• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಿಎಂ ಕಪ್‌ 2026ರ ಜೆರ್ಸಿ ಅನಾವರಣ

* ಫೆ. 21-22ರಂದು ನಡೆಯಲಿರುವ ವಿಶಿಷ್ಟ ಪರಿಕಲ್ಪನೆಯ ಶಟಲ್‌ ಬ್ಯಾಡ್ಮಿಂಟನ್‌ ಕ್ರೀಡಾಕೂಟ

ಪ್ರತಿಧ್ವನಿ by ಪ್ರತಿಧ್ವನಿ
January 27, 2026
in Top Story, ಕರ್ನಾಟಕ, ಜೀವನದ ಶೈಲಿ, ರಾಜಕೀಯ, ವಿಶೇಷ, ಸಿನಿಮಾ
0
ಸಿಎಂ ಕಪ್‌ 2026ರ ಜೆರ್ಸಿ ಅನಾವರಣ
Share on WhatsAppShare on FacebookShare on Telegram

*
* ಸಚಿವರು, ಶಾಸಕರು, ಐಎಎಸ್‌, ಐಪಿಎಸ್‌, ಸರ್ಕಾರಿ ನೌಕರರು, ವೈದ್ಯರು, ಚಲನಚಿತ್ರ ನಟ-ನಟಿಯರು ಸ್ಪರ್ಧಿಗಳಾಗಿ ಕಣಕ್ಕೆ

ADVERTISEMENT

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ರೀತಿಯ ಸೇವೆ ಸಲ್ಲಿಸುತ್ತಿರುವ ಮಹನೀಯರ ಕ್ರೀಡಾಸಕ್ತಿಯನ್ನು ಪ್ರದರ್ಶಿಸಲು ವೇದಿಕೆ ರೂಪಿಸುವ ಉದ್ದೇಶದೊಂದಿಗೆ ‘9 ಡ್ರೀಮ್ಸ್‌’ ಸಂಸ್ಥೆ ‘ಸಿಎಂ ಕಪ್‌ 2026’ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಆಯೋಜಿಸುತ್ತಿದ್ದು , ಕ್ರೀಡಾಕೂಟದ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು. ಮೀಡಿಯಾ ಕನೆಕ್ಟ್‌ ಸಹಯೋಗದಲ್ಲಿ ಕಿಡಾಕೂಟ ಆಯೋಜನೆಗೊಳ್ಳುತ್ತಿದೆ.

Dinesh Amin Mattu on Governors : ರಾಜಭವನವನ್ನು ಆಸ್ಪತ್ರೆ ಅಥವಾ ಪಾರ್ಕ್ ಮಾಡಿಬಿಡಿ..! | karnataka Governor

ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಡಿಜಿಪಿ ಅಲೋಕ್ ಕುಮಾರ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ತಂಡದ ಜರ್ಸಿ ಬಿಡುಗಡೆ ಮಾಡಿದರು.
ಈ ವೇಳೆ ಸಕ್ರಾ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀಕಾಂತ್ ಶೆಟ್ಟಿ, ಹಿರಿಯ ಪತ್ರಕರ್ತ ಪೊನ್ನಪ್ಪ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಇದು ಐಪಿಎಲ್ ಮಾದರಿಯಲ್ಲಿ ಆಯೋಜನೆ ಮಾಡಿರುವುದು ಬಹಳ ಖುಷಿ ನೀಡಿದೆ. ನಾನು ಬ್ಯಾಡ್ಮಿಂಟನ್‌ ಆಡುತ್ತೇನೆ. ಇದು ಕ್ರೀಡಾ ಸ್ಪೂರ್ತಿಯನ್ನು ತೋರಿಸುತ್ತದೆ. ನಮ್ಮ ಇಲಾಖೆಯವರು ಇದರಲ್ಲಿ ಆಡುತ್ತಿರುವುದು ಬಹಳ ಸಂತೋಷ ತಂದಿದೆ. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.

