ಕಲಬುರಗಿಯ (Kalaburgi) ಗುತ್ತಿಗೆದಾರ ಸಚಿನ್ (Sachin) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಸಿಐಡಿ (CID) ತಂಡ ಕಲಬುರಗಿಯಲ್ಲಿ ತನಿಖೆ ನಡೆಸಲಿದೆ. ಕಲಬುರಗಿಯ ಕಪನೂರ್ ಬಳಿಯೇ ಸಚಿನ್ ಕಚೇರಿ, ರೂಂ ಮಾಡಿಕೊಂಡಿದ್ದ.. ಕಳೆದ 2 ತಿಂಗಳ ಹಿಂದೆ ಖಾಲಿ ಮಾಡಿ ಬೀದರ್‌ನಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿನ್ನಲೆ ಸಿಐಡಿ ಡಿವೈಎಸ್‌ಪಿ ಸುಲೇಮಾನ್ ತಹಶಿಲ್ದಾರ್ ನೇತೃತ್ವದ 6 ಜನರ ತಂಡ ಇಂದು ಬೀದರ್‌ನಿಂದ ಕಲಬುರಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಇದರ ಜೊತೆಗೆ ಸಚಿನ್ ವಾಸವಿದ್ದ ಕಟ್ಟಡದ ಮಾಲೀಕರಿಂದ, ಅಕ್ಕಪಕ್ಕದವರಿಂದಲೂ ಮಾಹಿತಿ ಕಲೆ ಹಾಕಲಿದ್ದಾರೆ. ಇನ್ನು ಇದೇ ವೇಳೆ ಆರೋಪಿ ರಾಜು ಕಪನೂರ್ ಮನೆಗೂ ಭೇಟಿ ನೀಡುವ ಸಾಧ್ಯತೆಯಿದೆ.