ನನ್ನ ಸರ್ಕಾರ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ಸಹಿಸುವುದಿಲ್ಲ. ನೀವೆಲ್ಲರೂ ನನ್ನ( ರಡಾರ್) ಕಣ್ಗಾವಲಿನಲ್ಲಿ ಇದ್ದೀರಿ. ನಿಮ್ಮೆಲ್ಲರನ್ನು ನಾನು ಗಮನಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಅವರು ಇಂದು ಬೆಂಗಳೂರಿನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳ ಸಭೆಯಲ್ಲಿ ಸಿಇಒಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ನೀವೆಲ್ಲರೂ ಯುವಕರಿದ್ದೀರಿ. ಒಳ್ಳೆಯ ಕೆಲಸ ಮಾಡಲು ದೇವರು ನಿಮಗೆ ಇದೊಂದು ಅವಕಾಶ ನೀಡಿದ್ದಾನೆ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಬಡವರ, ದೀನ ದಲಿತರ ಪರವಾದ ಕೆಲಸಗಳನ್ನು ಮಾಡಿ. ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದಲ್ಲಿ ನಿಮ್ಮ ಕೊಡುಗೆಯನ್ನು ನೀಡಿ. ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡೋಣ. ನಾನು ನಿಮ್ಮ ಜೊತೆ ಇದ್ದೇನೆ. ಆದರೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಭ್ರಷ್ಟಾಚಾರವನ್ನು ಎಂದೂ ಸಹಿಸುವುದಿಲ್ಲ. ಅದಕ್ಕೆ ಅವಕಾಶವನ್ನೂ ಮಾಡಿಕೊಡುವುದಿಲ್ಲ. ಈ ಮಾತುಗಳನ್ನು ನೀವು ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ.
ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರ್ ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಶಾಲಾ ಮಕ್ಕಳಿಗೆ, ಮಹಿಳಾ ಸಬಲೀಕರಣ, ಸ್ತ್ರೀಶಕ್ತಿ ಸಂಘಗಳಿಗೆ ವಿಶೇಷ ಕಾರ್ಯಕ್ರಮ ಇವೆಲ್ಲ ಪ್ರಮುಖ ಕಾರ್ಯಕ್ರಮಗಳು. ಸಾರ್ವಜನಿಕರಿಗೆ ಒಳಿತು ಮಾಡುವ ನಿರ್ಧಾರಗಳನ್ನು ಧೈರ್ಯವಾಗಿ ತೆಗೆದುಕೊಳ್ಳಿ. ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಪುನರ್ ಸ್ಥಾಪಿಸೋಣ. ನಿಮ್ಮ ಕಾರ್ಯವೈಖರಿಯನ್ನು ಗಮನಿಸಲಾಗುತ್ತದೆ. ಸಾರ್ವಜನಿಕರು ತರುವ ಅರ್ಜಿಗಳಿಗೆ ಪರಿಹಾರ ಕೊಡುವ ಕೆಲಸವಾಗಬೇಕು. ನಿಮ್ಮ ಕಾರ್ಯದಲ್ಲಿ ನಿಖರತೆ ಇರಲಿ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸೂಚಿಸಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆ :
- ಈ ಯೋಜನೆಯಡಿ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ತಡವಾಗಬಾರದು. ಸಾಮಾಗ್ರಿಗಳ ಶೀಘ್ರ ಪಾವತಿಗೆ ಕೇಂದ್ರ ಸರ್ಕಾರದೊಂದಿಗೆ ಸಂಯೋಜಿಸಬೇಕು.
- ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಂಪೌಂಡ್ ಗೋಡೆ, ಅಂಗನವಾಡಿಗಳ ನಿರ್ಮಾಣಗಳಿಗೆ ಒತ್ತು ನೀಡಬೇಕು.
- ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
- ಏಪ್ರಿಲ್ ಮಾಹೆಯÀಲ್ಲಿ ಯೋಜನೆಯಡಿ ಶೂನ್ಯ ಮಾನವ ದಿನಗಳನ್ನು ಸೃಜನೆ ಮಾಡಿರುವ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿಗಳಿಗೆ ಸಿ.ಇ.ಒಗಳು ಭೇಟಿ ನೀಡಬೇಕು.
