ಬೆಳಗಾವ ಜಿಲ್ಲೆಯಲ್ಲಿ ಚಾಲಕನ ಇಯಂತ್ರಣ ತಪ್ಪಿ ಕ್ರೂಸರ್ ನಾಲೆಗೆ ಬಿದ್ದು 8 ಮಂದಿ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಮೃತರು ರೈಲ್ಷೆ ಇಲಾಖೆಯಲ್ಲಿ ಕೂಲಿ ಕಾರ್ಮಿಕರಾಗಿದ್ದು ಕೂಲಿ ಕೆಲಸಕ್ಕಾಗಿ ಬೆಳಗಾವಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಅಪಘಾತದ ವಿಚಾರವಾಗಿ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನ ಘೋಷಿಸಿದ್ದಾರೆ ಹಾಗು ಗಾಯಾಳುಗಳ ಸಂಪೂರ್ಣ ಚಿಕಿತ್ಸ ವೆಚ್ಚಭರಿಸುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಡಳತದಿಂದ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ ಹಾಗು ಕಾರ್ಮಿಕ ಇಲಾಖೆಯಿದ ತಲಾ 5 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಘೋಷಿಸಲಾಗಿದೆ.











