ಜಮ್ಮು ಕಾಶ್ಮೀರದ (J &K ) ಪುಂಚ್ ಜಿಲ್ಲೆಯ ಗಡಿಯಲ್ಲಿ ಭೀಕರ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಬೆಳಗಾವಿ (Belagavi) ಮತ್ತು ಬಾಗಲಕೋಟೆಯ (Bagalakote) ಇಬ್ಬರು ಯೋಧರ ಪಾರ್ಥಿವ ಶರೀರಕ್ಕೆ ಸಿಎಂ ಸಿದ್ದರಾಮಯ್ಯ (Cm siddaramaiah) ಗೌರವ ನಮನ ಸಲ್ಲಿಸಿದ್ದಾರೆ.
ಸಾಂಬ್ರಾದ ಎಂಎಲ್‌ಐಆರ್‌ಸಿ ಸೆಂಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಹೆಚ್.ಸಿ ಮಹದೇವಪ್ಪ ಬೆಳಗಾವಿ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ, ಬಾಗಲಕೋಟೆಯ ಮಹಾಲಿಂಗಪುರದ ಮಹೇಶ್ ಮರಿಗೊಂಡ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದ್ರು.
ಆ ಬಳಿಕ ಹುತಾತ್ಮ ಯೋಧರ ಪಾರ್ಥಿವ ಶರೀರಕ್ಕೆ ಎಂಎಲ್‌ಐಆರ್‌ಸಿಯ ಬ್ರಿಗೇಡಿಯರ್ ಜಯದೀಪ ಮುಖರ್ಜಿ, ಕರ್ನಲ್ ಅರ್ಪಿತ್ ತಾಪಾ ಸಮ್ಮುಖದಲ್ಲಿ ಸೇನಾ ಸಿಬ್ಬಂದಿ ಗೌರವ ನಮನ ಸಲ್ಲಿಸಿದ್ರು. ಯೋಧರ ಕುಟುಂಬಕ್ಕೆ ಬ್ರಿಗೇಡಿಯರ್ ಜಯದೀಪ ಮುಖರ್ಜಿ ಸಾಂತ್ವನ ಹೇಳಿದ್ರು.