CM Cup 2026 :  ಸಿಎಂ ಕಪ್‌ ಪಂದ್ಯಾವಳಿ ತುಂಬಾ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು.  #pratidhvani

ಅಲೋಕ್ ಕುಮಾರ್ ಮಾತನಾಡಿ, ನಾನು ಬ್ಯಾಡ್ಮಿಂಟನ್‌ ಆಡುತ್ತೇನೆ. ಈ ಪಂದ್ಯಾವಳಿಯಲ್ಲಿ ರಾಜಕೀಯ ಮುಖಂಡರು, ಮಾಧ್ಯಮದ ಮಿತ್ರರು, ವೈದ್ಯರು, ಆಡಳಿತಾಧಿಕಾರಿಗಳು ಎಲ್ಲರ ಸಮ್ಮಿಲನ ನೋಡಿ ಬಹಳ ಖುಷಿಯಾಯಿತು. ಬಹುಶಃ ಈ ರೀತಿ ಎಲ್ಲಿಯೂ ನಡೆದಿಲ್ಲ. ಪಂದ್ಯಾವಳಿ ತುಂಬಾ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಟಿವಿ9 ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಜಿ.ವೈ. ಮಂಜುನಾಥ್‌ ಅವರ ಪರಿಕಲ್ಪನೆಯಲ್ಲಿ ಸಿಎಂ ಕಪ್‌ 2026 ಆಯೋಜಿಸಲಾಗುತ್ತಿದೆ. ಅವರಿಗೆ ದಿವ್ಯ ರಂಗೇನಹಳ್ಳಿ ಸಾರಥ್ಯದ ಮೀಡಿಯಾ ಕನೆಕ್ಟ್‌ ಸಂಸ್ಥೆ, ಸಿಎಂ ಕಪ್‌ ಸಹ ಸಂಸ್ಥಾಪಕ ಮತ್ತು ಹಿರಿಯ ಪತ್ರಕರ್ತ ಸುನೀಲ್‌ ಧರ್ಮಸ್ಥಳ ಸೇರಿದಂತೆ ಇತರ ಗೆಳೆಯರು ಸಿಎಂ ಕಪ್‌ 2026ರ ಆಯೋಜನೆಗೆ ಸಹಕಾರ ನೀಡಿದ್ದಾರೆ.
ರಾಜ್ಯದಲ್ಲಿಯೇ ವಿಭಿನ್ನ ಮತ್ತು ವಿಶೇಷ ರೀತಿಯಲ್ಲಿ ಸಿಎಂ ಕಪ್‌ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿರುವ ಜನಪ್ರತಿನಿಧಿಗಳು, ಐಎಎಸ್‌, ಐಪಿಎಸ್‌, ಕೆಎಎಸ್‌, ಪೊಲೀಸ್‌, ಸಚಿವಾಲಯದ ಅಧಿಕಾರಿಗಳು ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಸ್ಪರ್ಧಿಗಳಾಗಿ ಶಟಲ್‌ ಕೋರ್ಟ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಆಮೂಲಕ ಸಿಎಂ ಕಪ್‌ ಒಂದು ಕ್ಷೇತ್ರ ಆಟಗಾರರಿಗೆ ಮಾತ್ರ ಸೀಮಿತವಾಗಿರದೆ, ಎಲ್ಲ ಕ್ಷೇತ್ರದವರನ್ನು ಕ್ರೀಡೆಯಲ್ಲಿ ತೊಡಗಿಸುವ ದೊಡ್ಡ ಸಾಹಸವಾಗಿದೆ.

