೊತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ (Press Club President Sridhar) ಮಾತನಾಡಿ, ಡಿಜಿಟಲ್ ಮೀಡಿಯಾ ಫೋರಂ ಈಗಿನ ಡಿಜಿಟಲ್ ಮಾಧ್ಯಮಕ್ಕೆ ಅತ್ಯಗತ್ಯವಾಗಿತ್ತು. ವೃತ್ತಿಪರ ಡಿಜಿಟಲ್ ಪತ್ರಕರ್ತರಿಗೆ ಈ ಕೆಎಸ್ ಡಿಎಂಎಫ್ ಫೋರಂ (KSDMF Forum) ಹೆಚ್ಚಿನ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಎಸ್ ಡಿಎಂಎಫ್ ಉಪಾಧ್ಯಕ್ಷರಾದ ಸುನಿಲ್ ಶಿರಸಿಂಗಿ(Sunil Shirasangi), ಕಾರ್ಯದರ್ಶಿ ಕೆ.ಎಂ ಶಿವಕುಮಾರ್(KM Shivakumar), ಖಜಾಂಚಿ ಸನತ್ ಕುಮಾರ್ ರೈ(Sanath Kumar Rai), ಜಂಟಿ ಕಾರ್ಯದರ್ಶಿಗಳಾದ ಮಾಲತೇಶ್ ಅರಸ್(Malatesh Urs), ರಜನಿ (Rajani) ಹಾಗೂ ಕೆಎಸ್ ಡಿಎಂಎಫ್ ಸದಸ್ಯರು ಹಿರಿಯ ಪತ್ರಕರ್ತರಾದ ಹಮೀದ್ ಪಾಳ್ಯ(Hameed Palya), ಪ್ರತಿಧ್ವನಿ ಶಿವಕುಮಾರ್ (Shivakumar S), ವಿಜಯ್ ಭರಮಸಾಗರ(Vijay Bharamasagara), ಮಂಜು ಬಾಣಗೆರೆ(Manju Bhanagere), ರವೀಂದ್ರ ಜೋಶಿ(Raveendra Joshi), ಮುತ್ತುರಾಜ್(Mutturaj), ರಮೇಶ್(Ramesh) , ದರ್ಶನ್ (Darshan), ಕರ್ನಾಟಕ ಟಿವಿ ಶಿವಕುಮಾರ್‌ ಬೆಸಗನಹಳ್ಳಿ (Shivakumar) ಮತ್ತು ಅನೇಕರು ಭಾಗವಹಿಸಿದ್ದರು.

ಇಲಾಖೆಯಿಂದ ಐಡಿ ಕಾರ್ಡ್..
ಮಾಧ್ಯಮ ಅಕಾಡೆಮಿಯಲ್ಲಿಯೂ ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೂ ಪ್ರಶಸ್ತಿಗೆ ಪರಿಗಣಿಸಲು ಅಕಾಡೆಮಿ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುತ್ತೇನೆ. ಮತ್ತು ಡಿಜಿಟಲ್ ಮಾಧ್ಯಮದವರಿಗೂ ವಾರ್ತಾ ಇಲಾಖೆಯಿಂದ ಮಾಧ್ಯಮ ಮಾನ್ಯತೆಯ ಕಾರ್ಡ್ ಅಥವಾ ಐಡಿ ಕಾರ್ಡ್ ನೀಡಲು ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಜೊತೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು.

ರಾಜ್ಯಮಟ್ಟದ ಡಿಜಿಟಲ್ ಮಾಧ್ಯಮ ಸಮ್ಮೇಳನ..

ಸದ್ಯದಲ್ಲೇ ಕೆಎಸ್ ಡಿಎಂಎಫ್ ಫೋರಮ್ ವತಿಯಿಂದ ಬೆಂಗಳೂರಿನಲ್ಲಿ ವಿಶೇಷವಾದ ಡಿಜಿಟಲ್ ಮಾಧ್ಯಮ ಸಮೇಳನವನ್ನು ಹಮ್ಮಿಕೊಳ್ಳಲಾಗುವುದು. ಈ ಸಮ್ಮೇಳನದಲ್ಲಿ ರಾಷ್ಟ್ರಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ಆಹ್ವಾನಿಸುವ ಚಿಂತನೆಯಿದೆ ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF) ರಾಜ್ಯಾಧ್ಯಕ್ಷರಾದ ಬಿ. ಸಮೀವುಲ್ಲಾ ತಿಳಿಸಿದರು.

Tags: CM SiddaramaiahDigital MediaHemanth NimbalkarK V PrabhakarKarnataka TVKSDMFPratidhvaniRajaniSanath KumarsiddaramaiahSridharsunil
Previous Post

ಬೆಂಗಳೂರಿನಲ್ಲಿ ಹಿಟ್-3‌ ಸಿನಿಮಾ ಪ್ರಚಾರ ಮಾಡಿದ ನಾನಿ-ಶ್ರೀನಿಧಿ ಶೆಟ್ಟಿ..ಮೇ1ಕ್ಕೆ ಸಿನಿಮಾ ರಿಲೀಸ್!‌

Next Post

ಇಂದು ಪ್ರಧಾನಿ ನಿವಾಸದಲ್ಲಿ ಸರಣಿ ಸಭೆ – ಪಾಕಿಸ್ತಾನದ ವಿರುದ್ಧ ಅಂತಿಮ ನಿರ್ಣಯ ಕೈಗೊಳ್ಳಲಿರುವ ಮೋದಿ..? 

Related Posts

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ಧತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ....

Read moreDetails
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

October 23, 2025
Next Post
ಇಂದು ಪ್ರಧಾನಿ ನಿವಾಸದಲ್ಲಿ ಸರಣಿ ಸಭೆ – ಪಾಕಿಸ್ತಾನದ ವಿರುದ್ಧ ಅಂತಿಮ ನಿರ್ಣಯ ಕೈಗೊಳ್ಳಲಿರುವ ಮೋದಿ..? 

ಇಂದು ಪ್ರಧಾನಿ ನಿವಾಸದಲ್ಲಿ ಸರಣಿ ಸಭೆ - ಪಾಕಿಸ್ತಾನದ ವಿರುದ್ಧ ಅಂತಿಮ ನಿರ್ಣಯ ಕೈಗೊಳ್ಳಲಿರುವ ಮೋದಿ..? 

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
Top Story

Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada