ಸಿಎಂ ಸಿದ್ದರಾಮಯ್ಯ (cm siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ (Dk shivakumar) ಮೂರು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿವೆ. ಚಾಮರಾಜನಗರ, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ (chamaraja nagar, mysuru, bangalore rural) ಸವಾಲಿದೆ. ತಮ್ಮ ತವರು ಕ್ಷೇತ್ರಗಳನ್ನ ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರೋದ್ರಿಂದ ಜೋಡೆತ್ತುಗಳು ತಮ್ಮ ತವರು ಕ್ಷೇತ್ರಗಳಲ್ಲಿ ನಿರಂತರ ದಂಡಯಾತ್ರೆ ಮಾಡ್ತಿದ್ದಾರೆ. ಆರ್.ಆರ್ ನಗರ (RR nagar) ಮತ್ತು ಬೆಂಗಳೂರು ದಕ್ಷಿಣದಲ್ಲಿ (Bangalore South) ಡಿಸಿಎಂ ಪ್ರಚಾರ ಮಾಡ್ತಿದ್ರೆ ಮೈಸೂರು, ಚಾಮರಾಜನಗರಕ್ಕೆ ಸಿದ್ದರಾಮಯ್ಯ ಪದೇ ಪದೇ ಭೇಟಿ ಕೊಟ್ಟು ಮತಬೇಟೆಯಾಡ್ತಿದ್ದಾರೆ.
ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳನ್ನ ಗೆಲ್ಲಲು ಸಿದ್ದು ಸರ್ಕಸ್ ಮಾಡ್ತಿದ್ದಾರೆ. ಎರಡೂ ಕ್ಷೇತ್ರಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಮುಖ್ಯಮಂತ್ರಿಯಾಗಿ ತವರು ಕ್ಷೇತ್ರಗಳನ್ನ ಗೆದ್ದರೆ ಸಿದ್ದರಾಮಯ್ಯಗೆ ಮತ್ತಷ್ಟು ಬಲ ಸಿಗಲಿದೆ. ಒಂದ್ವೇಳೆ ತವರು ಕ್ಷೇತ್ರಗಳನ್ನ ಸೋತರೆ ಮುಖ್ಯಮಂತ್ರಿಯಾಗಿರೋ ಕಾರಣ ಮುಖಭಂಗವಾಗಲಿದೆ. ಅದೇ ಲೋಕಸಭೆಯಲ್ಲಿ ಸೋಲಾದರೆ ಸಿದ್ದರಾಮಯ್ಯ ವರ್ಚಸ್ಸು ಕುಂಠಿವಾಗುವ ಭೀತಿ ಇದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನ ಗೆಲ್ಲಲೇಬೇಕಾದ ಅನಿವಾರ್ಯತೆ ಡಿಕೆಶಿಗಿದೆ. ಸಹೋದರನ ಗೆಲುವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದ್ರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಡಿಕೆ ಬ್ರದರ್ಸ್‌ಗೆ ಗೆಲುವು ಸುಲಭದ ತುತ್ತಲ್ಲ. ಸ್ವಕ್ಷೇತ್ರದಲ್ಲಿ ಸೋಲಾದ್ರೆ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿ ಕನಸು ನುಚ್ಚುನೂರಾಗಲಿದೆ. ಸೋತರೆ ತವರು ಕ್ಷೇತ್ರದ ಹಿಡಿತ ತಪ್ಪುವ ಆತಂಕವಿದೆ. ಮಾತ್ರವಲ್ಲದೆ ಹೈಕಮಾಂಡ್ ನಾಯಕರ ನಂಬಿಕೆ ಉಳಿಸಿಕೊಳ್ಳಲು ಸಹೋದರನ ಗೆಲುವು ಮುಖ್ಯವಾಗಲಿದೆ. ಆದ್ರೆ ಸಿಎಂ ಡಿಸಿಎಂಗೆ ಇದರ ಜೊತೆಗೆ ಮೂರು ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರಬೇಕಾದ ಸವಾಲಿದೆ. ಅದನ್ನು ಎಷ್ಟರ ಮಟ್ಟಿಗೆ ನಿಭಾಯಿಸ್ತಾರೆ ಕಾದು ನೋಡೋಕು.