ಬಳ್ಳಾರಿಯ ಬಿಮ್ಸ್ (BIMS) ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಲ್ಲೇ ಇದೀಗ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ (Chitradurga Hospital) ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ಚಿತ್ರದುರ್ಗದ ಜಾಗನೂರಹಟ್ಟಿ ಗ್ರಾಮದ ರೋಜಮ್ಮ (25) ಮೃತ ಬಾಣಂತಿ.
ಬಾಣಂತಿಯ ಈ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಬಾಣಂತಿಯ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯೆ ಡಾ.ರೂಪಶ್ರೀ (Dr.roopa Shree) ಈ ಮಹಿಳೆಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು.
ಆದ್ರೆ ಹೆರಿಗೆ ನಂತರ ರೋಜಮ್ಮ ಮನೆಗೆ ಕೂಡ ತೆರಳಿದ್ದರು. ಆದರೆ ಸ್ವಲ್ಪ ಕಾಲದ ನಂತರ ಹೊಟ್ಟೆಯಲ್ಲಿ ಹೊಲಿಗೆ ಹಾಕಿದ್ದ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಹೀಗೆ ದಿನೇ ದಿನೇ ಈ ಹೊಲಿಗೆ ಗಾಯದ ಸೋಂಕು ಹೆಚ್ಚಾದ ಕಾರಣ ಕೊನೆಗೆ ಬಾಣಂತಿ ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.