8 ತಂಡಗಳ ನಡುವೆ ಹಣಾಹಣಿ:
ಸಿಎಂ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಕ್ರೀಡಾಕೂಟದ ಮತ್ತೊಂದು ವಿಶೇಷವೆಂದರೆ ಪ್ರತಿ ಕ್ಷೇತ್ರದವರು ಒಂದೇ ತಂಡದಲ್ಲಿ ಆಡುತ್ತಿಲ್ಲ. ಬದಲಿಗೆ, ಎಲ್ಲರೂ ಒಂದೊಂದು ತಂಡದಿಂದ ಒಟ್ಟಾಗಿ ಕಣಕ್ಕಿಳಿಯುತ್ತಿದ್ದಾರೆ. ಒಟ್ಟು 8 ಫ್ರಾಂಚೈಸಿ ತಂಡಗಳಿರಲಿದ್ದು, ಪ್ರತಿ ತಂಡಕ್ಕೂ ಪ್ರತ್ಯೇಕ ಮಾಲೀಕರಿರಲಿದ್ದಾರೆ. ಜತೆಗೆ ಪ್ರತಿ ತಂಡದಲ್ಲೂ ಪುರುಷ ಮತ್ತು ಮಹಿಳಾ ಆಟಗಾರ್ತಿಯರಂತೆ ಒಟ್ಟು 15 ಆಟಗಾರರಿರಲಿದ್ದಾರೆ. ಹಾಗೆಯೇ, ಪ್ರತಿ ತಂಡದಲ್ಲೂ ಜನಪ್ರತಿನಿಧಿಗಳು, ಐಎಎಸ್‌, ಐಪಿಎಸ್‌, ಕೆಎಎಸ್‌, ಪೊಲೀಸ್‌, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಚಲನಚಿತ್ರ ನಟ-ನಟಿಯರು ಮತ್ತು ಪತ್ರಕರ್ತ ಆಟಗಾರರಿರಲಿದ್ದಾರೆ.
ಪ್ರತಿ ತಂಡಕ್ಕೂ ಒಬ್ಬರು ಕ್ಯಾಪ್ಟನ್‌, ಒಬ್ಬರು ವೈಸ್‌-ಕ್ಯಾಪ್ಟನ್‌ ಇರಲಿದ್ದಾರೆ. ಅವರ ಜತೆಗೆ ಚಲನಚಿತ್ರ ರಂಗದ ಒಬ್ಬರು ಐಕಾನ್‌ ಪ್ಲೇಯರ್‌ ಆಗಿರಲಿದ್ದಾರೆ. ಪ್ರತಿ ತಂಡಕ್ಕೂ ತಲಾ ಒಬ್ಬರು ಶಾಸಕರು (ಜನಪ್ರತಿನಿಧಿ), ಐಎಎಸ್‌, ಐಪಿಎಸ್‌, ಪೊಲೀಸ್‌ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ವೈದ್ಯರು, ಮಾಧ್ಯಮ ಪ್ರತಿನಿಧಿ ಹಾಗೂ ಚಲನಚಿತ್ರ ರಂಗದವರು ಆಟಗಾರರಾಗಿ ಆಯ್ಕೆ ಮಾಡಲಾಗಿದೆ. ಪಂದ್ಯಾವಳಿಯು ಮೆನ್ಸ್‌ ಸಿಂಗಲ್ಸ್‌, ಮೆನ್ಸ್ ಡಬಲ್ಸ್‌, ವುಮೆನ್‌ ಸಿಂಗಲ್ಸ್‌, ವುಮೆನ್ಸ್ ಡಬಲ್ಸ್‌, ಮಿಕ್ಸೆಡ್‌ ಡಬಲ್ಸ್ ಮತ್ತು ಪವರ್‌ ಡಬಲ್ಸ್‌ ಕೆಟಗರಿಯಲ್ಲಿ ನಡೆಯಲಿದೆ. ಇದರ ಜತೆಗೆ ಗೇಮ್‌ ಚೇಂಜರ್‌ ಎನ್ನುವ ಹೊಸ ಪರಿಕಲ್ಪನೆಯನ್ನೂ ಕ್ರೀಡಾಕೂಟದಲ್ಲಿ ಪರಿಚಯಿಸಲಾಗುತ್ತಿದೆ. ಕ್ರೀಡಾಕೂಟದ ವಿಜೇತ ತಂಡಕ್ಕೆ 7 ಲಕ್ಷ ರೂಪಾಯಿ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.

ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ರಾಜ್ಯಪಾಲ ಥಾವರಚಂದ್ ಗೆಹಲೋಥ್‌, ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಸನ್ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಫೆ. 21-22ರಂದು ಕ್ರೀಡಾಕೂಟ:
ಸಿಎಂ ಕಪ್‌ 2026 ಕ್ರೀಡಾಕೂಟವು ಫೆ. 21 (ಶನಿವಾರ) ಮತ್ತು ಫೆ. 22 (ಭಾನುವಾರ)ರಂದು ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ನಲ್ಲಿ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಭಾನುವಾರ (ಜ. 25)ದಂದು ಅರಮನೆ ಮೈದಾನದ ವೈಟ್‌ಪೆಟಲ್ಸ್‌ನಲ್ಲಿ ಆಟಗಾರರ ಆಯ್ಕೆ ಮತ್ತು ಜೆರ್ಸಿ ಅನಾವರಣ ಮಾಡಲಾಯಿತು.
ಜಿಯೋ
—-
ತಂಡದ ಮಾಲೀಕರು:
ಪ್ರಸನ್ನ—— (The Elite Badminton),
ರೂಪಾ— (Esthetic Attacker’s),
ನರಸಿಂಹಮೂರ್ತಿ—- (Telicom sky Stricker), ಲಿಂಗರಾಜು—– (Inspire challenger’s),
ಕೆಜಿಎಫ್‌ ಬಾಬು—- (KGF Strickers ),
ಪಳನಿ ಪ್ರಕಾಶ್‌—- (Team cafe divyyam),
ಆನಂದ್‌—- (Pro Win pancher),
ಯೋಗೀಶ್‌—-(Sharadha Strickers)

Tags: cm cupcm cup 2026cm cup 2026 karnatakacm cup 2026 karnataka auctioncm cup 2026 karnataka auction and jersey launch eventcm cup 2026 karnataka launchcm cup 2026 launchcm cup 2026 launch eventcm cup 2026 launch eventscm cup karnataka 2026cm cup karnataka 2026 launchkarnataka cm cup 2026karnataka newskarnataka state games
Previous Post

Daily Horoscope January 27: ಇಂದು ಶಾಂತಿಯಿಂದ ಇರಬೇಕಾದ ರಾಶಿಗಳಿವು..!