- ಯೋಜನೆಯಡಿ ಕೈಗೊಂಡಿರುವ ಆಸ್ತಿಗಳ ಜಿಯೋ ಟ್ಯಾಗಿಂಗ್ ಆಗಿಲ್ಲದ ಜಿಲ್ಲೆಗಳಲ್ಲಿ ಕೂಡಲೇ ಕ್ರಮ ಕೈಗೊಳ್ಳುವುದು.
- ಮೂರು ವರ್ಷಗಳ ಹಿಂದೆ ಸಾಮಾಗ್ರಿಗಳ ಬಿಲ್ಲುಗಳಾಗುವುದು ವಿಳಂಬವಾಗಿ ಬಾಕಿ ಉಳಿದುಕೊಂಡು ಬಂದಿವೆ. ಈ ಕುರಿತು ಕ್ರಮ ವಹಿಸಬೇಕು
- ಪಿಡಿಒ ಹಾಗೂ ಅವರ ಕೆಳಗಿನ ಹಂತದ ಅಧಿಕಾರಿಗಳಿಗೆ ರಾಷ್ಟ್ರೀಯ ಮೊಬೈಲ್ ಮೇಲ್ಚಿಚಾರಣಾ ವ್ಯವಸ್ಥೆ (ಎನ್.ಎಂ.ಎಂ.ಎಸ್) ತಂತ್ರಜ್ಞಾನದ ಕುರಿತು ತಜ್ಞರಿಂದ ಕಾರ್ಯಾಗಾರ ಏರ್ಪಡಿಸುವುದು.
- ಸಾಮಾಜಿಕ ಪರಿಶೋಧನೆ ವಸೂಲಾತಿಯಡಿ ವರದಿ ಮಾಡಲಾಗಿರುವ ಪ್ರಕರಣಗಳ ಪೈಕಿ ದುರುಪಯೋಗವಾಗಿರುವ ಒಟ್ಟು 761 ಕೋಟಿ ರೂ.ಗಳ ಪೈಕಿ 15.54ಕೋಟಿ ರೂ.ಗಳನ್ನು ವಸೂಲಾತಿ ಮಾಡಲಾಗಿದೆ. ಕೇಂದರ ಸರ್ಕಾರವೂ ಇದಕ್ಕೆ ಹೆಚಿನ ಮಹತ್ವ ನೀಡಿದೆ. ಸಾರ್ವಜಿಕರಿಂದಲೇ ಆಗುವ ಸಾಮಾಜಿಕ ಪರಿಶೋಧನೆಯು ಅನುದಾನ ಮತ್ತು ಕಾಮಗಾರಿಗಳ ಗುಣಮಟ್ಟದಲ್ಲಿ ದುರ್ಬಳಕೆಯಾಗುವುದನ್ನು ತಡೆಯುವ ಸಾಧನವಾಗಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಲು ಸೂಚನೆ.
ಘನ ತ್ಯಾಜ್ಯ ನಿರ್ವಹಣೆ:
- ಬೂದು ನೀರು ನಿರ್ವಹಣೆಗಾಗಿ ವೈಯಕ್ತಿಕ ಮತ್ತು ಸಮುದಾಯದ ಇಂಗುಗುಂಡಿಗಳನ್ನು ನಿರ್ಮಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಿ. 2 ಕಿ.ಮೀ ಹರಿಯುವ ನೀರು ತನ್ನಷ್ಟಕ್ಕೆ ಆಕ್ಸಿಡೇಷನ್ ಆಗುತ್ತದೆ. ನೀರಿನ ಆಕ್ಸಿಡೇಷನ್ ಬಹಳ ಮುಖ್ಯ.
