
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪರಿಸ್ಥಿತಿ ಬಂದಿಲ್ಲ. ಆದರೂ ಸ್ವಾಮೀಜಿಗಳು ಸಾರ್ವಜನಿಕವಾಗಿ ಈ ವಿಷಯದಲ್ಲಿ ಮಾತನಾಡುತ್ತಿರುವುದು ಆಶ್ಚರ್ಯಕರ ಸಂಗತಿ. ಇದು ಸರಿಯೋ ಅಥವಾ ತಪ್ಪೋ ಎಂಬುದು ಸ್ವಾಮಿಜಿಗಳೇ ನಿರ್ಧಾರ ಮಾಡಬೇಕು. ಬೇಕಾದರೇ ಅವರೇ ಪಕ್ಷದ ವರಿಷ್ಠರ ಜತೆ ಮಾತನಾಡಲಿ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ (Chaluvaraya Swamy)ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಹೈಕಮಾಂಡ್ ಭದ್ರವಾಗಿದೆ. ಸಿಎಂ ಬದಲಾವಣೆ ವಿಷಯ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಿದ್ಧರಾಮಯ್ಯ ಅವರೇ ಹೇಳಿದ್ದಾರೆ.