Next Post

BENGALURU: ಮನೆ ಬಾಡಿಗೆಗೆ ಕೊಡುವವರಿಗೆ ಪೊಲೀಸರಿಂದ ವಾರ್ನಿಂಗ್: ಗಮನಿಸಲೇಬೇಕಾದ ಮಾಹಿತಿ ಇಲ್ಲಿದೆ

Related Posts

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!
ಇದೀಗ

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
January 27, 2026
0

ಬೆಂಗಳೂರು : ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರದಲ್ಲೇ ಸಭೆ ಕರೆದು ಚರ್ಚೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ವಿಧಾನಸಭೆಯಲ್ಲಿಂದು ಗಮನ...

Read moreDetails
ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

January 27, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

January 27, 2026
ಕೋರ್ಟ್‌ಗೆ ಹಾಜರಾದ ರಾಜೀವ್‌ ಗೌಡ : ಕೈ ಮುಖಂಡನಿಗೆ ಜೈಲಾ? ಬೇಲಾ..?

ಕೋರ್ಟ್‌ಗೆ ಹಾಜರಾದ ರಾಜೀವ್‌ ಗೌಡ : ಕೈ ಮುಖಂಡನಿಗೆ ಜೈಲಾ? ಬೇಲಾ..?

January 27, 2026
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

January 27, 2026
Next Post
BENGALURU: ಮನೆ ಬಾಡಿಗೆಗೆ ಕೊಡುವವರಿಗೆ ಪೊಲೀಸರಿಂದ ವಾರ್ನಿಂಗ್: ಗಮನಿಸಲೇಬೇಕಾದ ಮಾಹಿತಿ ಇಲ್ಲಿದೆ

BENGALURU: ಮನೆ ಬಾಡಿಗೆಗೆ ಕೊಡುವವರಿಗೆ ಪೊಲೀಸರಿಂದ ವಾರ್ನಿಂಗ್: ಗಮನಿಸಲೇಬೇಕಾದ ಮಾಹಿತಿ ಇಲ್ಲಿದೆ

Recent News

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ
Top Story

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 27, 2026
ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌
Top Story

ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ಹಣ ದರೋಡೆ: 1.37 ಕೋಟಿ ದೋಚಿ ಸಿಬ್ಬಂದಿ ಎಸ್ಕೇಪ್‌

by ಪ್ರತಿಧ್ವನಿ
January 27, 2026
ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್
Top Story

ಇನ್ನುಂದೆ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿಸಿಎಂ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 27, 2026
400 ಕೋಟಿ ರೂ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಹಾರಾಷ್ಟ್ರದಲ್ಲಿ ಚಾಲಕರ ಬಂಧನ..?
Top Story

400 ಕೋಟಿ ರೂ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಮಹಾರಾಷ್ಟ್ರದಲ್ಲಿ ಚಾಲಕರ ಬಂಧನ..?

by ಪ್ರತಿಧ್ವನಿ
January 27, 2026
Yatnal: ಅಕ್ರಮ ಬಾಂಗ್ಲಾ ವಲಸಿಗರಿಂದ ಉಗ್ರ ಸಂಘಟನೆಗಳಿಗೆ ನೆರವು-ಅಮಿತ್ ಶಾಗೆ ಯತ್ನಾಳ್ ಪತ್ರ
Top Story

Yatnal: ಅಕ್ರಮ ಬಾಂಗ್ಲಾ ವಲಸಿಗರಿಂದ ಉಗ್ರ ಸಂಘಟನೆಗಳಿಗೆ ನೆರವು-ಅಮಿತ್ ಶಾಗೆ ಯತ್ನಾಳ್ ಪತ್ರ

by ಪ್ರತಿಧ್ವನಿ
January 27, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಡಿ.ಕೆ. ಶಿವಕುಮಾರ್ ಗುಡ್‌ ನ್ಯೂಸ್..!

January 27, 2026
ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

ಟ್ರಂಪ್‌ಗೆ ಸೆಡ್ಡು ಹೊಡೆದ ಭಾರತ : ಯುರೋಪ್‌ ಒಕ್ಕೂಟದೊಂದಿಗೆ ಮೋದಿಯ ಒಪ್ಪಂದಗಳೇನು..?

January 27, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!