- ಸಾಮಾನ್ಯ ಯೋಜನೆಯಲ್ಲಿ ಇಲ್ಲದ ಯೋಜನೆಗಳನ್ನು ಎಂ.ಎನ್. ನರೇಗಾ ಯೋಜನೆಯಡಿ ಕೈಗೊಳ್ಳಿ. ಎಲ್ಲಾ ಗ್ರಾಮಗಳಲ್ಲಿ ಚರಂಡಿಗಳಿಗೆ ಅನುದಾನ ಲಭ್ಯವಿಲ್ಲದಿದ್ದಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಿ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷಿಯಿಂದ ಈ ಕ್ರಮಗಳು ಅತಿ ಮುಖ್ಯ. ಆರೋಗ್ಯ, ಘನ ತ್ಯಾಜ್ಯ ನಿರ್ವಹಣೆ ಹಾಗೂ ಚರಂಡಿಗಳ ನಿರ್ವಹಣೆಗೆ ಆದ್ಯತೆ ನೀಡುವುದು
ಅಮೃತ ಗ್ರಾಮ ಪಂಚಾಯತಿ ಯೋಜನೆ:
- ಜೂನ್ 30 ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದು. ಘನತ್ಯಾಜ್ಯ ನಿರ್ವಹಣೆಯಿಂದ ಹಿಡಿದು ಗ್ರಂಥಾಲಯದವರೆಗೆ ನಗರ ಪ್ರದೇಶದಲ್ಲಿರುವ ಎಲ್ಲಾ ಸೌಲಭ್ಯಗಳು ಯೋಜನೆಯಡಿ ಬರುವ 750 ಗ್ರಾಮಗಳಲ್ಲಿ ದೊರಕಬೇಕು.
- ಎಲ್ಲಾ ಗ್ರಾಮಗಳಲ್ಲಿಯೂ ಬೀದಿ ದೀಪಗಳನ್ನು ಅಳವಡಿಸಲು ಇಂಧನ ಇಲಾಖೆಯ ಸಹಕಾರ ಪಡೆಯುವುದು.
- ಹಂತ-2ರಲ್ಲಿ ಗ್ರಾಮ ಪಂಚಾಯತಿಗಳ ಆಯ್ಕೆ ಪ್ರಕ್ರಿಯೆಯನ್ನು ಮೇ-31ರೊಳಗೆ ಪೂರ್ಣಗೊಳಿಸುವುದು.
ಕೆರೆಗಳ ಸಮಗ್ರ ಅಭಿವೃದ್ಧಿ:
- ಪ್ರಧಾನಿಮಂತ್ರಿಗಳ ಅಮೃತ ಸರೋವರ್ ಯೋಜನೆಯಡಿ ಪ್ರತಿ ಜಿಲ್ಲೆಯ 75 ಕೆರೆಗಳನ್ನು ಪುನಶ್ಚೇತನಗೊಳಿಸಲು ಅವಕಾಶವಿದೆ. ಇವುಗಳನ್ನು ಆದ್ಯತ ಮೇರೆಗೆ ಕೈಗೊಳ್ಳುವುದುದು.
2.ಇ-ಬೆಳಕು ಪ್ರಮುಖ ಕಾರ್ಯಕ್ರಮವಾಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.
- 15ನೇ ಹಣಕಾಸು ಆಯೋಗ (ಜಿಲ್ಲಾ ಪಂಚಾಯಿತಿ) ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.
- ಕೆಲಸ ಪೂರ್ಣಗೊಳಿಸಿ ಬಿಲ್ ಕ್ಲೇಮು ಮಾಡಬೇಕು. ಇಲ್ಲವಾದರೆ ಆರ್ಥಿಕ ಪ್ರಗತಿ ಆಗಿಲ್ಲವೆಂದೇ ಪರಿಗಣಿಸಲಾಗುವುದು.
- 14ನೇ ಹಣಕಾಸು ಆಯೋಗದಡಿ ಖರ್ಚಾಗಡೆ ಬಾಕಿ ಉಳಿದಿರುವ ಅನುದಾನವನ್ನು ಕುಡಿಯುವ ನೀರು, ಶಾಲಾ ಕಟ್ಟಡ, ಅಂಗನವಾಡಿ ನಿರ್ಮಾಣಗಳಿಗೆ ಅನುದಾನವನ್ನು ಬಳಸಿಕೊಂಡು ವೆಚ್ಚ ಮಾಡುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ:
- ಗರ್ಭಿಣಿಯರಿಗೆ ಎಎನ್ ಸಿ ತಪಾಸಣೆ ಕಾರ್ಯಕ್ರಮ ಶೇ.100 ಪ್ರಗತಿ ಆಗಬೇಕು. ಕಾರ್ಯಕ್ರಮದ ಪ್ರಗತಿಯ ಕುರಿತು ತಿಂಗಳಿಗೊಮ್ಮೆ ಸಿಇಓಗಳು ಪ್ರಗತಿಪರಿಶೀಲನೆ ಮಾಡಬೇಕು.
