ನನಗೆ ಎಲ್ಲಾ ಧರ್ಮದವರು ಸಮಾನರು. ಯಾರನ್ನು ಭೇದ ಭಾವದಿಂದ ಯಾವತ್ತೂ ನೋಡಿಲ್ಲ. ನಾವು ಯಾರ ಮೇಲೂ, ಯಾವ ಧರ್ಮದವರ ಮೇಲೂ ದ್ವೇಷ ಅಥವಾ ಅಸೂಯೆ ಪಡಬಾರದು ಎಂದಿದ್ದಾರೆ.
ಈ ರೀತಿ ಸಮುದಾಯಗಳ ನಡುವಿನ ಅಥವಾ ಧರ್ಮಗಳ ನಡುವಿನ ದ್ವೇಷ ಹಾಗೂ ಅಸೂಯೆಯಿಂದ ನಮ್ಮ ಸಮಾಜ ಇಬ್ಬಾಗವಾಗುತ್ತದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹೇಳಿದ್ದು ನಿಮ್ಮ ಧರ್ಮ ಪಾಲಿಸಿ, ಆದರೆ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಅಂತ. ಕುವೆಂಪು ಸರ್ವಜನಾಂಗದ ತೋಟ ಮಾಡಬೇಕು ಎಂದಿದ್ದಾರೆ ಎಂದರು.

ರಾಜಕೀಯದಲ್ಲಿ ಕೆಲವರು ನನ್ನ ಮೇಲೆ ಸುಮ್ಮನೆ ಇಲ್ಲ ಸಲ್ಲದ ಆರೋಪ ಮಾಡ್ತಾರೆ. ಸಿದ್ದರಾಮಯ್ಯ ಮುಸಲ್ಮಾನರನ್ನು, ಕ್ರಿಶ್ಚಿಯನ್ ರನ್ನು ಓಲೈಕೆ ಮಾಡುತ್ತಾರೆ, ಆದ್ರೆ ಹಿಂದುಗಳನ್ನು ಮಾತ್ರ ವಿರೋಧಿಸುತ್ತಾರೆ ಅಂತ.ಆದ್ರೆ ಅದೆಲ್ಲ ಸುಳ್ಳು, ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ಮನುಷ್ಯರ ನಡುವಿನ ಅಸಮಾನತೆ ನಮ್ಮಲ್ಲಿರುವ ಜಾತಿ ಪದ್ದತಿಯಿಂದ ಬಂದಿದೆ ಎಂದು ಸಿದ್ದು ಹೇಳಿದ್ದಾರೆ.