ತೆರೆದ ವಾಹನದಲ್ಲಿ ಸಿಎಂ (cm) ಪ್ರಚಾರ ಮಾಡುವ ಚಾಮರಾಜಪೇಟೆ (chamarajapete) ಸಮೀಪ ಇದ್ದಕ್ಕಿದ್ದ ಹಾಗೇ ವಾಹನದ ಮೇಲೇರಿದ ವ್ಯಕ್ತಿ ಸಿಎಂ ಗೆ ಹಾರ ಹಾಕಿ ಜೈಕಾರ ಕೂಗಿದ್ದ.. ಇದ್ರಲ್ಲೇನಿದೆ ಆಶ್ವರ್ಯ ಪಡೋದು ಅನ್ನೋಬೇಡಿ. ಈ ವ್ಯಕ್ತಿ ಸೊಂಟದಲ್ಲಿ ಲೋಡೆಡ್ ಗನ್ (Loaded gun) ಇತ್ತು. ಅದು ನೂರಾರು ಜನರ ಮುಂದೆ ರಾರಾಜಿಸುತ್ತಿತ್ತು. ವಿಐಪಿ ಮೂಮೆಂಟ್ (VIP movement) ನಲ್ಲಿ ಗನೆ ತರುವ ಹಾಗಿಲ್ಲ. ಆದರೆ ಈತ ಗನ್ (gun) ತಂದು ಮುಖ್ಯಮಂತ್ರಗಳಿಗೆ ಅಷ್ಟು ಸಮೀಪದಲ್ಲಿ ಹೋಗಿರೋದು ಚರ್ಚೆಗೆ ಕಾರಣವಾಗಿದೆ.
ಗನ್ ಇದ್ದ ವ್ಯಕ್ತಿ ಮುಖ್ಯಮಂತ್ರಿಗಳ ಅಷ್ಟೊಂದು ಸಮೀಪಕ್ಕೆ ಹೋಗಿದ್ದಾನೆ ಅಂದ್ರೆ ಇದು ಭದ್ರತಾ ವೈಫಲ್ಯವೇ (seurity fallure).. ನಿನ್ನೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚಿಕ್ಕಪೇಟೆಯಲ್ಲಿ ಸೌಮ್ಯ ರೆಡ್ಡಿ (sowmya reddy) ಪರ ಸಿದ್ದರಾಮಯ್ಯ ಭರ್ಜರಿ ಪ್ರಚಾರದಲ್ಲಿ ತೊಡಗಿದ್ರು. ಅದೇ ಗಾಡಿಯಲ್ಲಿ ಮುಖ್ಯಮಂತ್ರಿಗಳ ಗನ್ ಮ್ಯಾನ್ (gun man) ಕೂಡ ಇದ್ರು. ಗಾಡಿಯ ಕೆಳಗೆ ಪೊಲೀಸರೂ (polive officers) ಇದ್ರು. ಹೀಗಿದ್ರೂ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜ್ (RV deveraj) ಬೆಂಬಲಿಗ ಎನ್ನಲಾದ ರಿಯಾಜ್ ಅನ್ನೋ ವ್ಯಕ್ತಿ ಸೊಂಟದಲ್ಲಿ ಗನ್ ಇಟ್ಟುಕೊಂಡೇ ಏಕಾಏಕಿ ಗಾಡಿ ಹತ್ತಿ ಸಿಎಂಗೆ ಹಾರ ಹಾಕಿದ್ದಾನೆ. ಇದು ರಾಜ್ಯದ ಚುನಾವಣಾ ಪ್ರಚಾರದಲ್ಲಿರೋ ನಾಯಕರ ಆತಂಕಕ್ಕೆ ಕಾರಣವಾಗಿದೆ..
ಗನ್ ಇಟ್ಟಕೊಂಡು ಸಿಎಂಗೆ ಹಾರ ಹಾಕಿದ್ದ ರಿಯಾಜ್‌ನ (riyaaz) ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಸಿದ್ದಾಪುರ ಠಾಣೆಗೆ ದೌಡಾಯಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮತ್ತು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ (DCP Lokesh baramappa) ಖುದ್ದು ರಿಯಾಜ್ ನನ್ನ ವಿಚಾರಣೆ ಮಾಡಿದ್ದಾರೆ.. ಜೊತೆಗೆ ರಿಯಾಜ್ ಗನ್ ಲೈಸೆನ್ಸ್ ಪಡೆದಿದ್ದೇಕೆ? ಚುನಾವಣೆ ವೇಳೆ ಪೊಲೀಸ್ ಸ್ಟೇಷನ್‌ಗೆ ಯಾಕೆ ಒಪ್ಪಿಸಿರಲಿಲ್ಲ ಎಂಬುದರ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು, ಗನ್ ಮ್ಯಾನ್ ಮುಂದೆಯೇ ಗನ್ ಇಡ್ಕೊಂಡಿದ್ದಂತಹ ವ್ಯಕ್ತಿ ಮುಖ್ಯಮಂತ್ರಿಗಳ ಸಮೀಪಕ್ಕೆ ಹೋಗ್ತಾನೆ. ಅವಿಗೆ ಹಾರ ಹಾಕ್ತಾನೆ ಅಂದ್ರೆ ಇದು ಸ್ಪಷ್ಟ ಭದ್ರತಾ ಲೋಪವೇ ಸರಿ.. ಈ ಬಗ್ಗೆ ಪೊಲೀಸ್ ಇಲಾಖೆಯೇ ಉತ್ತರಿಸಬೇಕಿದೆ