ನಟಿ ರನ್ಯಾ ರಾವ್ (Actress RANYA rao) ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ (Gold smuggling case) ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಕೆಲ ಸಚಿವರ ಹೆಸರುಗಳು ಕೇಳಿಬಂದಿದ್ದು ಕೂಡಲೇ ಸಿಎಂ ಸಿದ್ದರಾಮಯ್ಯ (Cm Siddaramaiah) ಅಲರ್ಟ್ ಆದಂತೆ ಕಾಣುತ್ತಿದೆ.

ಹೌದು, ಆರೋಪಿ ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಹೆಸರು ಪ್ರಸ್ತಾಪ ಆಗಿರುವ ಹಿನ್ನಲೆ, ಸಿಎಂ ಸಿದ್ದರಾಮಯ್ಯ ಗುಪ್ತಚರ ಇಲಾಖೆಯ ಮೊರೆ ಹೋಗಿದ್ದಾರೆ. ಗುಪ್ತಚರ ಇಲಾಖೆಯ (Intelligence) ಎಡಿಜಿಪಿಯಿಂದ (ADGP) ಸಿಎಂ ಈ ಬಗ್ಗೆ ಮಾಹಿತಿ ಕೇಳಿದ್ದಾರೆ. ಪ್ರಸ್ತುತ ಈ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಚಿವರು ಭಾಗಿಯಾಗಿದ್ದಾರಾ? ಎಂಬ ಕುರಿತು ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಈ ಕೇಡ್ ನಲ್ಲಿ ಬಿಜೆಪಿಯವರು ಸಚಿವರ ಮೇಲೆ ಆರೋಪ ಮಾಡ್ತಿದ್ದಾರೆ, ಏನಿದು ಪ್ರಕರಣ? ಆ ಚಿತ್ರನಟಿಯ ಜೊತೆಗೆ ಸಂಪರ್ಕದಲ್ಲಿ ಇದ್ದ ಸಚಿವರು ಯಾರು..? ಅಧಿವೇಶನದ ಸಮಯದಲ್ಲಿ ಈ ಪ್ರಕರಣ ಹೊರ ಬರಲು ಕಾರಣ ಏನು? ಅಂತ ಸಿಎಂ ಸಿದ್ದರಾಮಯ್ಯ ಇಂಟೆಲಿಜೆನ್ಸ್ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.