- ಸಿಸೇರಿಯನ್ ಶಸ್ತ್ರ ಚಿಕಿತ್ಸೆ ದರಕ್ಕೆ ಸಂಬಂಧಿಸಿದಂತೆ ಯಾವ ಜಿಲ್ಲೆಗಳಲ್ಲಿ ಸಿಸೇರಿಯನ್ ಪ್ರಮಾಣ ಹೆಚ್ಚಿದ್ದಲ್ಲಿ ಆರೋಗ್ಯ ಇಲಾಖೆಯಿಂದ ಪರಿಶೀಲಿಸುವುದು.
- ಲಕ್ಷ್ಯ, ಕಾಯಕಲ್ಪ, ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಪ್ರಮಾಣಪತ್ರ ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು.
- ಶಿಶು ಮರಣ ಪ್ರಮಾಣ ರಾಜ್ಯದ ಸರಾಸರಿ ಶೇ. 23 ರಷ್ಟಿದೆ. ಎಂಎಂಆರ್, ಐಎಂಆರ್ ಪರಿಶೋಧನೆಯನ್ನು ಸಿಇಓ ಹಾಗೂ ಜಿಲ್ಲಾಧಿಕಾರಿಗಳು ಕೈಗೊಳ್ಳುವುದು. ಈ ವಿಷಯವನ್ನು ಖುದ್ದಾಗಿ ಪರಿಶೀಲಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಸಿಎಂ ಡ್ಯಾಶ ಬೋರ್ಡ್ ನಲ್ಲಿ ಅಳವಡಿಸಲು ಸೂಚನೆ ನೀಡಿದರು.
ಆಯುಷ್ಮಾನ್ ಭಾರತ
- ಅಸಾಂಕ್ರಾಮಿಕ ರೋಗ ಕಾರ್ಯಕ್ರಮದಡಿ ನೋಂದಣಿ ಕಾರ್ಯಕ್ರಮವನ್ನು ಅಭಿಯಾನ ಮಾದರಿಯಲ್ಲಿ ಕೈಗೊಳ್ಳುವುದು.
- ಆಸ್ಪತ್ರೆಗಳಲ್ಲಿ ವೈದ್ಯರ ಹಾಜರಾತಿ ಬಗ್ಗೆ ಕಠಿಮ ಕ್ರಮ ಕೈಗೊಳ್ಳಬೇಕು.
- ಜಿಲ್ಲಾವಾರು ಆರೋಗ್ಯ ಕ್ಷೇಮ ಕೇಂದ್ರದ ಕಾಮಗಾರಿಯು ಪ್ರಧಾನ ಮಂತ್ರಿ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅನುಷ್ಠಾನಕ್ಕೆ ಕ್ರಮ ವಹಿಸುವುದು.
ವಸತಿ:
- ಗ್ರಾಮೀಣ ಪ್ರದೇಶದಲ್ಲಿ ಮನೆಗಳ ನಿರ್ಮಾಣದ ಗುರಿ, ಫಲಾನುಭಿವಗಳ ಆಯ್ಕೆಗೆ ಗಡುವು ನೀಡುವುದು. ಈ ವರ್ಷದಲ್ಲಿಯೇ ಅನುಷ್ಠಾನವಾಗಬೇಕು.
- ಫಲಾನುಭವಿಗಳ ಆಯ್ಕೆ ಪಟ್ಟಿ ಮೂರುಹಂತದಲ್ಲಿ ಪರಿಶೀಲನೆಯಾಗುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿಯಿಂದ ತಾಲ್ಲೂಕು ಪಂಚಾಯಿತಿಗೆ ಆಯ್ಕೆ ಪಟ್ಟಿ ಬಂದ ನಂತರ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೇರವಾಗಿ ಹೋಗಬೇಕೆಂದು ಸೂಚಿಸಿದರು.