ಉಡುಪಿ : ಸಿಎಂ ಬಸವರಾಜ ಬೊಮ್ಮಾಯಿ ಚುನಾವಣೆ ಟೈಮ್ನಲ್ಲಿ ಸಿನಿಮಾ ರಂಗದ ಜೊತೆಯಲ್ಲಿ ಸಖತ್ ಕ್ಲೋಸ್ ಆಗಿರುವಂತೆ ಕಾಣ್ತಿದೆ. ಕಳೆದ ವಾರ ಸುದೀಪ್ರನ್ನು ತಮ್ಮ ಸ್ಟಾರ್ ಪ್ರಚಾರಕರನ್ನಾಗಿ ಮಾಡಿಕೊಂಡ ಬೆನ್ನಲ್ಲೇ ಇದೀಗ ಸಿಎಂ ಬೊಮ್ಮಾಯಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಗೆ ಗಾಳ ಹಾಕಿದ್ರಾ ಎಂಬ ಅನುಮಾನ ಮೂಡಿದೆ.

ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದು ಈ ವೇಳೆ ಕಾಂತಾರ ನಟ ರಿಷಭ್ ಶೆಟ್ಟಿಯನ್ನು ಭೇಟಿಯಾಗಿದ್ದಾರೆ. ಸಿಎಂ ಬೊಮ್ಮಾಯಿಯನ್ನು ಕಂಡೊಡನೆಯೇ ರಿಷಭ್ ಶೆಟ್ಟಿ ಅವರ ಪಾದಕ್ಕೆರಗಿ ನಮಸ್ಕಾರ ಮಾಡುವ ಮೂಲಕ ಆಶೀರ್ವಾದ ಪಡೆದರು .
ಕಳೆದ ವಾರವಷ್ಟೇ ನಟ ಸುದೀಪ್ ಬೊಮ್ಮಾಯಿ ಪರ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ನಟ ರಿಷಭ್ ಶೆಟ್ಟಿ ಕೂಡ ಸಿಎಂ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿದೆ .